Asianet Suvarna News Asianet Suvarna News

Covid 19: ಕೇಜ್ರಿವಾಲ್‌, ಸುರ್ಜೇವಾಲಾ ಸೇರಿ ಅನೇಕ ಮುಖಂಡರಿಗೆ ಕೊರೋನಾ ಸೋಂಕು

*   ಬಿಜೆಪಿ ಸಂಸದ ಮನೋಜ್‌ ತಿವಾರಿಗೂ ಸಹ ಸೋಂಕು
*   ಬಾಬುಲ್‌ ಸುಪ್ರಿಯೋ 3ನೇ ಬಾರಿಗೆ ಕೊರೋನಾ
*   ಶಿವಸೇನೆ ಸಂಸದ ಅರವಿಂದ ಸಾವಂತ್‌ ಹಾಗೂ ಸಚಿವ ಏಕನಾಥ ಶಿಂದೆಗೂ ಸೋಂಕು 
 

Corona Infection for Many leaders, Including Kejriwal and Surjewal grg
Author
Bengaluru, First Published Jan 5, 2022, 4:58 AM IST

ನವದೆಹಲಿ(ಜ.05): ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌(Arvind Kejriwal), ಕರ್ನಾಟಕ ಕಾಂಗ್ರೆಸ್‌ ಪ್ರಭಾರಿ ರಣದೀಪ್‌ ಸುರ್ಜೇವಾಲಾ(Randeep Singh Surjewala) ಸೇರಿದಂತೆ ಅನೇಕ ರಾಜಕೀಯ ಮುಖಂಡರಿಗೆ ಕೋವಿಡ್‌ ಸೋಂಕು ಮಂಗಳವಾರ ದೃಢಪಟ್ಟಿದೆ.

ಕೇಜ್ರಿವಾಲ್‌ಗೆ ಮಂಗಳವಾರ ಸೋಂಕು ದೃಢಪಟ್ಟಿದ್ದು, ಮನೆಯಲ್ಲಿ ಐಸೋಲೇಟ್‌ ಆಗಿದ್ದಾರೆ. ಅವರ ಕುಟುಂಬಸ್ಥರು ಹಾಗೂ ಆಪ್ತ ಸಿಬ್ಬಂದಿ ಸಹ ಐಸೋಲೇಟ್‌ ಆಗಿದ್ದಾರೆ. ಸುರ್ಜೇವಾಲಾಗೆ ಕೆಮ್ಮು ಹಾಗೂ ಜ್ವರ ಇದ್ದು, ಮನೆಯಲ್ಲೇ ಐಸೋಲೇಶನ್‌ಗೆ ಒಳಗಾಗಿದ್ದಾರೆ.

New Covid-19 variant : ಫ್ರಾನ್ಸ್ ನಲ್ಲಿ ಪತ್ತೆಯಾಗಿದೆ IHU, ಒಮಿಕ್ರಾನ್ ಗಿಂತ ಡೇಂಜರ್!

ಇನ್ನು ಬಿಜೆಪಿ(BJP) ಸಂಸದ ಮನೋಜ್‌ ತಿವಾರಿಗೆ(Manoj Tiwari) ಸಹ ಸೋಂಕು ತಗುಲಿದ್ದು, ಐಸೋಲೇಶನ್‌ನಲ್ಲಿದ್ದಾರೆ. ಟಿಎಂಸಿ(TMC) ನಾಯಕ ಹಾಗೂ ಕೇಂದ್ರ ಮಾಜಿ ಸಚಿವ ಬಾಬುಲ್‌ ಸುಪ್ರಿಯೋ(Babul Supriyo) 3ನೇ ಬಾರಿಗೆ ಕೊರೋನಾ(Coronavirus) ಸೋಂಕಿಗೊಳಗಾಗಿದ್ದು, ಇವರ ತಂದೆ ಪತ್ನಿ ಹಾಗೂ ಇತರೆ ಕುಟುಂಬಸ್ಥರಿಗೂ ಪಾಸಿಟಿವ್‌ ಬಂದಿದೆ. ಮಹಾರಾಷ್ಟ್ರದ ಶಿವಸೇನೆ ಸಂಸದ ಅರವಿಂದ ಸಾವಂತ್‌ ಹಾಗೂ ಸಚಿವ ಏಕನಾಥ ಶಿಂದೆ ಅವರಿಗೂ ಸೋಂಕು ದೃಢಪಟ್ಟಿದೆ.

