ಕೊರೋನಾ ಚಿಕಿತ್ಸೆಗೆ ಅಭಿವೃದ್ಧಿಪಡಿಸಲಾಗಿರುವ ‘ಮೊಲ್ನುಪಿರಾವಿರ್‌’ ಮಾತ್ರೆ ಮಾತ್ರೆ ಮುಂದಿನ ವಾರದಿಂದಲೇ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ

ನವದೆಹಲಿ (ಜ.05: ಕೊರೋನಾ (Corona ) ಚಿಕಿತ್ಸೆಗೆ ಅಭಿವೃದ್ಧಿಪಡಿಸಲಾಗಿರುವ ‘ಮೊಲ್ನು ಪಿರಾವಿರ್‌’ ಮಾತ್ರೆ ಮುಂದಿನ ವಾರದಿಂದಲೇ ಮಾರುಕಟ್ಟೆಯಲ್ಲಿ (Market) ಲಭ್ಯವಾಗಲಿದೆ. ಒಂದು ಮಾತ್ರೆಗೆ (Tablet) 35 ರು. ದರ ನಿಗದಿಪಡಿಸಲಾಗಿದೆ. ಇದು ಅಮೆರಿಕ (America) ಮೂಲದ ಕಂಪನಿಯ ಮಾತ್ರೆಯಾಗಿದ್ದು, ಭಾರತದಲ್ಲಿ (India) ಬಿಡುಗಡೆ ಆಗುತ್ತಿರುವ ಮೊದಲ ಕೋವಿಡ್‌ (Covid 19) ಚಿಕಿತ್ಸಾ ಮಾತ್ರೆಯಾಗಿದೆ. ಕೋವಿಡ್‌ನಿಂದ ಗುಣಮುಖನಾಗಲು ಸೋಂಕಿತ ವ್ಯಕ್ತಿಯು 5 ದಿನಗಳಲ್ಲಿ 200 ಎಂ.ಜಿಯ 40 ಮಾತ್ರೆಗಳನ್ನು ಸೇವಿಸಬೇಕಿದ್ದು, ಪೂರ್ಣ ಚಿಕಿತ್ಸೆಗೆ ಒಟ್ಟು 1400 ರು. ವೆಚ್ಚವಾಗಲಿದೆ ಎಂದು ಮ್ಯಾನ್‌ಕೈಂಡ್‌ ಫರ್ಮಾ ಸಂಸ್ಥೆಯ ಅಧ್ಯಕ್ಷ ಆರ್‌.ಸಿ ಜುನೇಜಾ ತಿಳಿಸಿದ್ದಾರೆ.

ಗಂಭೀರ ಪ್ರಮಾಣದ ಸೋಂಕಿನಿಂದ ಬಳಲುತ್ತಿರುವವರಿಗೆ ತುರ್ತು ಸಂದರ್ಭಗಳಲ್ಲಿ ಮಾತ್ರ ಮೊಲ್ನು ಪಿರಾವರ್‌ ಮಾತ್ರೆ ಬಳಸಲು ಡಿಸಿಜಿಎ (DCGA) ಅನುಮೋದನೆ ನೀಡಿದೆ. ಟೊರೆಂಟ್‌, ಸಿಪ್ಲಾ, ಸನ್‌ ಫರ್ಮಾ, ಡಾ. ರೆಡ್ಡೀಸ್‌, ನ್ಯಾಟ್ಕೋ, ಮೈಲಾನ್‌ ಸೇರಿದಂತೆ ಒಟ್ಟಾರೆ 13 ಭಾರತೀಯ ಔಷಧ ಕಂಪನಿಗಳು ಕೋವಿಡ್‌ ಮಾತ್ರೆಗಳನ್ನು ಉತ್ಪಾದಿಸುತ್ತಿವೆ.

ಮಾತ್ರೆಯಿಂದ ಆಸ್ಪತ್ರೆ ಸೇರುವವರ ಪ್ರಮಾಣ ಇಳಿಕೆ : ಕೋವಿಡ್‌ ಸಾಂಕ್ರಾಮಿಕದ(Covid 19) ವಿರುದ್ಧ ಹೋರಾಡಲು ಅಮೆರಿಕ ಮೂಲದ ಮೆರ್ಕ್(Merck) ಕಂಪೆನಿ ‘ಮೋಲ್ನುಪಿರಾವಿರ್‌’ ಹೆಸರಿನ ಮಾತ್ರೆ ತಯಾರಿಸಿದೆ. ಈ ಮಾತ್ರೆಯು ಕೊರೋನಾ ಸೋಂಕಿತರು ಆಸ್ಪತ್ರೆ ಸೇರುವ ಮತ್ತು ಸೋಂಕಿತರ ಸಾವನ್ನು(Covid 19 Death) ಅರ್ಧದಷ್ಟು ಕಡಿಮೆ ಮಾಡುತ್ತದೆ ಎಂದು ಕಂಪೆನಿ ಹೇಳಿದೆ.

