ಹಿಜ್ಬುಲ್‌ ಪ್ರೇರಕ ಶಕ್ತಿ ಜಮಾ​ತ್‌ನ 90 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದ್ದು, ಕಾಶ್ಮೀ​ರದ 11 ಸೊತ್ತು ಸರ್ಕಾ​ರ ವಶ​ಕ್ಕೆ ಪಡೆದುಕೊಂಡಿದೆ. ಹಾಗೆ, ಇಂಥ ಚಟು​ವ​ಟಿ​ಕೆಗೆ ಕುಮ್ಮಕ್ಕು ನೀಡುವ ಆರೋಪ ಹೊತ್ತಿ​ರುವ ಜಮಾ​ತ್‌ನ ನೂರಾರು ಕೋಟಿ ರು. ಮೌಲ್ಯದ 200 ಆಸ್ತಿ​ಪಾ​ಸ್ತಿ​ಗ​ಳನ್ನು ಈಗಾ​ಗಲೇ ಸರ್ಕಾರ ಗುರು​ತಿ​ಸಿ​ದೆ.  

ಶ್ರೀನ​ಗ​ರ: ಉಗ್ರ​ಗಾಮಿ ಸಂಘ​ಟನೆ ಹಿಜ್ಬುಲ್‌ ಮುಜಾ​ಹಿ​ದೀ​ನ್‌ನ (Hizbul Mujahideen) ಪ್ರೇರಕ ಶಕ್ತಿ ಎನ್ನ​ಲಾ​ದ ಜಮ್ಮು-ಕಾಶ್ಮೀ​ರದ (Jammu Kashmir) ನಿಷೇ​ಧಿತ ಜಮಾತ್‌ ಎ ಇಸ್ಲಾಮಿ (Jamaat e Islami) ಸಂಘ​ಟನೆ ಮೇಲೆ ದಾಳಿ ನಡೆ​ಸಿ​ರುವ ರಾಜ್ಯ ತನಿಖಾ ದಳ (State Investigation Agency) (ಎ​ಸ್‌​ಐ​ಎ) (SIA), ಅನಂತ​ನಾಗ್‌ (Anantnag) ಜಿಲ್ಲೆ​ಯಲ್ಲಿ 90 ಕೋಟಿ ರೂ. ಮೌಲ್ಯದ 11 ಸೊತ್ತುಗಳ​ನ್ನು ವಶ​ಪ​ಡಿ​ಸಿ​ಕೊಂಡಿ​ದೆ. ಉಗ್ರ​ವಾದ, ಪ್ರತ್ಯೇ​ಕತೆ ಹಾಗೂ ತೀವ್ರ​ವಾ​ದಿ​ತ​ನ​ವನ್ನು ಪ್ರಚೋ​ದಿ​ಸಿ​ದ ಸಂಘ​ಟ​ನೆ​ಗಳ ಮೇಲಿನ ಕುಣಿ​ಕೆ​ಯನ್ನು ರಾಜ್ಯ ಸರ್ಕಾರ ಬಿಗಿ​ಗೊ​ಳಿಸಿದೆ. ಇಂಥ ಚಟು​ವ​ಟಿ​ಕೆಗೆ ಕುಮ್ಮಕ್ಕು ನೀಡುವ ಆರೋಪ ಹೊತ್ತಿ​ರುವ ಜಮಾ​ತ್‌ನ ನೂರಾರು ಕೋಟಿ ರೂ. ಮೌಲ್ಯದ 200 ಆಸ್ತಿ​ಪಾ​ಸ್ತಿ​ಗ​ಳನ್ನು ಈಗಾ​ಗಲೇ ಸರ್ಕಾರ ಗುರು​ತಿ​ಸಿ​ದೆ.
ಇದ​ರನ್ವಯ ಉಗ್ರ ನಿಗ್ರಹ ಕಾಯ್ದೆ​ಯಡಿ ಆಸ್ತಿ​ ಜಪ್ತಿ ಆರಂಭಿ​ಸಿದೆ ಹಾಗೂ ಶನಿ​ವಾರ 11 ಆಸ್ತಿ​ಗ​ಳನ್ನು ಅನಂತ​ನಾಗ್‌ ಜಿಲ್ಲೆ​ಯಲ್ಲಿ ವಶ​ಪ​ಡಿ​ಸಿ​ಕೊ​ಳ್ಳ​ಲಾ​ಗಿ​ದೆ. ವಶ​ಪ​ಡಿ​ಸಿ​ಕೊಳ್ಳಲಾದ ಆಸ್ತಿ​ಗಳ ಮೇಲೆ ಸರ್ಕಾ​ರದ ಬ್ಯಾನರ್‌ ಕಟ್ಟ​ಲಾ​ಗಿ​ದೆ.

ಕಾಶ್ಮೀರದ 3 ಜಿಲ್ಲೆ ಸ್ಥಳೀಯ ಉಗ್ರ ಮುಕ್ತ
ಕಾಶ್ಮೀರದ 3 ಜಿಲ್ಲೆಗಳಲ್ಲಿ ಪ್ರಸ್ತುತ ಯಾವುದೇ ಸ್ಥಳೀಯ ಉಗ್ರರು ಸಕ್ರಿಯರಾಗಿಲ್ಲ (Active Local Terrorists). ಅಲ್ಲದೇ ಲಷ್ಕರ್‌ ಎ ತೊಯ್ಬಾ (Lashkar e Taiba) ಮತ್ತು ಜೈಶ್‌ ಎ ಮೊಹಮ್ಮದ್‌ (Jaish e Mohammed) ಸಂಘಟನೆಗಳಿಗೆ ಈ ಜಿಲ್ಲೆಗಳಲ್ಲಿ ನಾಯಕರು ಕೂಡಾ ಇಲ್ಲ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಭಾನುವಾರ ಹೇಳಿದ್ದಾರೆ.

