ಪಬ್ಲಿಕ್ ಪ್ಲೇಸ್‌ನಲ್ಲಿ ಕಾಲೇಜು ಪ್ರೇಮಿಗಳ ಖುಲ್ಲಂ ಖುಲ್ಲಾ ಹಗ್ಗಿಂಗ್, ಕಿಸ್ಸಿಂಗ್ ಅಂಡ್ ರೊಮ್ಯಾನ್ಸ್!
ಮಕ್ಕಳನ್ನು ಕಾಲೇಜಿಗೆ ಓದಲು ಕಳಿಸಿದರೆ, ಕ್ಲಾಸಿಗೆ ಚಕ್ಕರ್ ಹಾಕಿ ಸಾರ್ವಜನಿಕ ಸ್ಥಳದಲ್ಲಿಯೇ ಕುಳಿತು ಹಗ್ಗಿಂಗ್, ಕಿಸ್ಸಿಂಗ್ ಅಂಡ್ ರೋಮ್ಯಾನ್ಸ್ ಮಾಡುತ್ತಿದ್ದು, ಸ್ಥಳೀಯ ಜನರಿಗೆ ಮುಜುಗರ ಉಂಟುಮಾಡಿದ್ದಾರೆ.
ರಾಯಚೂರು (ಜು.04): ಮಕ್ಕಳನ್ನು ಹೆಚ್ಚಿನ ವ್ಯಾಸಂಗಕ್ಕಾಗಿ ಕಾಲೇಜಿಗೆ ಕಳಿಸಿದರೆ, ಕ್ಲಾಸಿಗೆ ಚಕ್ಕರ್ ಹಾಕಿ ಪ್ರೀತಿ, ಪ್ರೇಮ ಪಾಠವನ್ನು ಕಲಿಯಲು ಹೋಗುತ್ತಿದ್ದಾರೆ. ಅದು ಕೂಡ ಸಾರ್ವಜನಿಕ ಸ್ಥಳದಲ್ಲಿಯೇ ಕುಳಿತು ಕಿಸ್ಸಿಂಗ್, ಹಗ್ಗಿಂಗ್ ಅಂಡ್ ರೊಮ್ಯಾನ್ಸ್ ಮಾಡುತ್ತಿದ್ದಾರೆ. ಇದನ್ನು ನೋಡಿದ ಸಾರ್ವಜನಿಕರು ಕಣ್ಮುಚ್ಚಿಕೊಂಡು ಓಡಾಡುವಂತಾಗಿದೆ. ಈ ರಸ್ತೆಯಲ್ಲಿ ಚಿಕ್ಕ ಚಿಕ್ಕ ಶಾಲಾ ಮಕ್ಕಳನ್ನು ಕರೆದುಕೊಂಡು ಓಡಾಡಲು ಪೋಷಕರಿಗೆ ಮುಜುಗರ ಉಂಟಾಗುತ್ತಿದೆ.
ಹದಿ ಹರಿಯದ ವಯಸ್ಸಿನಲ್ಲಿ ಮನಸ್ಸು ಕೋತಿಯ ಹಾಗೆ ಆಡುತ್ತದೆ ಎನ್ನುವುದು ಸಾಮಾನ್ಯ. ಆದರೆ, ಇಲ್ಲಿ ಕಾಲೇಜು ಯುವ-ಯುವತಿಯರು ಕೋತಿಗಿಂತಲೂ ಹೆಚ್ಚಾಗಿ ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲವಾಗಿ ನಡೆದುಕೊಳ್ಳುತ್ತಿರುವುದು ನಾಚಿಕೆಗೇಡಿನ ವಿಷಯವಾಗಿದೆ. ಮನೆಯಲ್ಲಿ ಪೋಷಕರು ಮಕ್ಕಳನ್ನು ಕಾಲೇಜಿಗೆ ಓದಲೆಂದು ಕಳಿಸಿದರೆ, ಇವರು ಕಾಲೇಜು ಕ್ಲಾಸಿಗೆ ಚಕ್ಕರ್ ಹಾಕಿ ಪ್ರೇಮ ಪಾಠ ಕಲಿಯಲು ಜನನಿಬಿಡ ಸ್ಥಳಕ್ಕೆ ತೆರಳುತ್ತಿದ್ದಾರೆ. ಆದರೆ, ಎಲ್ಲೆಡೆಯೂ ಜನರಿರುವ ಸ್ಥಳಗಳೇ ಆಗಿರುವುದರಿಂದ ಕಡಿಮೆ ಜನ ಸಂಚಾರ ಸ್ಥಳಗಳಲ್ಲಿ ಕುಳಿತು ತಮ್ಮ ರೊಮ್ಯಾನ್ಸ್ ಆರಂಭಿಸುತ್ತಾರೆ.
ಕೋಲಾರ ಪಿಯು ಕಾಲೇಜು ಟಾಯ್ಲೆಟ್‌ನಲ್ಲಿ ಮಗುವಿಗೆ ಜನ್ಮ ನೀಡಿದ ಬಾಲಕಿ; ಅತ್ಯಾಚಾರ ಎಸಗಿದ್ದ ಯುವಕ ಅರೆಸ್ಟ್!
