Cow Issue: 'ಗೋವು ನಮಗೆ ತಾಯಿ, ಪವಿತ್ರ: ಜೋಕ್‌ ಮಾಡುವವರಿಗೆ ಇದು ಗೊತ್ತಿಲ್ಲ!'

* ಕೋಟ್ಯಂತರ ಜನರ ಜೀವನ ಗೋವುಗಳ ಮೇಲೆ ಅವಲಂಬಿತ

* ಗೋವು ನಮಗೆ ತಾಯಿ, ಪವಿತ್ರ: ಮೋದಿ

* ಜೋಕ್‌ ಮಾಡುವವರಿಗೆ ಇದು ಗೊತ್ತಿಲ್ಲ: ಪ್ರಧಾನಿ ವಾಗ್ದಾಳಿ

Cow a sin for some but sacred for us PM Narendra Modi pod

ವಾರಾಣಸಿ(ಡಿ.24): ಗೋಹತ್ಯೆ ನಿಷೇಧವನ್ನು ವಿರೋಧಿಸುವ ರಾಜಕೀಯ ಎದುರಾಳಿಗಳ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಗೋವು ನಮಗೆ ತಾಯಿ ಇದ್ದಂತೆ ಹಾಗೂ ಅದು ನಮಗೆ ಪವಿತ್ರ ಎಂದು ಹೇಳಿದ್ದಾರೆ.

ಗೋವು ಹಾಗೂ ಎಮ್ಮೆಗಳ ಬಗ್ಗೆ ಅಪಹಾಸ್ಯ ಮಾಡುವವರಿಗೆ ಅವನ್ನು ನಂಬಿ ದೇಶದ ಕೋಟ್ಯಂತರ ಜನರ ಜೀವನ ಸಾಗಿಸುತ್ತಿದ್ದಾರೆ ಎಂಬ ಸಂಗತಿ ಗೊತ್ತಿಲ್ಲ ಎಂದು ತೀಕ್ಷ$್ಣವಾಗಿ ಹೇಳಿದ್ದಾರೆ.

ಸ್ವಕ್ಷೇತ್ರ ವಾರಾಣಸಿಯಲ್ಲಿ ಗುರುವಾರ 2095 ಕೋಟಿ ರು. ವೆಚ್ಚದ 27 ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಗೋವು ನಮಗೆ ತಾಯಿ, ಪವಿತ್ರ ಎಂದು ಹೇಳಿದರೆ ಕೆಲವರಿಗೆ ಅಪರಾಧವಾಗಿ ಕಾಣುತ್ತದೆ. ಅವರಿಗೆ ಕೋಟ್ಯಂತರ ಜನರ ಜೀವನ ಗೋವುಗಳ ಮೇಲೆ ಅವಲಂಬನೆಯಾಗಿರುವ ಅರಿವಿಲ್ಲ ಎಂದು ಚಾಟಿ ಬೀಸಿದರು.

ಸಮಾಜವಾದಿ ಪಕ್ಷದ ವಿರುದ್ಧವೂ ಹರಿಹಾಯ್ದ ಅವರು, ಆ ಪಕ್ಷದ ಪದಕೋಶದಲ್ಲಿ ಮಾಫಿಯಾವಾದ ಹಾಗೂ ಪರಿವಾರವಾದ ಮಾತ್ರ ಇದೆ. ಸಬ್‌ಕಾ ಸಾಥ್‌ ಹಾಗೂ ಸಬ್‌ಕಾ ವಿಕಾಸ್‌ಗೇ ನಮ್ಮ ಆದ್ಯತೆ ಎಂದು ಹೇಳಿದರು.

10 ದಿನಗಳಲ್ಲಿ ಮೋದಿ ಅವರು ವಾರಾಣಸಿಗೆ ನೀಡಿದ ಎರಡನೇ ಭೇಟಿ ಇದಾಗಿತ್ತು. ಕಾಶಿ ವಿಶ್ವನಾಥ ಕಾರಿಡಾರ್‌ ಉದ್ಘಾಟನೆಗಾಗಿ ಕಳೆದ ಬಾರಿ ಮೋದಿ ಆಗಮಿಸಿದ್ದರು. ಕೆಲವೇ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಉತ್ತಪ್ರದೇಶಕ್ಕೆ ಮೋದಿ ಅವರ ಭೇಟಿ ಹೆಚ್ಚಾಗಿದೆ.

