ದೇಶದಲ್ಲಿ ಕೊರೋನಾ ಆರ್ಭಟ; ಅಸಲಿ ಕಾರಣ ಹೇಳಿದ ಹರ್ಷವರ್ಧನ್!

ಭಾರತದಲ್ಲಿ ಏರುಗತಿಯ ಕೊರೋನಾ/ ಇದೆಕ್ಕೆಲ್ಲ ಮೂಲ ಕಾರಣ ತಿಳಿಸಿದ  ಕೇಂದ್ರ ಆರೋಗ್ಯ ಸಚಿವ/ ಲಸಿಕೆ ವಿತರಣೆಯಲ್ಲಿ ರಾಜ್ಯಗಳ ಕಾರ್ಯ ಸಮರ್ಪಕವಾಗಿಲ್ಲ/ ಜನರು ಕೊರೋನಾ ನಿಯಮ ಮರೆತಿದ್ದಾರೆ

Health Minister Harsh Vardhan reveals main reason behind surge in coronavirus in India mah

ಬೆಂಗಳೂರು( ಏ. 07)  ಒಂದು ಕಡೆ  ಚೇತರಿಕೆ  ಸಂಖ್ಯೆ ಜಾಸ್ತಿಯಿದ್ದರೂ ಕೊರೋನಾ ಸೋಂಕಿಗೆ ಗುರಿಯಾಗುತ್ತಿರುವವರ ಸಂಖ್ಯೆಯೂ ದ್ವಿಗುಣವಾಗುತ್ತಿರುವುದು ಆತಂಕ ತಂದಿದೆ.

ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಪರಿಸ್ಥಿತಿಯನ್ನು ಜನರ ಮುಂದೆ ಇಟ್ಟಿದ್ದಾರೆ.  ರಾಜ್ಯ ಸರ್ಕಾರಗಳು ಕೊರೋನಾ ನಿಯಂತ್ರಣದಲ್ಲಿ ಬೇಜವಾಬ್ದಾರಿ ತಾಳಿವೆ ಎಂಬುದು ಅವರ  ಪ್ರಮುಖ ಆರೋಪ.  ಜನರು ಸಹ ನೀತಿ ನಿಯಮಗಳಿಂದ ಹಿಂದೆ ಸರಿಯುತ್ತಿದ್ದಾರೆ ಎಂದಿದ್ದಾರೆ. 

ಕಳೆದ ಒಂದು ವರ್ಷದಿಂದ  ಕೊರೋನಾ ನಿಯಂತ್ರಣದಲ್ಲಿ ಇಡೀ ದೇಶವೇ ಭಾಗಿಯಾಗಿದ್ದು ಕಲಿತ ಪಾಠಗಳನ್ನು ಮರೆಯಬಾರದು ಎಂದಿದ್ದಾರೆ. ಹದಿನೆಂಟು ವರ್ಷ ತುಂಬಿದ ಎಲ್ಲರಿಗೂ ಲಸಿಕೆ ನೀಡಬೇಕು ಎಂಬ ಒತ್ತಾಯ ನಾಯಕರಿಂದ ಕೇಳಿಬಂದಿದೆ.  ಕೇಂದ್ರ ಸರ್ಕಾರ ಲಸಿಕೆ ವಿತರಣೆಯ ಎಲ್ಲ ಮಾಹಿತಿ ಪಡೆದುಕೊಳ್ಳುತ್ತಿದ್ದು ಸೂಕ್ತ ಸಲಹೆಗಳನ್ನು ಅಳವಡಿಸಿಕೊಂಡಿದೆ. ರಾಜ್ಯ ಸರ್ಕಾರಗಳ ಸಹಯೋಗದಲ್ಲಿಯೇ ಲಸಿಕೆ ವಿತರಣಾ ಕೆಲಸ ನಡೆಯುತ್ತಿದೆ.

ಕೊರೋನಾ ತಡೆಗೆ ಬೆಂಗಳೂರಿನಲ್ಲಿ ನಿಷೇಧಾಜ್ಞೆ

ಪ್ರಪಂಚದಲ್ಲಿಯೇ ಅತಿದೊಡ್ಡ ಲಸಿಕಾ ಅಭಿಯಾನ ಭಾರತದಲ್ಲಿ ಆರಂಭವಾಗಿದೆ. ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುವ ಗುರಿಯನ್ನು ಹಂತಹಂತವಾಗಿ ಸಾಧಿಸಲಾಗುತ್ತಿದೆ. ರಾಜ್ಯ ಸರ್ಕಾರಗಳು ಹದಿನೆಂಟು ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಬೇಕು ಎಂದು ಹೇಳಿವೆ. ಆದರೆ ಹಿರಿಯ ನಾಗರಿಕರಿಗೆಲ್ಲರಿಗೂ ಲಸಿಕೆ ನೀಡಲಾಗಿದೆಯಾ? ಆ ಕೆಲಸ ಸಮರ್ಪಕವಾಗಿ ನಡೆದಿದೆಯೇ? ಎಂಬ ಪ್ರಶ್ನೆ ಸಹ ಹಾಗೆ ಉಳಿದುಕೊಳ್ಳಲಿದೆ ಎಂದರು.

