Asianet Suvarna News Asianet Suvarna News

ಡೆಲ್ಟಾ ಪ್ಲಸ್‌ ಆತಂಕ ಬೇಡ, ಅಪಯಕಾರಿ ವೈರಸ್‌ಗೆ ಕೋವಾಕ್ಸಿನ್ ಪರಿಣಾಮಕಾರಿ; ICMR!

  • ದೇಶದಲ್ಲಿ ಮತ್ತೆ ಕೊರೋನಾ ವೈರಸ್ ಪ್ರಕರಣ ಸಂಖ್ಯೆ ಹೆಚ್ಚಳ
  • ಡೆಲ್ಟಾ ಪ್ಲಸ್ ಆತಂಕಕ್ಕೆ ICMR ಅಧ್ಯಯನ ವರದಿ ನೀಡಿದ ಸಮಾಧಾನ
  • ಡೆಲ್ಟಾ ಪ್ಲಸ್ ವಿರುದ್ಧ ಕೋವಾಕ್ಸಿನ್ ಪರಿಣಾಮಕಾರಿ ಎಂದ ICMR
Covaxin vaccine effective against the coronavirus Delta Plus variant ICMR study reveals report ckm
Author
Bengaluru, First Published Aug 2, 2021, 4:04 PM IST

ನವದೆಹಲಿ(ಆ.02): ಭಾರತದಲ್ಲಿ ಕೊರೋನಾ ವೈರಸ್ ಪ್ರಕರಣ ದಿಢೀರ್ ಹೆಚ್ಚಾಗಿದೆ. ಕಳೆದ 6 ದಿನಗಳಿಂದ ಭಾರತದಲ್ಲಿ 40 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದೆ. ಇದೀಗ 3ನೇ ಅಲೆ ಆತಂಕ ಹೆಚ್ಚಾಗುತ್ತಿದೆ. ಇದರ ನಡುವೆ ಡೆಲ್ಟಾ ಪ್ಲಸ್ ವೈರಸ್ ಕಾಟವೂ ಹೆಚ್ಚಾಗುತ್ತಿದೆ. ಡೆಲ್ಟಾ ಪ್ಲಸ್ ಆತಂಕಕ್ಕೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ICMR)ಅಧ್ಯಯನ ವರದಿ ಸಮಾಧಾನ ತಂದಿದೆ. 

ಕೋವಿಶೀಲ್ಡ್‌-ಕೋವ್ಯಾಕ್ಸಿನ್‌ ಲಸಿಕೆ ಮಿಶ್ರಣ: ತಜ್ಞರ ಶಿಫಾರಸು!

ಡೆಲ್ಟಾ ಪ್ಲಸ್ ವೇರಿಯೆಂಟ್‌ ವಿರುದ್ದ ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ಲಸಿಕೆ ಪರಿಣಾಮಕಾರಿ ಎಂದು ICMR ಅಧ್ಯಯನ ವರದಿ ಹೇಳಿದೆ. ICMR ನಡೆಸಿದ ಅಧ್ಯಯನ ವರದಿಯಲ್ಲಿ ಕೋವಾಕ್ಸಿನ್ ಲಸಿಕೆ ಡೆಲ್ಟಾ ಪ್ಲಸ್ ವಿರುದ್ಧ ಶೇಕಡಾ 65.2ರಷ್ಟು ಪರಿಣಾಮಕಾರಿ ಎನ್ನುತ್ತಿದೆ ವರದಿ.

ಕೊರೋನಾ ಲಸಿಕೆ, ಸಿಹಿ ಸುದ್ದಿ ಕೊಟ್ಟ AIIMS ನಿರ್ದೇಶಕ ಡಾ. ಗುಲೇರಿಯಾ!

ಸದ್ಯ ಮಾರುಕಟ್ಟೆಯಲ್ಲಿರುವ ಇತರ ಲಸಿಕೆಗೆ ಹೋಲಿಸಿದರೆ ಡೆಲ್ಟಾ ಪ್ಲಸ್ ವಿರುದ್ಧ ಅತ್ಯಂತ ಪರಿಣಾಮಕಾರಿ ಲಸಿಕೆ ಅನ್ನೋ ಹೆಗ್ಗಳಿಕೆಗೆ ಭಾರತದ ಕೋವಾಕ್ಸಿನ್ ಪಾತ್ರವಾಗಿದೆ. ಇದರೊಂದಿಗೆ ಭಾರತದಲ್ಲಿ ಡೆಲ್ಟಾ ಪ್ಲಸ್ ಹರಡುವಿಕೆಗೆ ಕಡಿವಾಣ ಹಾಕಲು ಈ ಲಸಿಕೆ ಮಹತ್ವದ ಪಾತ್ರ ನಿರ್ವಹಿಸಲಿದೆ.

2-6 ವರ್ಷದೊಳಗಿನ ಮಕ್ಕಳಿಗೆ ಮುಂದಿನ ವಾರದಿಂದ ಕೋವಾಕ್ಸಿನ್ 2ನೇ ಡೋಸ್ ಟ್ರಯಲ್!

ಕೋವಾಕ್ಸಿನ್ ಲಸಿಕೆ ಪರಿಣಾಮಕಾರಿ ಹಾಗೂ ಫಲಿತಾಂಶ ಆಧರಿಸಿ ಈಗಾಗಲೇ 15ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಲಸಿಕೆ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ. EUA ರಾಷ್ಟ್ರಗಳು, ಪಿಲಿಫೈನ್ಸ್, ಬ್ರೆಜಿಲ್ ಸೇರಿದಂತೆ 15 ರಾಷ್ಟ್ರಗಳು ಕೋವಾಕ್ಸಿನ್ ಲಸಿಕೆ ಬಳಕೆ ಮಾಡುತ್ತಿದೆ.

Follow Us:
Download App:
  • android
  • ios