ಚಿಲಿ ಅಧ್ಯಕ್ಷ ಗೇಬ್ರಿಯಲ್ ಬೋರಿಕ್, ಪ್ರಧಾನಿ ಮೋದಿಯವರನ್ನು ಜಾಗತಿಕ ರಾಜಕೀಯ ನಾಯಕ ಎಂದು ಹಾಡಿ ಹೊಗಳಿದ್ದಾರೆ.
ಚಿಲಿಯ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಫಾಂಟ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಡಿ ಹೊಗಳಿದ್ದಾರೆ. ಪ್ರಧಾನಿಯವರು ವಿಶ್ವದ ಯಾವುದೇ ದೇಶದ ನಾಯಕನೊಂದಿಗೆ ಮಾತನಾಡಬಲ್ಲ, ಸಾಮರ್ಥ್ಯ ಹೊಂದಿರುವ ಮಹತ್ವದ ಜಿಯೋಪಾಲಿಟಿಕಲ್ (ಭೌಗೋಳಿಕ ರಾಜಕೀಯ) ಆಟಗಾರ ಎಂದು ಚಿಲಿ ಅಧ್ಯಕ್ಷ ಗೇಬ್ರಿಯಲ್ ಬೋರಿಕೆ ಹೇಳಿದ್ದಾರೆ. ಅವರು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಕ್ರೇನ್ ಅಧ್ಯಕ್ಷ ವ್ಲೊಡಿಮಿರ್ ಝೆಲೆನ್ಸಕಿ ಸೇರಿದಂತೆ ವಿಶ್ವದ ಪ್ರತಿಯೊಬ್ಬ ನಾಯಕನ ಜೊತೆ ಮಾತನಾಡಬಲ್ಲರು.
ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರಾಷ್ಟ್ರಪತಿ ಭವನದಲ್ಲಿ ಮಾತನಾಡಿದ ಚಿಲಿ ಅಧ್ಯಕ್ಷ ಗೇಬ್ರಿಯಲ್, ಪ್ರಧಾನಿ ಮೋದಿಯವರ ರಾಜತಾಂತ್ರಿಕ ಪ್ರಭಾವವನ್ನು ಶ್ಲಾಘಿಸಿದರು. 'ಅಧ್ಯಕ್ಷ ಮೋದಿಯವರೇ ನೀವು ಇಂದು ವಿಶ್ವದ ಯಾವುದೇ ನಾಯಕನ ಜೊತೆ ಮಾತನಾಡುವ ಸಾಮರ್ಥ್ಯವನ್ನು ಹೊಂದಿದ್ದೀರಿ. ನೀವು ಟ್ರಂಪ್, ಝೆಲೆನ್ಸ್ಕಿ, ಯುರೋಪಿಯನ್ ಒಕ್ಕೂಟ, ಗ್ರೀಸ್ ಅಥವಾ ಇರಾನ್‌ನಲ್ಲಿರುವ ಲ್ಯಾಟಿನ್ ಅಮೆರಿಕನ್ ನಾಯಕರ ಜೊತೆಗೂ ಮಾತನಾಡಬಲ್ಲಿರಿ. ಜಗತ್ತಿನ ಯಾವುದೇ ನಾಯಕರಿಗೂ ಈಗ ಸಾಧ್ಯವಾಗದ ಕೆಲಸ ಅದು. ಆದ್ದರಿಂದ ನೀವು ಜಾಗತಿಕ ರಾಜಕೀಯದಲ್ಲಿ ಪ್ರಮುಖ ಆಟಗಾರರಾಗಿದ್ದೀರಿ ಎಂದು ಗೇಬ್ರಿಯಲ್ ಬೋರಿಕ್ ಫಾಂಟ್ ಅವರು ಪ್ರಧಾನಿ ಮೋದಿಯವರನ್ನು ಹಾಡಿ ಹೊಗಳಿದ್ದಾರೆ.
ಈ ಪ್ರದೇಶದಲ್ಲಿ 400 ವರ್ಷಗಳಿಂದ ಮಳೆಯೇ ಆಗಿಲ್ಲ; ಮಂಗಳ ಗ್ರಹದಂತೆ ಕಾಣೋ ಮರಭೂಮಿ ಎಲ್ಲಿದೆ?