775 ಜನರ ಮೇಲೆ ಪ್ರಯೋಗ ನಡೆಸಿದ ಕಂಪೆನಿ ಪ್ರಯೋಗದಲ್ಲಿ ಯಶಸ್ವಿಯಾಗಿದ್ದು, ಶೀಘ್ರವೇ ಪ್ರಪಂಚಾದ್ಯಂತ ಪೂರೈಕೆ ಮಾಡಲು ಅಮೆರಿಕ(USA) ಆರೋಗ್ಯ ಅಧಿಕಾರಿಗಳ ಅನುಮತಿ ಕೇಳುವುದಾಗಿ ಕಂಪೆನಿ ಹೇಳಿದೆ. ಮಾಲ್ನುಪಿರೇವಿರ್‌ ಮಾತ್ರೆಯು ಪ್ರಯೊಗದ ವೇಳೆ ಶೀಘ್ರ ಫಲಿತಾಂಶವನ್ನು ನೀಡಿದೆ. ಮಾತ್ರೆ ನೀಡಿದ 5 ದಿನಗಳ ನಂತರ ಕೋವಿಡ್‌ ಸೋಂಕಿತರ ಗುಣಲಕ್ಷಣಗಳು ಅರ್ಧದಷ್ಟುಕಡಿಮೆಯಾಗಿದೆ.

ಸಾಮಾನ್ಯ ರೋಗ ಲಕ್ಷಣ ಹೊಂದಿದವರಿಂದ ತೀವ್ರ ರೋಗ ಲಕ್ಷಣ ಹೊಂದಿರುವವರ ಮೇಲೂ ಈ ಮಾತ್ರೆ ಪ್ರಯೋಗಿಸಲಾಗಿದೆ. ಈ ಮಾತ್ರೆ ಸೇವಿಸಿದ ನಂತರ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ ಇಳಿಮುಖವಾಗಿದ್ದು ಶೇ.7.3ರಷ್ಟುಜನ ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ ಅಥವಾ ಸಾವೀಗೀಡಾಗಿದ್ದಾರೆ. ಉಳಿದವರು ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಮೆರ್ಕ್ ಹಾಗೂ ಪಾಲುದಾರ ಸಂಸ್ಥೆ ರಿಡ್ಜ್‌ಬ್ಯಾಕ್‌ ಬಯೋಥೆರಪಿಟಿಕ್ಸ್‌ ಹೇಳಿದೆ.

ಒಮಿಕ್ರಾನ್ ಸ್ಫೋಟ : ರಾಜ್ಯದಲ್ಲಿ ಮಂಗಳವಾರ ಒಮಿಕ್ರೋನ್‌ (Omicron) ಘಟ ಸ್ಫೋಟವಾಗಿದ್ದು, ಒಂದೇ ದಿನ 149 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟಾರೆ ಒಮಿಕ್ರೋನ್‌ ಸೋಂಕಿತರ ಸಂಖ್ಯೆ 226ಕ್ಕೆ ಹೆಚ್ಚಳವಾಗಿದೆ. ಇದೇ ವೇಳೆ ನಗರದಲ್ಲಿ ಒಂದೇ ದಿನ ಮೂರು ಸಾವಿರ ಕೇಸ್‌ ದಾಖಲಾಗಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್‌ (Sudhakar) ತಿಳಿಸಿದ್ದಾರೆ. ರಾಜ್ಯದಲ್ಲಿ ಡಿ.1ರಿಂದ ಜನವರಿ 3ವರೆಗೂ 77 ಒಮಿಕ್ರೋನ್‌ ಪ್ರಕರಣಗಳು ವರದಿಯಾಗಿದ್ದವು. ಮಂಗಳವಾರ ಒಂದೇ ದಿನ 149 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಹಿಂದೆ ಒಂದೇ ದಿನ 23 ಹೊಸ ಪ್ರಕರಣಗಳು ಪತ್ತೆಯಾಗಿದ್ದವು. ಸೋಂಕಿತರ ಮಾಹಿತಿ ಆರೋಗ್ಯ ಇಲಾಖೆ (Health Department) ಬಹಿರಂಗ ಪಡಿಸಿಲ್ಲ. ಹೊಸದಾಗಿ 149 ಪ್ರಕರಣಗಳು ಪತ್ತೆಯಾಗಿರುವ ಕುರಿತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಟ್ವೀಟ್‌ ಮಾಡಿದ್ದಾರೆ.

ರಾಜಧಾನಿಯಲ್ಲಿ 3000 ಕೇಸು: ಬೆಂಗಳೂರಿನಲ್ಲಿ (Bengaluru) ಒಂದೇ ದಿನ ಮೂರು ಸಾವಿರ ಮಂದಿಗೆ ಸೋಂಕು ಸೋಂಕು ದೃಢಪಟ್ಟಿದ್ದು, ಬುಧವಾರದ ವರದಿಯಲ್ಲಿ ಮಾಹಿತಿ ಲಭ್ಯವಾಗಿದೆ. ಕಳೆದ ವಾರ 250 ಇದ್ದ ಪ್ರಕರಣಗಳು, ಸೋಮವಾರ ಒಂದು ಸಾವಿರಕ್ಕೆ, ಮಂಗಳವಾರ ಎರಡು ಸಾವಿರಕ್ಕೆ ಹೆಚ್ಚಳವಾಗಿದ್ದವು. ಮತ್ತೆ ಮೂರು ಸಾವಿರಕ್ಕೆ ಹೆಚ್ಚಿದೆ.