ಈ ಫೋಟೋದಲ್ಲಿರುವ ದೃಶ್ಯಗಳು ಕಂಡುಬಂದಿರುವುದು ರಾಯಚೂರು ನಗರದ ಕನ್ನಡ ಭವನದ ಆವರಣದಲ್ಲಿ. ಕಾಲೇಜಿಗೆ ಚಕ್ಕರ್ ಹಾಕಿ ಬರುವ ಕೆಲವೊಂದಿಷ್ಟು ಜೋಡಿಗಳು ಪ್ರತಿನಿತ್ಯ ಇಲ್ಲಿಗೆ ಬಂದು ಸುಆಮರು ಹೊತ್ತು ಹರಟೆ ಹೊಡೆಯುತ್ತಾರೆ. ಆಗ ರಸ್ತೆಯಲ್ಲಿ ಜನರ ಸಂಚಾರ ಕಡಿಮೆ ಆಗುತ್ತಿದ್ದಂತೆ ರೊಮ್ಯಾನ್ಸ್ ಆರಂಭಿಸುತ್ತಾರೆ. ಹುಡುಗಿ ಕಾಂಪೌಂಡ್ ಮೇಲೆ ಕುಳಿತರೆ ಹುಡುಗ ಕೆಳಗಿನಿಂದ ಬಂದು ಆಕೆಯನ್ನು ತಬ್ಬಿಕೊಂಡು ಮುತ್ತಿಡುತ್ತಾನೆ. ನಂತರ ಅಲ್ಲಿಯೇ ರೊಮ್ಯಾನ್ಸ್ ಆರಂಭಿಸುತ್ತಾರೆ. ಇದನ್ನು ನೋಡಿದ ಜನರು ವ್ಯಾಕ್ ಎಂದು ಕಣ್ಮುಚ್ಚಿಕೊಳ್ಳುತ್ತಿದ್ದಾರೆ.
ಹೈಸ್ಕೂಲ್ ಹುಡುಗಿ ಗರ್ಭಿಣಿ ಮಾಡಿದ ಯುವಕ, ಕಾಲೇಜಿಗೆ ಹೋಗಿ ಜನ್ಮ ಕೊಟ್ಟ ಬಾಲಕಿ
ನಾಲ್ಕು ಗೋಡೆಗಳ ಮಧ್ಯದಲ್ಲಿ ಮಾಡವುದನ್ನು ಹೀಗೆ ಸಾರ್ವಜನಿಕ ಸ್ಥಳದಲ್ಲಿ ಮಾಡುತ್ತಿರುವುದನ್ನು ಕಂಡು ಅವರಿಗೆ ಛೀಮಾರಿ ಹಾಕುತ್ತಾರೆ. ಕೆಲವರು ತಮ್ಮ ಸಹನೆ ಮೀರಿ ಬೈದರೆ, ಇನ್ನು ಕೆಲವರು ತಮಗ್ಯಾಕೆ ಬೇಕು ಊರ ಉಸಾಬರಿ ಎಂದು ಅಲ್ಲಿಂದ ಕಾಲ್ಕೀಳುತ್ತಾರೆ. ಇನ್ನು ಕೆಲವು ಪಡ್ಡೆಗಳು ಅವರ ರೊಮ್ಯಾನ್ಸ್ ಅನ್ನು ಕಣ್ತುಂಬ ನೋಡಿಕೊಂಡು ಖುಷಿ ಪಟ್ಟು ಅಲ್ಲಿದ ಹೋಗುತ್ತಾರೆ. ಆದರೆ, ಓದುವ ವಯಸ್ಸಿನಲ್ಲಿ ಹೀಗೆ ಜೀವನ ಹಾಳು ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೆ ಬುದ್ಧಿ ಕಲಿಸಲು ಕೆಲವರು ನಿರ್ಧಾರ ಮಾಡಿದ್ದಾರೆ. ಈ ಬಗ್ಗೆ ಫೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ಇವರ್ಯಾರ ಮಕ್ಕಳು ನೋಡಿ ಸ್ವಾಮಿ, ಸಾರ್ವಜನಿಕ ಸ್ಥಳದಲ್ಲಿ ಹೀಗೆ ಮಾಡಿ ಅಸಹ್ಯ ಹುಟ್ಟಿಸುತ್ತಿದ್ದಾರೆ. ಅವರ ಪೋಷಕರಿಗೆ ಮಾಹಿತಿ ನೀಡಿ ಎಂದು ಮನವಿ ಮಾಡಿದ್ದಾರೆ. ಜೊತೆಗೆ, ಪೊಲೀಸರು ಈ ಬಗ್ಗೆ ಕ್ರಮ ಕೈಗೊಂಡು ಸಾರ್ವಜನಿಕರು ಮುಜುಗರದಿಂದ ಓಡಾಡುವ ಪರಿಸ್ಥಿತಿಯನ್ನು ತಿಳಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.