ಭಯೋತ್ಪಾದನೆ ವಿರುದ್ಧ ಮತ್ತೆ ಸಮರ ಸಾರಿದ ಕೇಂದ್ರ ಸರ್ಕಾರ; ಜಮ್ಮು ಕಾಶ್ಮೀರದಲ್ಲಿ NIA Raid
ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ರಜೌರಿ, ಪೂಂಚ್, ಜಮ್ಮು, ಶ್ರೀನಗರ, ಪುಲ್ವಾಮಾ, ಬುದ್ಗಾಮ್, ಶೋಪಿಯಾನ್ ಮತ್ತು ಬಂಡಿಪೋರಾ ಜಿಲ್ಲೆಗಳಲ್ಲಿ ಎನ್ಐಎ ಹಲವು ಸ್ಥಳಗಳಲ್ಲಿ ಶೋಧ ನಡೆಸುತ್ತಿದೆ.
ಭಯೋತ್ಪಾದನೆ ವಿರುದ್ಧ ಕೇಂದ್ರ ಸರ್ಕಾರ ಮತ್ತೆ ಸಮರ ಸಾರಿದೆ. ದೇಶಾದ್ಯಂತ ಪಿಎಫ್‌ಐ (PFI) ಸಂಘಟನೆ ಮೇಲೆ ರೇಡ್‌ಗಳು ನಡೆದು, ಹಲವರನ್ನು ವಶಕ್ಕ ಪಡೆದ ಬಳಿಕ ಆ ಸಂಘಟನೆಯನ್ನೇ ಬ್ಯಾನ್ ಮಾಡಿತ್ತು. ಈಗ, ಭಯೋತ್ಪಾದನೆಗೆ ಹಣಕಾಸು (Terror Funding) ನೆರವು ಹಿನ್ನೆಲೆ ಇಂದು ಮತ್ತೆ ರಾಷ್ಟ್ರೀಯ ತನಿಖಾ ಸಂಸ್ಥೆ (National Investigation Agency) (NIA) ಅಖಾಡಕ್ಕೆ ಇಳಿದಿದೆ. ಸ್ಥಳೀಯ ಪೊಲೀಸರು ಮತ್ತು ಸಿಆರ್‌ಪಿಎಫ್ ನೆರವಿನೊಂದಿಗೆ ಎನ್‌ಐಎ ಜಮ್ಮು ಮತ್ತು ಕಾಶ್ಮೀರದ (Jammu and Kashmir) ರಜೌರಿ, ಪೂಂಚ್, ಪುಲ್ವಾಮಾ, ಶೋಪಿಯಾನ್ ಮತ್ತು ಕೆಲವು ಸ್ಥಳಗಳಲ್ಲಿ ದಾಳಿ ನಡೆಸುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಅಲ್ -ಹುದಾ (Al - Huda) ಎಜುಕೇಶನ್ ಟ್ರಸ್ಟ್ ಹೆಸರಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ (Terrorism Activities) ಹಣಕಾಸು ನೆರವು ಆರೋಪ ಹಿನ್ನೆಲೆ ಎನ್‌ಐಎ ದಾಳಿ ಮುಂದುವರಿದಿದೆ. ನಿಷೇಧಿತ ಸಂಘಟನೆ ಜಮಾತ್-ಎ-ಇಸ್ಲಾಮಿಯ (Jamaat - e - Islami) ಬೆಂಬಲಿತ ಘಟಕವಾಗಿ ಕಾರ್ಯನಿರ್ವಹಿಸುವ ಅಲ್-ಹುದಾ ಶೈಕ್ಷಣಿಕ ಟ್ರಸ್ಟ್‌ಗೆ ಸಂಬಂಧಿಸಿದ ಭಯೋತ್ಪಾದಕ ನಿಧಿ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಈ ದಾಳಿ ನಡೆಸುತ್ತಿದೆ.
ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ರಜೌರಿ, ಪೂಂಚ್, ಜಮ್ಮು, ಶ್ರೀನಗರ, ಪುಲ್ವಾಮಾ, ಬುದ್ಗಾಮ್, ಶೋಪಿಯಾನ್ ಮತ್ತು ಬಂಡಿಪೋರಾ ಜಿಲ್ಲೆಗಳಲ್ಲಿ ಎನ್ಐಎ ಹಲವು ಸ್ಥಳಗಳಲ್ಲಿ ಶೋಧ ನಡೆಸುತ್ತಿದೆ. ಈ ಪ್ರಕರಣವು ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿರುವ ಅಲ್-ಹುದಾ ಶೈಕ್ಷಣಿಕ ಟ್ರಸ್ಟ್‌ನ "ಸಂಶಯಾಸ್ಪದ ಚಟುವಟಿಕೆಗಳಿಗೆ" ಸಂಬಂಧಿಸಿದೆ. ಜಮಾತ್-ಎ-ಇಸ್ಲಾಮಿಗೆ ಸಂಬಂಧಿಸಿದ ಅಲ್-ಹುದಾ ಶೈಕ್ಷಣಿಕ ಟ್ರಸ್ಟ್‌ನ ನಿಧಿಯ ಮಾದರಿ ಮತ್ತು ಚಟುವಟಿಕೆಗಳ ಆಧಾರದ ಮೇಲೆ ಕೇಂದ್ರೀಯ ಸಂಸ್ಥೆ ಸು-ಮೋಟೋ ಪ್ರಕರಣವನ್ನು ದಾಖಲಿಸಿದೆ.