ಮಹಾರಾಷ್ಟ್ರದಲ್ಲಿ ಶೇ. 86 ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ಮೂಲಕ ಲಸಿಕೆ ನೀಡಲಾಗಿದೆದೆ. ದೆಹಲಿ ಮತ್ತು ಪಂಜಾಬ್‌ಗೆ ಸಮಾನ ಈ ಸಂಖ್ಯೆ ಶೇ. 72 ಮತ್ತು ಶೇ. 64.   ಆದರೆ ಇನ್ನೊಂದು ಕಡೆ 10 ಭಾರತೀಯ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶ  ಶೇ. 90  ಸಾಧಿಸಿವೆ. ಮಹಾರಾಷ್ಟ್ರವು ಕೇವಲ ಶೇ. 41 ರಷ್ಟು ಆರೋಗ್ಯ ಕಾರ್ಯಕರ್ತರಿಗೆ ಎರಡನೇ ಡೋಸ್ ನೀಡಿ ಲಸಿಕೆ ನೀಡಿದೆ. ದೆಹಲಿ ಮತ್ತು ಪಂಜಾಬ್ ನಲ್ಲಿ ಈ ಸಂಖ್ಯೆ ಶೇ.  41 ಮತ್ತು ಶೇ.  27. 12 ಭಾರತೀಯ ರಾಜ್ಯಗಳು ಶೇ. 60 ಪ್ರಮಾಣದಲ್ಲಿ ಎರಡನೇ ಡೋಸ್ ನೀಡಿವೆ.

ರಾಜ್ಯಗಳು ಕೊರೋನಾ ವಾಕ್ಸೀನ್ ಸರಿಯಾಗಿ ನೀಡದೆ  ಲೋಪ ಮುಚ್ಚಿಹಾಕುವ ಯತ್ನ ಮಾಡುತ್ತಿವೆ.  ಆರೋಪಗಳಿಂದ ಯಾವುದು ಸಾಧ್ಯವಾಗುವುದಿಲ್ಲ. ಛತ್ತೀಸ್‌ ಘಡದಲ್ಲಿಯೂ ಸಾವಿನ ಸಂಖ್ಯೆ ಏರಿಕೆಯಲ್ಲಿ ಸಾಗಿದೆ ಎಂದು ಇಡೀ ದೇಶದ ವಿವರ ನೀಡಿದರು. ಎಲ್ಲ ರಾಜ್ಯಗಳು ನೀಡುರುವ  ಜವಾಬ್ದಾರಿ  ಮೊದಲು ಸರಿಯಾಗಿ ಪಾಲಿಸಿದರೆ ಮುಂದಿನ ಹಂತಗಳ ಬಗ್ಗೆ ಚರ್ಚೆ ಮಾಡಬಹುದು ಎಂದು  ಕೇಂದ್ರ ಆರೋಗ್ಯ ಸಚಿವರು ಹೇಳಿದರು.

ಬೆಂಗಳೂರಿನ ಉಚಿತ ಕೊರೋನಾ ಲಸಿಕಾ ಕೇಂದ್ರಗಳ ಪಟ್ಟಿ..ಹತ್ತಿರದಲ್ಲೇ ಇವೆ!

ಕರ್ನಾಟಕ ಎಲ್ಲಿದೆ?   ಕರ್ನಾಟಕದಲ್ಲಿ ಈವರೆಗೆ 48 ಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡಲಾಗಿದೆ ಎಂದು  ಆರೋಗ್ಯ ಸಚಿವ ಸುಧಾಕರ್ ತಿಳಿಸಿದ್ದಾರೆ. ದೇಶದಲ್ಲಿ ವ್ಯಾಕ್ಸಿನೇಷನ್ ವಿಷಯದಲ್ಲಿ ಕರ್ನಾಟಕ ಆರನೇ ಸ್ಥಾನದಲ್ಲಿದೆ.

ಲಸಿಕೆ ಪಡೆದ 22.5 ಲಕ್ಷಕ್ಕೂ ಹೆಚ್ಚು ಜನರು 60 ವರ್ಷಕ್ಕಿಂತ ಮೇಲ್ಪಟ್ಟವರು.  45-59 ವಯಸ್ಸಿನವರ ನಡುವೆ ಇರುವ  10.4 ಲಕ್ಷ ಜನರು ಲಸಿಕೆಗೆ ಒಳಗಾಗಿದ್ದಾರೆ.  ಕೇಂದ್ರ ಸರ್ಕಾರವು ನಮ್ಮ ಕೋರಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಹೆಚ್ಚುವರಿ 15 ಲಕ್ಷ ಲಸಿಕೆ ಕಳುಹಿಸಿಕೊಟ್ಟಿದೆ ಎಂದು ತಿಳಿಸಿದ್ದಾರೆ.

ಲಸಿಕೆ ನೀಡಿಕೆ ಭಾರತವೇ ಟಾಪ್; ಮಹತ್ವದ ಬೆಳವಣಿಗೆಯಲ್ಲಿ, ಭಾರತವು  ಯುಎಸ್‌ಎ ಹಿಂದಿಕ್ಕಿ ಅತಿ ವೇಗದ ಲಸಿಕೆ ನೀಡುವ ದೇಶವಾಗಿ ಹೊರಹೊಮ್ಮಿದೆ. ಭಾರತದಲ್ಲಿ ಸರಾಸರಿ ದಿನಕ್ಕೆ 30,93,861 ಲಸಿಕೆ  ನೀಡಲಾಗುತ್ತಿದೆ. ಈ ವಿಚಾರವನ್ನು ಸಂಸದ ರಾಜೀವ್ ಚಂದ್ರಶೇಖರ್ ಸೋಶಿಯಲ್ ಮೀಡಿಯಾ ಮುಖೇನ ಹಂಚಿಕೊಂಡಿದ್ದಾರೆ. 

 

Latest Videos
Follow Us:
Download App:
  • android
  • ios