Asianet Suvarna News Asianet Suvarna News

Coronavirus: ದೇಶದಲ್ಲಿಯೂ ತಗ್ಗಿದ ಕೊರೋನಾ.. ಕರ್ನಾಟಕದಲ್ಲಿ ಸಾವಿರಕ್ಕಿಂತ ಕಡಿಮೆ

*  13,405 ಕೋವಿಡ್‌ ಕೇಸು: 54 ದಿನದ ಕನಿಷ್ಠ

* 49 ದಿನಗಳ ಬಳಿಕ 2 ಲಕ್ಷಕ್ಕಿಂತ ಕೆಳಗಿಳಿದ ಸಕ್ರಿಯ ಪ್ರಕರಣ, 235 ಸಾವು

* ಪಾಸಿಟಿವಿಟಿ ದರ ಶೇ.1.24ಕ್ಕೆ ಇಳಿಕೆ 

* ಕರ್ನಾಟಕದ ಜಿಲ್ಲೆಯಲ್ಲಿ ಒಂದಂಕಿ ಸೋಂಕು 

COVID 19 Coronavirus Active cases in India settle below two lakh after 49 days mah
Author
Bengaluru, First Published Feb 23, 2022, 3:01 AM IST

ನವದೆಹಲಿ (ಫೆ. 23) ದೇಶದಲ್ಲಿ (India)ದೈನಂದಿನ ಕೋವಿಡ್‌ (Coronavirus) ಪ್ರಕರಣಗಳು ಮತ್ತಷ್ಟುಕಡಿಮೆಯಾಗಿದ್ದು, ಮಂಗಳವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ ಹೊಸದಾಗಿ 13,405 ಪ್ರಕರಣಗಳು ದಾಖಲಾಗಿವೆ. ಇದು 54 ದಿನದ ಕನಿಷ್ಠ.

ಇದೇ ಅವಧಿಯಲ್ಲಿ ಒಟ್ಟು 235 ಸೋಂಕಿತರು ಸಾವಿಗೀಡಾಗಿದ್ದಾರೆ. 49 ದಿನಗಳ ಬಳಿಕ ಸಕ್ರಿಯ ಪ್ರಕರಣಗಳು 2 ಲಕ್ಷಕ್ಕಿಂತ ಕಡಿಮೆ ದಾಖಲಾಗಿದೆ. ಕಳೆದ 24 ತಾಸುಗಳಲ್ಲಿ 21,056 ಪ್ರಕರಣಗಳು ಕಡಿಮೆಯಾಗುವ ಮೂಲಕ ಸಕ್ರಿಯ ಪ್ರಕರಣಗಳು 1.81 ಲಕ್ಷಕ್ಕೆ ಕುಸಿದಿದೆ.

ಈ ಮೂಲಕ ಒಟ್ಟು ಪ್ರಕರಣಗಳಿಗೆ ಹೋಲಿಸಿದರೆ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ.0.42ರಷ್ಟಿದೆ. ದೈನಂದಿನ ಸೋಂಕು ಸತತ 16 ದಿನಗಳಿಂದ 1 ಲಕ್ಷಕ್ಕಿಂತ ಕಡಿಮೆ ದಾಖಲಾಗುತ್ತಿದೆ. ಇನ್ನು ದೈನಂದಿನ ಪಾಸಿಟಿವಿಟಿ ದರ ಶೇ.1.24ರಷ್ಟಿದ್ದು, ವಾರದ ಪಾಸಿಟಿವಿಟಿ ದರ ಶೇ.1.20ರಷ್ಟುದಾಖಲಾಗಿದೆ. ದೇಶದಲ್ಲಿ ಈವರೆಗೆ 175.83 ಕೋಟಿ ಡೋಸ್‌ ಲಸಿಕೆ ವಿತರಿಸಲಾಗಿದೆ.

ಜಿಲ್ಲೆಯಲ್ಲಿ ಒಂದಂಕಿ ಸೋಂಕು:  ಕರ್ನಾಟಕದ 20 ಜಿಲ್ಲೆಗಳಲ್ಲಿ ಒಂದಂಕಿಯಲ್ಲಿ ಕೋವಿಡ್‌ ಸೋಂಕು ಪ್ರಕರಣ ವರದಿಯಾಗಿದ್ದು, ಮಂಗಳವಾರ 767 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 29 ಮಂದಿ ಮರಣವನ್ನಪ್ಪಿದ್ದಾರೆ. ಮೂರನೆ ಅಲೆಯಲ್ಲಿ ಮೊದಲ ಬಾರಿಗೆ ಕೆಲವು ಜಿಲ್ಲೆಗಳಲ್ಲಿ ಹೊಸ ಪ್ರಕರಣ ವರದಿಯಾಗಿಲ್ಲ. ರಾಯಚೂರು, ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಹೊಸ ಪ್ರಕರಣ ದಾಖಲಾಗಿಲ್ಲ.

Coronavirus: ಕೊರೋನಾ ಎಲ್ಲ ನಿಯಮಗಳಿಗೆ ಗುಡ್ ಬೈ ಹೇಳಿದ ಇಂಗ್ಲೆಂಡ್

ಉಳಿದಂತೆ ಹಾವೇರಿ ಮತ್ತು ಬೀದರ್‌ನಲ್ಲಿ ತಲಾ 1, ರಾಮನಗರ, ಗದಗ, ಚಿಕ್ಕಬಳ್ಳಾಪುರ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ತಲಾ 2, ದಾವಣಗೆರೆ, ಕಲಬುರಗಿ ಮತ್ತು ವಿಜಯಪುರ ಜಿಲ್ಲೆಯಲ್ಲಿ ತಲಾ 3, ಬೆಂಗಳೂರು ಗ್ರಾಮಾಂತರ 4, ಮಂಡ್ಯ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ತಲಾ 5 ಪ್ರಕರಣ ವರದಿಯಾಗಿದೆ.

ಇದೇ ವೇಳೆ ಬೆಂಗಳೂರು ನಗರದಲ್ಲಿ 552 ಪ್ರಕರಣ ವರದಿಯಾಗಿದೆ. ರಾಜ್ಯದ ಒಟ್ಟು ಪ್ರಕರಣದಲ್ಲಿ ರಾಜ್ಯ ರಾಜಧಾನಿಯ ಪಾಲು ಶೇ.71ಕ್ಕೆ ಜಿಗಿದಿದೆ. ಉಳಿದಂತೆ ಮೈಸೂರು 23, ಬೆಳಗಾವಿ 22, ತುಮಕೂರು 21, ದಕ್ಷಿಣ ಕನ್ನಡ 20, ಉಡುಪಿ 15, ಕೊಡಗು 14, ಶಿವಮೊಗ್ಗ, ಬಳ್ಳಾರಿ ಮತ್ತು ಧಾರವಾಡ ಜಿಲ್ಲೆಯಲ್ಲಿ ತಲಾ 10 ಪ್ರಕರಣ ಪತ್ತೆಯಾಗಿದೆ.

58,459 ಮಂದಿಯ ಕೋವಿಡ್‌ ಪರೀಕ್ಷೆ ನಡೆದಿದ್ದು ಶೇ.1.31 ಪಾಸಿಟಿವಿಟಿ ದರ ದಾಖಲಾಗಿದೆ. ಬೆಂಗಳೂರು ನಗರದಲ್ಲಿ 14, ದಕ್ಷಿಣ ಕನ್ನಡ 3, ಧಾರವಾಡ, ತುಮಕೂರು ಮತ್ತು ಉಡುಪಿಯಲ್ಲಿ ತಲಾ 2, ವಿಜಯಪುರ, ಯಾದಗಿರಿ, ಶಿವಮೊಗ್ಗ, ಕಲಬುರಗಿ, ಬಾಗಲಕೋಟೆ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ತಲಾ ಒಬ್ಬರು ಮರಣವನ್ನಪ್ಪಿದ್ದಾರೆ. 
ರಾಜ್ಯದಲ್ಲಿ ಮಂಗಳವಾರ 1.07 ಲಕ್ಷ ಮಂದಿ ಕೋವಿಡ್‌ ಲಸಿಕೆ ಪಡೆದಿದ್ದಾರೆ. 

ನಿಯಮಕ್ಕೆ ಗುಡ್ ಬೈ:

ಕೋವಿಡ್‌ (Coronavirus)  ಜೊತೆಗೆ ಬದುಕು ಸಾಗಿಸಲು ಹೊಸ ನಿಯಮ ರೂಪಿಸಿರುವ ಬ್ರಿಟನ್‌  ಸರ್ಕಾರ, ಇನ್ಮುಂದೆ ಕೋವಿಡ್‌ ಸೋಂಕಿತರು ಸ್ವಯಂ ಐಸೋಲೇಷನ್‌ಗೆ ಒಳಗಾಗುವುದು ಕಡ್ಡಾಯ ಅಲ್ಲ, ಗುರುವಾರದಿಂದಲೇ ಈ ನಿಮಯ ಜಾರಿಗೆ ಬರಲಿದೆ ಎಂದು ತಿಳಿಸಿದೆ. ಹಾಗೆಯೇ ಏಪ್ರಿಲ್‌ನಿಂದ ಸಾಮೂಹಿಕ ಕೊರೋನಾ ಪರೀಕ್ಷೆಯನ್ನೂ ನಿಲ್ಲಿಸುವುದಾಗಿ ಘೋಷಿಸಿದೆ.

ಹೊಸ ನಿಯಮಗಳ ಬಗ್ಗೆ ಮಾಹಿತಿ ನೀಡಿದ ಪ್ರಧಾನಿ(Boris Johnson) ಬೋರಿಸ್‌ ಜಾನ್ಸನ್‌, 2020ರಲ್ಲಿ ಕೊರೋನಾ ಸಾಂಕ್ರಾಮಿಕ ನಿಯಂತ್ರಣಕ್ಕೆಂದು ಜಾರಿಗೆ ತರಲಾಗಿರುವ ಎಲ್ಲಾ ತಾತ್ಕಾಲಿಕ ಕಾನೂನುಗಳು ಮುಂದಿನ ತಿಂಗಳಿನಿಂದ ಅಸ್ತಿತ್ವದಲ್ಲಿ ಇರುವುದಿಲ್ಲ. ದೇಶದ ಆರೋಗ್ಯ ಕಾರ‍್ಯತಂತ್ರವು ಈಗ ಲಸಿಕೆ ಮತ್ತು ಚಿಕಿತ್ಸೆಗಳ ಕಡೆಗೆ ಗಮನ ನೀಡಿದೆ. ಸಾಂಕ್ರಾಮಿಕ ರೋಗ ಅಂತ್ಯವಾಗದಿದ್ದರೂ ಒಮಿಕ್ರೋನ್‌   ಉತ್ತುಂಗವನ್ನು ದಾಟಿದ್ದೇವೆ. ಸದ್ಯ ಬ್ರಿಟನ್‌ನಲ್ಲಿ ಕೊರೋನಾ ಕಾರಣದಿಂದ 10,000ಕ್ಕಿಂತ ಕಡಿಮೆ ಜನರು ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ ಎಂದಿದ್ದರು. 

Follow Us:
Download App:
  • android
  • ios