ಭಾರತದಲ್ಲಿ ತಮಗೆ ದೊರೆತ ಆತ್ಮೀಯ ಸ್ವಾಗತಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ಇದು ಭಾರತಕ್ಕೆ ನನ್ನ ಮೊದಲ ಭೇಟಿಯಾಗಿದೆ. ಇಲ್ಲಿ ನಮಗೆ ದೊರೆತ ಅದ್ಭುತವಾದ ಸ್ವಾಗತಕ್ಕೆ ಧನ್ಯವಾದ ಹೇಳುತ್ತೇನೆ. ಕಳೆದ 16 ವರ್ಷಗಳಿಂದ ಚಿಲಿಯಿಂದ ಭಾರತಕ್ಕೆ ಯಾರು ಬಂದಿಲ್ಲ, ಮತ್ತು ಆ 16 ವರ್ಷಗಳಲ್ಲಿ ಭಾರತದಲ್ಲಿ ಸಾಕಷ್ಟು ಬದಲಾಗಿದೆ ಎಂದು ಗೇಬ್ರಿಯಲ್ ಹೇಳಿದ್ದಾರೆ. ಮಂಗಳವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಔತಣಕೂಟದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಚಿಲಿ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಫಾಂಟ್ ಅವರನ್ನು ಸನ್ಮಾನಿಸಿದರು. ಈ ವೇಳೆ ಮಾತನಾಡಿದ ಅವರು ಭಾರತದ ಬಗ್ಗೆ ಪ್ರಧಾನಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ತಮ್ಮ ದೇಶದ ಅಂತಾರಾಷ್ಟ್ರೀಯ ಸಂಪರ್ಕಗಳ ಬಗ್ಗೆ ಮಾತನಾಡಿದ ಅವರು ಚಿಲಿಯೂ ಈಗ ಇಡೀ ಜಗತ್ತಿನೊಂದಿಗೆ ಸಂಪರ್ಕ ಹೊಂದಿದೆ. ಕೇವಲ ಒಂದು ದೇಶವನ್ನು ಎಲ್ಲದಕ್ಕೂ ಅವಲಂಬಿಸಿಲ್ಲ, ಚೀನಾ, ಅಮೆರಿಕಾ, ಯುರೋಪ್ ಒಕ್ಕೂಟ, ಲ್ಯಾಟಿನ್ ಅಮೆರಿಕ, ಏಷ್ಯಾ ಫೆಸಿಫಿಕ್, ಇಂಡೋನೇಷ್ಯಾ, ಆಸ್ಟ್ರೇಲಿಯಾ, ದೇಶಗಳೊಂದಿಗೆ ಸಂಬಂಧವನ್ನು ಹೊಂದಿದ್ದೇವೆ. ಈಗ ನಾವು ಭಾರತದ ಜೊತೆಗಿನ ನಮ್ಮ ಸಂಬಂಧವನ್ನು ಮತ್ತಷ್ಟು ಭದ್ರಪಡಿಸಲು ಆಳವಾಗಿ ಕೆಲಸ ಮಾಡುತ್ತೇವೆ ಎಂದು ಚಿಲಿ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಹೇಳಿದರು.
ಸೆಪ್ಟೆಂಬರ್‌ನಲ್ಲಿ ಮೋದಿ ನಿವೃತ್ತಿ, ನಾಯಕತ್ವ ಬದಲಾವಣೆಗೆ ಸಂಘ ನಿರ್ಧಾರ: ಸಂಜಯ್ ರಾವುತ್
ಏಪ್ರಿಲ್ 1 ರಿಂದ ಆರಂಭವಾಗಿರುವ ಚಿಲಿ ಅಧ್ಯಕ್ಷರ ಭಾರತ ಭೇಟಿ ಏಪ್ರಿಲ್ 5ರವರೆಗೆ ಇರಲಿದೆ. ಇದು ಭಾರತ ಹಾಗೂ ಚಿಲಿ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧದ 75ನೇ ವಾರ್ಷಿಕೋತ್ಸವದ ಭಾಗವಾಗಿದೆ.