ಇದನ್ನು ಓದಿ: PFI Ban: 5 ವರ್ಷಗಳ ಕಾಲ ನಿಷೇಧ; ಕೇಂದ್ರ ಸರ್ಕಾರದ ಮಾಸ್ಟರ್ ಸ್ಟ್ರೋಕ್
ಮಾರ್ಚ್ 2019 ರಲ್ಲಿ, ಸಾಮಾಜಿಕ-ರಾಜಕೀಯ ಮತ್ತು ಧಾರ್ಮಿಕ ಸಂಘಟನೆಯು ಉಗ್ರಗಾಮಿ ಸಂಘಟನೆಗಳೊಂದಿಗೆ ನಿಕಟ ಸಂಪರ್ಕದಲ್ಲಿದೆ ಎಂಬ ಕಾರಣಗಳನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರವು ಜಮಾತ್-ಎ-ಇಸ್ಲಾಮಿಯನ್ನು ಐದು ವರ್ಷಗಳ ಅವಧಿಗೆ ನಿಷೇಧಿಸಿತ್ತು. ಆದರೆ ಈ ಸಂಘಟನೆ ದತ್ತಿ ಉದ್ದೇಶಗಳ ನೆಪದಲ್ಲಿ ವಿವಿಧ ರೂಪಗಳಲ್ಲಿ ಹಣವನ್ನು ಸಂಗ್ರಹಿಸುವುದನ್ನು ಮುಂದುವರೆಸಿತು.
ಈ ಹಣವನ್ನು ಕಾಶ್ಮೀರ ಕಣಿವೆಯಲ್ಲಿ ಹಾಗೂ ಭಾರತದ ಉಳಿದ ಭಾಗಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಉತ್ತೇಜಿಸಲು ಹಿಜ್ಬ್-ಉಲ್-ಮುಜಾಹಿದ್ದೀನ್ (Hizb - ul - Mujahideen), ಲಷ್ಕರ್-ಎ-ತೊಯ್ಬಾ (Lashkar - e - Taiba) ಮುಂತಾದ ಭಯೋತ್ಪಾದಕ ಸಂಘಟನೆಗಳಿಗೆ ವರ್ಗಾಯಿಸಲಾಗಿದೆ ಎಂದು ಆರೋಪಿಸಲಾಗಿದೆ.
ಆಗಸ್ಟ್‌ನಲ್ಲಿ, ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ನ ರಾಜ್ಯ ತನಿಖಾ ಸಂಸ್ಥೆ (ಎಸ್‌ಐಎ) ನಿಷೇಧಿತ ಗುಂಪು ಜಮಾತ್-ಎ-ಇಸ್ಲಾಮಿ ಮತ್ತು ಅದರ ಅಂಗಸಂಸ್ಥೆ ಫಲಾಹ್-ಎ-ಆಮ್ ಟ್ರಸ್ಟ್ (ಎಫ್‌ಎಟಿ) ಒಡೆತನದ ಅಥವಾ ಬಳಸಿದ ಅನೇಕ ಸ್ಥಳಗಳ ಮೇಲೆ ದಾಳಿ ನಡೆಸಿತ್ತು. ಶೋಧದ ಸಮಯದಲ್ಲಿ, ಜಮಾತ್-ಎ-ಇಸ್ಲಾಮಿ ವಿರುದ್ಧದ ಪ್ರಕರಣವನ್ನು ಹೊಂದಿರುವ ಲ್ಯಾಪ್‌ಟಾಪ್‌ಗಳು, ನಗದು ಪುಸ್ತಕಗಳು, ಚೆಕ್ ಪುಸ್ತಕಗಳು ಮತ್ತು ಭೂ ದಾಖಲೆಗಳು ಸೇರಿದಂತೆ ದೋಷಾರೋಪಣೆಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ಹೇಳಿದ್ದರು.
ಇದನ್ನೂ ಓದಿ: ಕರ್ನಾಟಕ, ಕೇರಳ ಸೇರಿ 10 ರಾಜ್ಯಗಳಲ್ಲಿ NIA, ED Raid: ನೂರಾರು ಪಿಎಫ್ಐ ಕಾರ್ಯಕರ್ತರ ಬಂಧನ
ಈ ವೇಳೆ 6 ಸ್ಥಳಗಳಲ್ಲಿ ದಾಳಿ ನಡೆಸಿತ್ತು ಮತ್ತು ದೋಷಾರೋಪಣೆಯ ಸಾಹಿತ್ಯ, ಜಮಾತ್-ಎ-ಇಸ್ಲಾಮಿ, ಜಮ್ಮು ಮತ್ತು ಕಾಶ್ಮೀರಕ್ಕೆ ಸಂಗ್ರಹಿಸಿದ ಹಣದ ರಸೀದಿಗಳು, ಬ್ಯಾಂಕ್ ಮತ್ತು ಆಸ್ತಿ ಸಂಬಂಧಿತ ದಾಖಲೆಗಳು ಹಾಗೂ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಂಡಿದೆ. ಈ ವಿಚಾರದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿತ್ತು. ಈ ಪ್ರಕರಣವನ್ನು ಫೆಬ್ರವರಿ 5, 2021 ರಂದು ಸ್ವಯಂಪ್ರೇರಿತವಾಗಿ ದಾಖಲಿಸಲಾಗಿದೆ. ಈ ಹಿಂದೆ ಪ್ರಕರಣದಲ್ಲಿ ನಾಲ್ವರ ವಿರುದ್ಧ NIA ಚಾರ್ಜ್ ಶೀಟ್ ಸಲ್ಲಿಸಿತ್ತು.