WhatsApp ಮೂಲಕ ಪಡೆಯಿರಿ ಕೋವಿಡ್ ಲಸಿಕೆ ಸರ್ಟಿಫಿಕೇಟ್; ಕೇಂದ್ರದಿಂದ ಸುಲಭ ವಿಧಾನ ಜಾರಿ!
- ಕೇವಲ ಮೂರೇ ಮೂರು ಹಂತದಲ್ಲಿ ಸರ್ಟಿಫಿಕೇಟ್ ಲಭ್ಯ
- ಎರಡು ಡೋಸ್ ಪಡೆದವರು ಲಸಿಕೆಗಾಗಿ ಅಲೆಬೇಕಿಲ್ಲ, ಕಾಯಬೇಕಿಲ್ಲ
- ಸುಲಭ ವಿಧಾನ ಜಾರಿಗೊಳಿಸಿದ ಕೇಂದ್ರ ಆರೋಗ್ಯ ಸಚಿವ
ನವದೆಹಲಿ(ಆ.08): ಕೋವಿಡ್ ಲಸಿಕೆ ಪಡೆದವರು ಸರ್ಟಿಫಿಕೇಟ್ ಸಿಗಲು ಕಾಯಬೇಕಿಲ್ಲ. ಅಥವಾ ಲಸಿಕೆ ರಿಜಿಸ್ಟ್ರೇಶನ್ ನಂಬರ್ ಟೈಪ್ ಮಾಡಿ ಅಧಿಕೃತ ವೆಬ್‌ಸೈಟ್ ಮೂಲಕ ಡೌನ್ಲೋಡ್ ಮಾಡುವ ತಾಪತ್ರಯವೂ ಇಲ್ಲ. ಇದೀಗ ಕೇವಲ ಮೂರು ಹಂತದಲ್ಲಿ ಸುಲಭವಾಗಿ ಕೋವಿಡ್ ಸರ್ಟಿಫಿಕೇಟ್ ಪಡೆಯುವ ವಿಧಾನವನ್ನು ಕೇಂದ್ರ ಆರೋಗ್ಯ ಸಚಿವ ಮನ್ಸುಕ್ ಮಾಂಡವಿಯಾ ಜಾರಿಗೊಳಿಸಿದ್ದಾರೆ.
ಭಾರತಕ್ಕೆ ಬಂತು 5ನೇ ಲಸಿಕೆ: ಶೇ.85ರಷ್ಟು ಪರಿಣಾಮಕಾರಿ ಈ ಲಸಿಕೆ!
ಭಾರತದಲ್ಲಿ ಬಹುತೇಕರು ವ್ಯಾಟ್ಸ್ಆ್ಯಪ್ ಬಳಕೆ ಮಾಡುತ್ತಿದ್ದಾರೆ. ಹೀಗಾಗಿ ಸುಲಭವಾಗಿ ಕೋವಿಡ್ ಸರ್ಟಿಫಿಕೇಟ್ ವ್ಯಾಟ್ಸ್ಆ್ಯಪ್ ಮೂಲಕ ಪಡೆಯುವ ಹೊಸ ಹಾಗೂ ಸರಳ ವಿಧಾನವನ್ನು ಕೇಂದ್ರ ಜಾರಿಗೊಳಿಸಿದೆ. ಕೇಂದ್ರ ಜಾರಿಗೊಳಿಸಿದ ಸುಲಭ 3 ಹಂತದ ಸರ್ಟಿಫಿಕೇಟ್ ಪಡೆಯುವ ವಿವರ ಇಲ್ಲಿವೆ.
ಡೆಲ್ಟಾ ಪ್ಲಸ್ ಆತಂಕ ಬೇಡ, ಅಪಯಕಾರಿ ವೈರಸ್‌ಗೆ ಕೋವಾಕ್ಸಿನ್ ಪರಿಣಾಮಕಾರಿ; ICMR!