ಲಾಕ್‌ಡೌನ್ ಸೂಚನೆ ನೀಡಿದ ಮೇಯರ್, ಮುಂಬೈನಲ್ಲಿ ಹೆಚ್ಚಿತು ಆತಂಕ!

ಮುಂಬೈ: ದೇಶದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಕೊರೋನಾ ವೈರಸ್(Coronavius) ಗಣನೀಯವಾಗಿ ಏರಿಕೆಯಾಗಿದೆ. ಮುಂಬೈನಲ್ಲಿ(Mumbai) ಪರಿಸ್ಥಿತಿ ಕೈಮೀರುತ್ತಿದೆ. ಪ್ರತಿ ದಿನ 10,000 ಅಧಿಕ ಹೊಸ ಪ್ರಕರಣಗಳು ದಾಖಲಾಗುತ್ತಿದೆ. ದಿನದಿಂದ ದಿನಕ್ಕೆ ಮುಂಬೈನಲ್ಲಿ ಕೋವಿಡ್ ಪ್ರಕರಣ ದ್ವಿಗಣಗೊಳ್ಳುತ್ತಿದೆ.  ಇದರ ಬೆನ್ನಲ್ಲೇ ಮುಂಬೈ ಮೇಯರ್ ಕಿಶೋರಿ ಪೆಡ್ನೆಕರ್ ಎಚ್ಚರಿಕೆ ನೀಡಿದ್ದಾರೆ. ಪ್ರತಿ ದಿನ 20,000 ಕೇಸ್ ದಾಖಲಾದರೆ ಲಾಕ್‌ಡೌನ್(Lockdown) ಖಚಿತ ಎಂದಿದ್ದಾರೆ. 

ಒಂದೇ ವಾರದಲ್ಲಿ ಮುಂಬೈನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 10,000ಕ್ಕ ಏರಿಕೆಯಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ(Covid Guidelines) ಪ್ರತಿ ದಿನ 20,000 ಹೊಸ ಕೊರೋನಾ ಕೇಸ್ ದಾಖಲಾದರೆ ಲಾಕ್‌ಡೌನ್ ಅನಿವಾರ್ಯವಾಗಿದೆ ಎಂದು ಕಿಶೋರಿ ಪೆಡ್ನೆಕರ್ ಹೇಳಿದ್ದಾರೆ. ಮುಂದಿನ 2ರಿಂದ 3 ದಿನಗಳ ಕೊರೋನಾ ವರದಿ ಮೇಲೆ ಎಲ್ಲವೂ ನಿರ್ಧಾರವಾಗಲಿದೆ ಎಂದು ಕಿಶೋರಿ ಪೆಡ್ನೆಕರ್ ಹೇಳಿದ್ದಾರೆ.

ಮುಂಬೈನಲ್ಲಿ ಕೊರೋನಾ ಹೆಚ್ಚಳ ಕಾರಣ ಕಠಿಣ ಮಾರ್ಗಸೂಚಿ ಜಾರಿಗೊಳಿಸಲಾಗಿದೆ. ಆದರೆ ಸಾರ್ವಜನಿಕ ಪ್ರದೇಶದಲ್ಲಿ ಮಾಸ್ಕ್ (Mask) ಧರಿಸುವುದು, ಸಾಮಾಜಿಕ ಅಂತರ(Social Distance) ಕಾಪಾಡಿಕೊಳ್ಳುವುದನ್ನು ಜನರು ಮರೆತಿದ್ದಾರೆ. ಚಿತ್ರಮಂದಿರ, ಮಾರುಕಟ್ಟೆ, ಗಾರ್ಡನ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಜನಸಂದಣಿ ಹಾಗೇ ಇದೆ. ಈಗಾಗಲೇ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸಭೆ ನಡೆಸಿದ್ದಾರೆ. ಅಗತ್ಯಬಿದ್ದರೆ ಮಿನಿ ಲಾಕ್‌ಡೌನ್(Semi Lockdown) ಜಾರಿಗೊಳಿಸಲು ಸೂಚಿಸಿದ್ದಾರೆ ಎಂದು ಕಿಶೋರಿ ಪೆಡ್ನೆಕರ್ ಹೇಳಿದ್ದಾರೆ.