ಇದನ್ನು ಓದಿ: Modi ಅವಧಿಯಲ್ಲಿ ಉಗ್ರ ದಾಳಿ ಇಳಿಕೆ: RTI ಮಾಹಿತಿ

ಬಂಡಿಪೋರಾ, ಕುಪ್ವಾರಾ ಮತ್ತು ಗಂದೇರ್‌ಬಲ್‌ ಜಿಲ್ಲೆಗಳು ಸ್ಥಳೀಯ ಉಗ್ರಮುಕ್ತವಾಗಿವೆ. ಈ ಜಿಲ್ಲೆಗಳಲ್ಲಿ ರಕ್ಷಣಾ ಪಡೆಗಳು ನಡೆಸಿದ ಕಾರ್ಯಾಚರಣೆ ಮತ್ತು ಎನ್‌ಕೌಂಟರ್‌ಗಳಿಂದ ಇದು ಸಾಧ್ಯವಾಗಿದೆ. ಬಂಡಿಪೋರಾ ಮತ್ತು ಕುಪ್ವಾರ ಜಿಲ್ಲೆಗಳಲ್ಲಿ ತಲಾ 7 ಮಂದಿ ವಿದೇಶಿ ಉಗ್ರರು ಎಂದು ಅವರು ಹೇಳಿದ್ದಾರೆ.

13 ಜಿಲ್ಲೆಗಳನ್ನು ಹೊಂದಿರುವ ಕಾಶ್ಮೀರ ಪ್ರದೇಶದಲ್ಲಿ ಒಟ್ಟು 81 ಮಂದಿ ಉಗ್ರರು ಇದ್ದು, ಇವರಲ್ಲಿ 29 ಮಂದಿ ಸ್ಥಳೀಯರಾಗಿದ್ದರೆ, 52 ಮಂದಿ ವಿದೇಶಿಗರಾಗಿದ್ದಾರೆ (ಪಾಕಿಸ್ತಾನ). ಕಳೆದ 7 ವರ್ಷಗಳಲ್ಲಿ ಉಗ್ರ ಸಂಘಟನೆಗಳಿಗೆ ಸೇರುತ್ತಿರುವ ಸ್ಥಳೀಯರ ಸಂಖ್ಯೆ ಅತ್ಯಂತ ಕಡಿಮೆಯಾಗಿದೆ. ಪ್ರಸ್ತುತ ಈ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಮೇಲುಗೈ ಸಾಧಿಸಿವೆ. ಮುಂದಿನ ದಿನಗಳಲ್ಲಿ ಉಗ್ರರ ಸಂಖ್ಯೆಯನ್ನು 50ಕ್ಕಿಂತ ಕಡಿಮೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಭಯೋತ್ಪಾದನೆ ವಿರುದ್ಧ ಮತ್ತೆ ಸಮರ ಸಾರಿದ ಕೇಂದ್ರ ಸರ್ಕಾರ; ಜಮ್ಮು ಕಾಶ್ಮೀರದಲ್ಲಿ NIA Raid

ಮೆಹಬೂಬಾಗೆ ಮನೆ ಖಾಲಿಗೆ ನೋಟಿಸ್‌
ಅಧಿಕಾರದಲ್ಲಿದ್ದಾಗ ಸರ್ಕಾರ ನೀಡಿದ್ದ ಮನೆಗಳಲ್ಲೇ ಇನ್ನೂ ವಾಸಿಸುತ್ತಿರುವ ಪಿಡಿಪಿ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಮತ್ತು ಇತರೆ 7 ಜನ ಮಾಜಿ ಶಾಸಕರಿಗೆ 24 ಗಂಟೆಗಳಲ್ಲಿ ಸರ್ಕಾರಿ ಮನೆ ತೆರವು ಮಾಡುವಂತೆ ಅನಂತ್‌ನಾಗ್‌ ಜಿಲ್ಲಾಡಳಿತ ಭಾನುವಾರ ನೋಟಿಸ್‌ ನೀಡಿದೆ. ಕಳೆದ ತಿಂಗಳು ಮೆಹಬೂಬಾಗೆ ಈ ಕುರಿತು ನೋಟಿಸ್‌ ಕೂಡ ನೀಡಲಾಗಿತ್ತು. ಮುಫ್ತಿ ಹೊರತು ಮಾಜಿ ಶಾಸಕರಾಗಿರುವ ಮೊಹಮ್ಮದ್‌ ಅಲ್ತಾಫ್‌ ವಾನಿ, ಅಬ್ದುಲ್‌ ರಹೀಮ್‌ ರಾಥರ್‌, ಅಬ್ದುಲ್‌ ಮಜೀದ್‌ ಭಟ್‌, ಅಲ್ತಾಫ್‌ ಶಾ, ಅಬ್ದುಲ್‌ ಕಬೀರ್‌ ಪಠಾಣ್‌, ಬಶೀರ್‌ ಶಾ ಹಾಗೂ ಚೌದ್ರಿ ನಿಜಾಮುದ್ದೀನ್‌ರಿಗೆ ನೋಟಿಸ್‌ ಹೊರಡಿಸಲಾಗಿದೆ.

ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್‌: 3 ಎಲ್‌ಇಟಿ ಉಗ್ರರನ್ನು ಹತ್ಯೆಗೈದ ಭದ್ರತಾ ಪಡೆ