ಕೇಂದ್ರ ಸುಲಭವಾಗಿ ಸರ್ಟಿಫಿಕೇಟ್ ಪಡೆಯಲು +91 9013151515 ಮೊಬೈಲ್ ನಂಬರ್ ನೀಡಿದೆ. ಈ ನಂಬರ್‌ಗೆ ಕೋವಿಡ್ ಸರ್ಟಿಫಿಕೇಟ್ ಎಂದು ಟೈಪ್ ಮಾಡಿ ಕಳುಹಿಸಬೇಕು. ಬಳಿಕ ಬರುವ ಓಟಿಪಿ ನಂಬರ್ ನಮೂದಿಸಿದರೆ ಸಾಕು. ಲಸಿಕೆ ಸರ್ಟಿಫಿಕೇಟ್ ಪಡೆಯಲು ಸಾಧ್ಯ
ಮೂರು ಹಂತದ ವಿಧಾನ
+91 9013151515 ಈ ನಂಬರ್ ನಿಮ್ಮ ಫೋನ್‌ನಲ್ಲೇ ಸೇವ್ ಮಾಡಿ
ಸೇವ್ ಮಾಡಿದ ನಂಬರ್‌ಗೆ covid certificate (ಕೋವಿಡ್ ಸರ್ಟಿಫಿಕೇಟ್) ಎಂದು ಟೈಪ್ ಮಾಡಿ ಕಳುಹಿಸಿ
ನಿಮ್ಮ ಮೊಬೈಲ್‌ಗೆ ಬಂದ ಒಟಿಪಿ(OTP) ನಮೂದಿಸಿ
ಜುಲೈನಲ್ಲಿ ಲಸಿಕೆ ಪಡೆದ 13 ಕೋಟಿ ಮಂದಿಯಲ್ಲಿ ನೀವೂ ಒಬ್ಬರು; ರಾಹುಲ್ ಗಾಂಧಿಗೆ ಆರೋಗ್ಯ ಸಚಿವರ ತಿರುಗೇಟು!
ಈ ಮೂರು ಹಂತ ಪೂರೈಸಿದ ಕ್ಷಣದಲ್ಲೇ ನಿಮ್ಮ ವ್ಯಾಟ್ಸ್‌ಆ್ಯಪ್ ನಂಬರ್‌ಗೆ ಲಸಿಕೆ ಸರ್ಟಿಫಿಕೇಟ್ ರವಾನೆಯಾಗಿಲಿದೆ. ಈ ಸುಲಭವಿಧಾನದ ಕುರಿತು ಮಾನ್ಸುಕ್ ಮಾಂಡವಿಯಾ ಟ್ವಿಟರ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಹಿಂದೆ ಕೋವಿನ್ ಆ್ಯಪ್ ಮೂಲಕ ಅಥವಾ ಪೋರ್ಟಲ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬೇಕಿತ್ತು. ಹಲವರಿಗೆ ಕೆಲ ತಾಂತ್ರಿಕ ಸಮಸ್ಯೆಗಳು ಕಾಡಿವೆ. ಈ ಎಲ್ಲಾ ಸಮಸ್ಯೆಗಳನ್ನು ಗಮನಿಸಿದ ಕೇಂದ್ರ ಸರ್ಕಾರ, ತಂತ್ರಜ್ಞಾನ ಬಳಸಿಕೊಂಡು ಸರ್ಟಿನೀಡುವ ಸರಳ ವಿಧಾನ ಜಾರಿಗೊಳಿಸಿದೆ.
ಕೇಂದ್ರ ಸರ್ಕಾರದ ಈ ಕ್ರಮಕ್ಕೆ ಕಾಂಗ್ರೆಸ್ ನಾಯಕ ಶಶಿ ತರೂರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವ್ಯಾಟ್ಸ್ಆ್ಯಪ್ ಮೂಲಕ ಕೇಂದ್ರ ಸರ್ಕಾರ ಲಸಿಕೆ ಸರ್ಟಿಫಿಕೇಟ್ ಪಡೆಯುವಿಕೆಯನ್ನು ಮತ್ತಷ್ಟು ಸುಲಭ ಹಾಗೂ ವೇಗ ನೀಡಿದೆ ಎಂದಿದ್ದಾರೆ.