ಚಂಡೀಘಡ(ಏ.  07)  ಮಹಾರಾಷ್ಟ್ರ, ಪಂಜಾಬ್ ಸೇರಿದಂತೆ ಕೆಲ ರಾಜ್ಯ ಸರ್ಕಾರಗಳು ಕೊರೋನಾ ವಾಕ್ಸಿನೇಷನ್ ಪ್ರಕ್ರಿಯೆಯನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಈ ನಡುವೆ ಕೊರೋನಾ ನಿಯಂತ್ರಣಕ್ಕಾಗಿ ಪಂಜಾಬ್ ಸರ್ಕಾರ ನೈಟ್ ಕರ್ಫ್ಯೂ ವಿಧಿಸಿದೆ. ಏಪ್ರಿಲ್  30 ರ ವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ. 

ಮುಂದಿನ ಆದೇಶ ನೀಡುವವರೆಗೂ ರಾಜ್ಯದಲ್ಲಿ ಯಾವುದೇ ರಾಜಕೀಯ ಸಮಾವೇಶ ನಡೆಸುವಂತೆ ಇಲ್ಲ ಎಂದು ಸಿಎಂ ಅಮರೀಂದರ್ ಸಿಂಗ್ ನೇತೃತ್ವದ ಸಂಪುಟ ತೀರ್ಮಾನ ತೆಗೆದುಕೊಂಡಿದೆ. ಕೊರೋನಾ ಪರಿಸ್ಥಿತಿ ನಿಯಂತ್ರಣಕ್ಕೆ ಬರದಿದ್ದರೆ ಕಠಿಣ ಕ್ರಮ ಅನಿವಾರ್ಯ ಎಂದು ಈ ಹಿಂದೆ ಎಚ್ಚರಿಕೆ ನೀಡಿದ್ದರು. 

ಕೊರೋನಾ ಆರ್ಭಟ; ಅಸಲಿ ಕಾರಣ ಹೇಳಿದ ಹರ್ಷವರ್ಧನ್! 

ರಾಜ್ಯಗಳು ಕೊರೋನಾ ವಾಕ್ಸೀನ್ ಸರಿಯಾಗಿ ನೀಡದೆ  ಲೋಪ ಮುಚ್ಚಿಹಾಕುವ ಯತ್ನ ಮಾಡುತ್ತಿವೆ.  ಆರೋಪಗಳಿಂದ ಯಾವುದು ಸಾಧ್ಯವಾಗುವುದಿಲ್ಲ. ಛತ್ತೀಸ್‌ ಘಡದಲ್ಲಿಯೂ ಸಾವಿನ ಸಂಖ್ಯೆ ಏರಿಕೆಯಲ್ಲಿ ಸಾಗಿದೆ ಎಂದು ಇಡೀ ದೇಶದ ವಿವರ ನೀಡಿದರು. ಎಲ್ಲ ರಾಜ್ಯಗಳು ನೀಡುರುವ  ಜವಾಬ್ದಾರಿ  ಮೊದಲು ಸರಿಯಾಗಿ ಪಾಲಿಸಿದರೆ ಮುಂದಿನ ಹಂತಗಳ ಬಗ್ಗೆ ಚರ್ಚೆ ಮಾಡಬಹುದು ಎಂದು  ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್  ಹೇಳಿದ್ದರು.