ದೇಶದ ಮೂಲ ಬಚ್ಚಿಡುವ ಇ-ಕಾಮರ್ಸ್‌ ಕಂಪನಿಗಳಿಗೆ 1 ಲಕ್ಷ ದಂಡ, ಜೈಲು ಶಿಕ್ಷೆ!

ದೇಶದ ಮೂಲ ಬಚ್ಚಿಡುವ ಇ-ಕಾಮರ್ಸ್‌ ಕಂಪನಿಗಳಿಗೆ 1 ಲಕ್ಷ ದಂಡ, ಜೈಲು ಶಿಕ್ಷೆ| ಮಾರುಕಟ್ಟೆಸಂಸ್ಥೆಗಳು ವಿದೇಶದಿಂದ ಆಮದು ಮಾಡಿಕೊಂಡ ವಸ್ತುಗಳ ಮೇಲೆ ದೇಶದ ಮೂಲ

Penalty of upto Rs 1 lakh or jail term if e commerce companies fail to declare country of origin on portal

ನವದೆಹಲಿ(ಜು.11): ಇ- ಕಾಮರ್ಸ್‌ ಕಂಪನಿಗಳು ಮತ್ತು ಮಾರುಕಟ್ಟೆಸಂಸ್ಥೆಗಳು ವಿದೇಶದಿಂದ ಆಮದು ಮಾಡಿಕೊಂಡ ವಸ್ತುಗಳ ಮೇಲೆ ದೇಶದ ಮೂಲವನ್ನು ನಮೂದಿಸದೆ ಇದ್ದರೆ 1 ಲಕ್ಷ ರು.ವರೆಗೆ ದಂಡ ಹಾಗೂ ಜೈಲು ಶಿಕ್ಷೆ ವಿಧಿಸಲು ಸರ್ಕಾರ ಉದ್ದೇಶಿಸಿದೆ.

ಗ್ರಾಹಕ ರಕ್ಷಣೆ ಕಾಯ್ದೆಯಲ್ಲಿರುವ ಅವಕಾಶವನ್ನು ಬಳಸಿಕೊಂಡು ಗ್ರಾಹಕ ವ್ಯವಹಾರಗಳ ಸಚಿವಾಲಯ ಈ ಕ್ರಮವನ್ನು ಜಾರಿಗೊಳಿಸುತ್ತಿದೆ.

ಮುಸ್ಲಿಮರ ಸಂತಾನ ಹರಣ: ಚೀನಾಗೆ ಅಮೆರಿಕ ಸಡ್ಡು!

ವಿದೇಶದಿಂದ ಆಮದಾದ ವಸ್ತುಗಳ ಲೇಬಲ್‌ ಮೇಲೆ ಮೂಲ ದೇಶವನ್ನು ಪ್ರದರ್ಶಿಸದೇ ಇದ್ದಲ್ಲಿ ಮೊದಲ ಬಾರಿ ನಿಯಮ ಉಲ್ಲಂಘನೆಗೆ 25 ಸಾವಿರ ರು., 2ನೇ ಬಾರಿ ನಿಯಮ ಉಲ್ಲಂಘಿಸಿದ ಕಂಪನಿಗಳಿಗೆ 50 ಸಾವಿರ ರು. ಹಾಗೂ ಪುನಃ ನಿಯಮ ಉಲ್ಲಂಘಿಸಿದರೆ 1 ಲಕ್ಷ ರು. ದಂಡ ಹಾಗೂ ಜೈಲು ಶಿಕ್ಷೆಯನ್ನು ವಿಧಿಸಲಾಗುವುದು ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಲೀನಾ ನಂದನ್‌ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios