Asianet Suvarna News Asianet Suvarna News

ಮಳೆಯಲಿ ಜೊತೆಯಲಿ ಕದ್ದು ಮುಚ್ಚಿ ಮಹಡಿ ಮೇಲೆ ಕಿಸ್ಸಿಂಗ್, ರೋಮ್ಯಾನ್ಸ್ ವಿಡಿಯೋ ವೈರಲ್!

ಮಳೆಯಲಿ ಜೊತೆಯಲಿ, ಮಹಡಿ ಮೇಲೆ ಕೌಂಪೌಂಡ್ ದಾಟಿದ ಚುಂಬನ ಭಾರಿ ವೈರಲ್ ಆಗಿದೆ. ಜೋರು ಮಳೆಯಲ್ಲಿ ಮೆಲ್ಲನೆ ಮಹಡಿ ಮೇಲೆ ತೆರಳಿದ ಯುವತಿ ಪಕ್ಕದ ಕಟ್ಟಡದ ಯುವಕನಿಗೆ ಮುತ್ತಿಟ್ಟು ರೋಮ್ಯಾನ್ಸ್ ಮಾಡಿದ ವಿಡಿಯೋ ಭಾರಿ ವೈರಲ್ ಆಗಿದೆ.
 

Couple secret romance in heavy rain on rooftops of building video goes viral ckm
Author
First Published Jul 4, 2024, 3:48 PM IST

ಮಳೆ ರೋಮ್ಯಾಂಟಿಕ್ ಫೀಲ್ ಹೆಚ್ಚಿಸುತ್ತೆ. ಸಿನಿಮಾಗಳ ರೋಮ್ಯಾನ್ಸ್ ಸೀನ್‌ಗಳಲ್ಲಿ ಮಳೆ ಸಿಂಚನ ಇದ್ದೇ ಇರುತ್ತದೆ. ಇದೀಗ ಸಿನಿಮಾ ಬಳಿಕ ಈಜೋರು ಮಳೆಯನ್ನು ಸದುಪಯೋಗ ಪಡಿಸಿದ ಮೊದಲ ಜೋಡಿ ಎಂದು ಎಲ್ಲರು ಕಮೆಂಟ್ ಮಾಡಿದ್ದಾರೆ. ಕದ್ದ ಮುಚ್ಚಿ ಮಹಡಿ ಮೇಲೆ ತೆರಳಿದ ಯುವತಿ, ಪಕ್ಕದ ಕಟ್ಟದ ಯುವಕನಿಗೆ ಮುತ್ತಿಟ್ಟು ರೋಮ್ಯಾನ್ಸ್ ಮಾಡಿದ ವಿಡಿಯೋ ವೈರಲ್ ಆಗಿದೆ. ಯುವತಿ ಮಹಡಿ ಮೇಲಿರುವ ತಡೆಗೋಡೆ ಮೇಲಕ್ಕೆ ಹತ್ತಿ ಯವಕನಿಗೆ ಮುತ್ತಿಟ್ಟಿದ್ದಾಳೆ. 

ಉತ್ತಮ ಮಳೆ ರೈತರು ಸೇರಿದಂತೆ ಎಲ್ಲರ ಮುಗದಲ್ಲಿ ನಗು ತರುವುದರಲ್ಲಿ ಅನುಮಾನವಿಲ್ಲ. ಹೀಗೆ ಈ ಜೋಡಿಗಳಿಗೂ ಇದೇ ಮಳೆ ರೋಮ್ಯಾನ್ಸ್ ಕಟ್ಟಿಕೊಟ್ಟಿದೆ. ಒಂದೆಡೆ ಜೋರು ಮಳೆ ಸುರಿಯುತ್ತಿದೆ. ಇತ್ತ ಯುವತಿ ಮನೆಯಿಂದ ಮಹಡಿ ಮೇಲೆ ಬಂದಿದ್ದಾಳೆ. ಸುತ್ತು ಮುತ್ತ ಯಾರು ಇಲ್ಲ. ಮತ್ತೊಂದೆಡೆ ಭಾರಿ ಮಳೆ. ಯುವತಿ ಕರೆಗೆ ಓಗೊಟ್ಟು ಪಕ್ಕದ ಕಟ್ಟಡದಲ್ಲಿ ಯುವಕ ಕೂಡ ಕದ್ದು ಮುಚ್ಚಿ ಕಟ್ಟಡದ ಮೇಲೆ ಬಂದಿದ್ದಾನೆ.

ರೈಲಿನಲ್ಲಿ ಖುಲ್ಲಂ ಖುಲ್ಲಾ ಸೀನ್, ಜೋಡಿಯ ರೋಮ್ಯಾನ್ಸ್‌ಗೆ ಸುಸ್ತಾದ ಪ್ರಯಾಣಿಕರು!

ಯುವತಿ ಮೇಲೆ ಬಂದು ಒಂದೆರೆಡು ರೌಂಡ್ ಹೊಡದು ಯಾರು ಇಲ್ಲ ಎಂದು ಖಾತ್ರಿಪಡಿಸಿದ್ದಾಳೆ. ಬಳಿಕ ಒಂದು ಕಟ್ಟಡ ಹಾಗೂ ಮತ್ತೊಂದು ಕಟ್ಟಡಕ್ಕೆ ಹಾಕಿರುವ ತಡೆ ಗೋಡೆಯನ್ನೇ ಹತ್ತಿದ ಯುವತಿ ಪಕ್ಕದ ಕಟ್ಟಡದಲ್ಲಿ ನಿಂತಿದ್ದ ಯುವನಿಕೆ ಬಾಗಿ ಕಿಸ್ ನೀಡಿದ್ದಾಳೆ. ಅಲ್ಲೆ ರೋಮ್ಯಾನ್ಸ್ ಶುರುವಾಗಿದೆ. ಯುವಕನಿಗೆ ತಡೆ ಗೋಡೆ ಹತ್ತುವ ಯಾವುದೇ ಸಾಧ್ಯತೆಗಳಿಲ್ಲ. ಹೀಗಾಗಿ ಕಳಗೆ ನಿಂತಿದ್ದಾನೆ. ಇತ್ತ ಯುವತಿಗ ತಡೆ ಗೋಡೆ ಹತ್ತಿ ಆತನತ್ತ ಬಾಗಿ ರೋಮ್ಯಾನ್ಸ್ ಮಾಡಿದ್ದಾಳೆ.

 

 

ಒಂದು ಮಳೆ ಬಿಲ್ಲು ಒಂದು ಮಳೆ ಮೋಡ ಹೇಗೋ ಜೊತೆಯಾಗಿ ರೋಮ್ಯಾನ್ಸ್ ಮಾಡುತ್ತಿರುವ ದೃಶ್ಯವನ್ನು ಕೊಂಚ ದೊರದ ಕಟ್ಟದಲ್ಲಿ ಸೆರೆ ಹಿಡಿಯಲಾಗಿದೆ. ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದೆ. ಇದೀಗ ಈ ವಿಡಿಯೋ ಭಾರಿ ವೈರಲ್ ಆಗಿದೆ. ಮಳೆಯನ್ನು ಸರಿಯಾಗಿ ಸದುಪಯೋಗ ಪಡಿಸಿದ ಮೊದಲ ಜೋಡಿ ಎಂದು ಕಮೆಂಟ್ ಮಾಡಿದ್ದಾರೆ. ಇದು ನಿಜವಾದ ರೋಮ್ಯಾನ್ಸ್, ಒಂದೆಡೆ ಮಳೆ, ಮತ್ತೊಂದೆಡೆ ಹಲವು ಅಡೆ ತಡೆ. ಆದರೂ ಕಿಸ್ಸಿಂಗ್, ರೋಮ್ಯಾನ್ಸ್ ಸಾಗಿದೆ.ಯಾರೂ ಇಲ್ಲ ಎಂದು ಖಾತ್ರಿಪಡಿಸಿದರೂ ವೈರಲ್ ಆದ ರೋಮ್ಯಾಂಟಿಕ್ ಜೋಡಿ ಇದು ಎಂದು ಕಮೆಂಟ್ ಮಾಡಿದ್ದಾರೆ. 

ಪಬ್ಲಿಕ್ ಪ್ಲೇಸ್‌ನಲ್ಲಿ ಕಾಲೇಜು ಪ್ರೇಮಿಗಳ ಖುಲ್ಲಂ ಖುಲ್ಲಾ ಹಗ್ಗಿಂಗ್, ಕಿಸ್ಸಿಂಗ್ ಅಂಡ್ ರೊಮ್ಯಾನ್ಸ್!
 

Latest Videos
Follow Us:
Download App:
  • android
  • ios