ಟೊಯಿಂಗ್‌ ವಾಹನಕ್ಕೆ ಹಸುಗಳನ್ನು ಕಟ್ಟಿ ಎಳೆದ ಐಆರ್‌ಬಿ ಸಿಬ್ಬಂದಿ

 

ಹೆದ್ದಾರಿಯಲ್ಲಿ ಮೃತ ಪಟ್ಟಿದ್ದ ಎರಡು ಜಾನುವಾರುಗಳನ್ನು (Cow) ಐಆರ್‌ಬಿಯ (IRB) ಟೋಯಿಂಗ್‌ ವಾಹನಕ್ಕೆ (vehicle) ಹಗ್ಗ ಕಟ್ಟಿಕೊಂಡು ರಸ್ತೆಯಲ್ಲಿ ಎಳೆದು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್‌ ಆಗಿದ್ದು, ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.  ಐಆರ್‌ಬಿ ಟೋಯಿಂಗ್‌ (1033) ವಾಹನದಲ್ಲಿ ಭಟ್ಕಳದ ಬೆಳಕೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ(National Highway) ಅಪಘಾತದಿಂದ ಮೃತಪಟ್ಟಿವೆ ಎನ್ನಲಾದ ಎರಡು ಜಾನುವಾರುಗಳನ್ನು ಎಳೆದೊಯ್ಯುತ್ತಿರುವ ವಿಡಿಯೋವನ್ನು ಹಿಂಬದಿಯಿಂದ ಪ್ರವಾಸಿಗ ವಾಹನದವರು (Vehicle) ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋದಲ್ಲಿ ಟೋಯಿಂಗ್‌ ವಾಹನದಲ್ಲಿ ಕಟ್ಟಿರಸ್ತೆಯಲ್ಲಿ ಮೃತ ಜಾನುವಾರುಗಳನ್ನು ಎಳೆದುಕೊಂಡು ಹೋಗುತ್ತಿರುವುದು ಸ್ಪಷ್ಟವಾಗಿ ಕಂಡುಬಂದಿದೆ.

ಮೃತಪಟ್ಟ ಜಾನುವಾರುಗಳನ್ನು ಅಮಾನವೀಯವಾಗಿ ಎಳೆದುಕೊಂಡು ಹೋಗುತ್ತಿರುವುದಕ್ಕೆ ಹಿಂದೂಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಸೋಮವಾರ ಈ ಕುರಿತು ಶಿರೂರು ಟೋಲ್‌ ಗೇಟ್‌ (Tollgate) ಬಳಿ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ ಸಹ ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ. ಈ ಘಟನೆಯ ಕುರಿತು ಭಟ್ಕಳದಲ್ಲೂ (Bhatkal) ತೀವ್ರ ಆಕ್ರೋಶ ವ್ಯಕ್ತವಾಗಿದೆ. 

ಈ ಕುರಿತು ಪ್ರತಿಕ್ರಿಯಿ​ಸಿದ ಹಿಂದೂ ಜಾಗರಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ, ಅಪಘಾತದಿಂದ ಮೃತಪಟ್ಟಿದ್ದ ಗೋವುಗಳನ್ನು ಐಆರ್‌ಬಿಯವರು ಟೋಯಿಂಗ್‌ ವಾಹನದಲ್ಲಿ ಹಗ್ಗ ಕಟ್ಟಿ ಕೊಂಡು ಅಮಾನವೀಯವಾಗಿ ರಸ್ತೆಯಲ್ಲಿ (Road) ಎಳೆದುಕೊಂಡು ಹೋಗಿದ್ದು, ತೀರಾ ಖಂಡನೀಯ. ತಪ್ಪಿ ತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊ​ಳ್ಳ​ಬೇಕು. ಈ ಕುರಿತು ಸೋಮವಾರ ಹಿಂದೂ ಜಾಗರಣಾ ವೇದಿಕೆಯ ವತಿಯಿಂದ ಭಟ್ಕಳ ಸಹಾಯಕ ಆಯಕ್ತರನ್ನು ಭೇಟಿ ಮಾಡುತ್ತೇವೆ ಎಂದು ತಿಳಿಸಿದರು.

Latest Videos
Follow Us:
Download App:
  • android
  • ios