ನವದೆಹಲಿ(ಮಾ.27): ಇತ್ತೀಚೆಗಷ್ಟೇ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೋನಾ ಲಸಿಕೆ ನೀಡಲು ಅನುಮತಿ ನೀಡಿರುವ ಕೇಂದ್ರ ಸರ್ಕಾರ, ಇನ್ನಷ್ಟುವಯೋಮಾನದ ಜನರನ್ನು ಲಸಿಕೆ ಅಭಿಯಾನದಲ್ಲಿ ಸೇರಿಸಿಕೊಳ್ಳಲು ಚಿಂತನೆ ಆರಂಭಿಸಿದೆ.

'ಹಿಂದೂಸ್ತಾನ್ ಜಿಂದಾಬಾದ್; ಪಾಕಿಸ್ತಾನ್ ಮುರ್ದಾಬಾದ್' ಘೋಷಣೆ ಕೂಗು ಎಂದು ಹಲ್ಲೆ

ಶುಕ್ರವಾರ ಸಮಾರಂಭವೊಂದರಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಡಾ| ಹರ್ಷವರ್ಧನ್‌, ‘ಈ ಮೊದಲು 60 ವರ್ಷ ಮೇಲ್ಪಟ್ಟಎಲ್ಲರಿಗೂ ಲಸಿಕೆ ವಿತರಣೆಗೆ ಅನುಮತಿಸಿದ್ದೆವು. ಈಗ 45 ವರ್ಷ ಮೇಲ್ಪಟ್ಟಎಲ್ಲರಿಗೂ ಲಸಿಕೆ ನೀಡುವಂತೆ ಹೊರಡಿಸಿದ ಆದೇಶ ಏಪ್ರಿಲ್‌ 1ರಂದು ಜಾರಿಗೆ ಬರಲಿದೆ. ಈಗ ಇನ್ನಷ್ಟು ವಯೋಮಾನದ ಜನರನ್ನು ಲಸಿಕೆ ಅಭಿಯಾನದ ವ್ಯಾಪ್ತಿಯಲ್ಲಿ ತರುವ ಚಿಂತನೆಯನ್ನು ಈಗಾಗಲೇ ಆರಂಭಿಸಿದ್ದೇವೆ’ ಎಂದರು.

Fact Check: ಕೊರೋನಾ ಲಸಿಕೆಯಿಂದ ವೈದ್ಯೆ ಸಾವು, ವರದಿಯಲ್ಲಿ ಸಿಕ್ತು ಬೇರೆ ಸುಳಿವು!

ಈ ಮೂಲಕ ಲಸಿಕೆ ನೀಡಿಕೆಯನ್ನು ದೇಶದ ಎಲ್ಲಾ ಅರ್ಹ ವಯೋಮಾನದವರಿಗೂ ಮುಕ್ತ ಮಾಡುವ ಸುಳೀವು ನೀಡಿದ್ದಾರೆ.

ಇದೇ ವೇಳೆ ಭಾರತೀಯ ಉತ್ಪಾದಿತ ಲಸಿಕೆಗಳನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ ಎಂದು ಅವರು ಸಮಾಧಾನ ವ್ಯಕ್ತಪಡಿಸಿದರು.