Covid in UP: ಚುನಾವಣೆಗೂ ಮುನ್ನ ಕೊರೋನಾ ಸ್ಪೋಟ, ಮೇದಾಂತ ಆಸ್ಪತ್ರೆಯ 40 ಸಿಬ್ಬಂದಿ ಪಾಸಿಟಿವ್!

ಎಪ್ರಿಲ್ 18ರ ಬಳಿಕ ಮುಂಬೈನಲ್ಲಿ ಕೊರೋನಾ ವರೈಸ್ ಪ್ರಕರಣ ಗಣನೀಯವಾಗಿ ತಗ್ಗಿತ್ತು. ಇದೀಗ ಪ್ರತಿ ದಿನ 8,000ಕ್ಕೂ ಅಧಿಕ ಕೇಸ್ ದಾಖಲಾಗಿದೆ. ಸೋಮವಾರ(ಜ.03) 8,082 ಕೊರೋನಾ ಪ್ರಕರಣ ದಾಖಲಾಗಿದೆ. ಜ.04 10,860  ಕೋವಿಡ್ ಪ್ರಕರಣ ದಾಖಲಾಗಿದೆ. ಇದರಲ್ಲಿ 40 ಓಮಿಕ್ರಾನ್(omicron virus) ಕೇಸ್ ಆಗಿದೆ. ಇನ್ನು ಸೋಮವಾರ ಇಬ್ಬರು ಕೊರೋನಾಗೆ ಬಲಿಯಾಗಿದ್ದಾರೆ.  ಸದ್ಯ ಮುಂಬೈನಲ್ಲಿ 368 ಓಮಿಕ್ರಾನ್ ಕೇಸ್ ಪತ್ತೆಯಾಗಿದೆ.  ಮುಂಬೈನಲ್ಲಿ ಸದ್ಯ ಕೊರೋನಾ ಪ್ರಕರಣಗಳ ಒಟ್ಟು ಸಂಖ್ಯೆ 8,07,602 ಕ್ಕೆ ಏರಿಕೆಯಾಗಿದ್ದರೆ, ಸಾವಿನ ಸಂಖ್ಯೆ 16,379ಕ್ಕೆ ಏರಿಕೆಯಾಗಿದೆ. 

ಮುಂಬೈ ಮಹಾನಗರ ಪಾಲಿಕೆ ಈಗಾಗಲೇ ಹಲವು ಕ್ರಮಗಳನ್ನು ಜಾರಿಗೊಳಿಸಿದೆ. ಜನವರಿ 31ರ ವರೆಗೆ 1 ರಿಂದ 9ನೇ ತರಗತಿ(School) ಹಾಗೂ 11ನೇ ತರಗತಿ ಕ್ಲಾಸ್‌ಗಳನ್ನು ಮುಚ್ಚಲಾಗಿದೆ. 10ನೇ ತರಗತಿ ಹಾಗೂ 12ನೇ ತರಗತಿ ಮಕ್ಕಳನ್ನು ಶಾಲೆಗೆ ಹಾಜರಾಗಲು ಅನುಮತಿ ನೀಡಲಾಗಿದೆ. ಇನ್ನು 15 ರಿಂದ 18 ವರ್ಷದೊಳಗಿನ ಲಸಿಕೆ(Vaccination) ಪಡೆದ ಮಕ್ಕಳು ಅಂದರೆ 9 ಹಾಗೂ 11ನೇ ತರಗತಿ ಮಕ್ಕಳು ಎರಡೂ ಡೋಸ್ ಪಡೆದಿದ್ದರೆ ಶಾಲೆಗೆ ಹಾಜರಾಗಬಹುದು. 

Follow Us:
Download App:
  • android
  • ios