ರೈಲಿನಲ್ಲಿ ಖುಲ್ಲಂ ಖುಲ್ಲಾ ಸೀನ್, ಜೋಡಿಯ ರೋಮ್ಯಾನ್ಸ್‌ಗೆ ಸುಸ್ತಾದ ಪ್ರಯಾಣಿಕರು!

ಮೆಟ್ರೋ ಸೇರಿದಂತೆ ಸಾರ್ವಜನಿಕ ಸಾರಿಗೆಯಲ್ಲಿ ಜೋಡಿಗಳ ರೋಮ್ಯಾನ್ಸ್, ಚುಂಬನ ಭಾರಿ ವೈರಲ್ ಆಗಿತ್ತು. ಇದೀಗ ಭಾರತೀಯ ರೈಲ್ವೇ ಸ್ಲೀಪರ್ ಕೋಚ್‌ನಲ್ಲಿ ಜೋಡಿಯ ರೋಮ್ಯಾನ್ಸ್ ವಿಡಿಯೋ ವೈರಲ್ ಆಗಿದೆ. ತಬ್ಬಿಕೊಂಡು ಮಲಗಿದ ಈ ಜೋಡಿ ಖುಲ್ಲಂ ಖುಲ್ಲಾ ಸೀನ್ ಸಹ ಪ್ರಯಾಣಿಕರಿಗೆ ಮುಜುಗುರ ತಂದಿದೆ.
 

Couple romance in Indian Railway Sleeper coach Discomfort other passengers ckm

ನವದೆಹಲಿ(ಜೂ.12) ಸಾರ್ವಜನಿಕ ಪ್ರದೇಶಲ್ಲಿ, ಮೆಟ್ರೋ, ಬಸ್ ಹೀಗೆ ಹಲವೆಡೆ ಜೋಡಿಗಳ ರೋಮ್ಯಾನ್ಸ್, ಚುಂಬನ ದೃಶ್ಯಗಳು ಈಗಾಗಲೇ ವೈರಲ್ ಆಗಿದೆ. ಇದರ ವಿರುದ್ಧ ಭಾರಿ ಆಕ್ರೋಶಗಳು ವ್ಯಕ್ತವಾಗಿದೆ. ದೆಹಲಿ ಹಾಗೂ ಬೆಂಗಳೂರು ಮೆಟ್ರೋದಲ್ಲೂ ಈ ರೀತಿಯ ಘಟನೆಗಳು ನಡೆದಿತ್ತು. ಇದೀಗ ಭಾರತೀಯ ರೈಲ್ವೇಯಲ್ಲಿ ಜೋಡಿಯ ರೋಮ್ಯಾನ್ಸ್ ವಿಡಿಯೋ ವೈರಲ್ ಆಗಿದೆ. ಸ್ಲೀಪರ್ ಕೋಚ್‌ನಲ್ಲಿ ಮಲಗಿದ ಈ ಜೋಡಿ ಸಹ ಪ್ರಯಾಣಿಕರ ಮುಂದೆ ಚುಂಬಿಸಲು ಆರಂಭಿಸಿದೆ. ಟಿಕೆಟ್ ಚೆಕರ್ ಬಂದೂ ವಾರ್ನಿಂಗ್ ನೀಡಿದರೂ ಈ ಜೋಡಿ ಕ್ಯಾರೇ ಎಂದಿಲ್ಲ.

ಭಾರತೀಯ ರೈಲ್ವೇಯಲ್ಲಿ ನಡೆದ ಈ ರೋಮ್ಯಾನ್ಸ್ ವಿಡಿಯೋಗೆ ಭಾರಿ ಆಕ್ರೋಶ ಕೇಳಿಬರುತ್ತಿದೆ. ಸ್ಲೀಪರ್ ಕೋಚ್ ಬುಕ್ ಮಾಡಿದ ಯುವಕ ಹಾಗೂ ಯುವತಿ ನೇರವಾಗಿ ತಮ್ಮ ಕೆಲಸ ಆರಂಭಿಸಿದ್ದಾರೆ. ರೈಲು ಹತ್ತಿ ಒಂದೇ ಸ್ಲೀಪರ್ ಸೀಟಿನಲ್ಲಿ ಮಲಗಿದ ಈ ಜೋಡಿ ರೋಮ್ಯಾನ್ಸ್ ಆರಂಭಿಸಿದ್ದಾರೆ. ಒಬ್ಬರು ಮಲಗುವ ಸ್ಲೀಪಿಂಗ್ ಸೀಟಿನಲ್ಲಿ ಇಬ್ಬರು ಮಲಗಿದ್ದಾರೆ.ಸ್ಲೀಪರ್ ಸೀಟನ್ನೇ ಬೆಡ್ ರೂಂ ಎಂದುಕೊಂಡ ಜೋಡಿ, ಒಬ್ಬರಿಗೊಬ್ಬರು ಅಂಟಿಕೊಂಡು, ಮುದ್ದಾಡುತ್ತಾ, ಮೈಮೇಲೆ ಎಳೆದಾಡುತ್ತಾ ರೋಮ್ಯಾನ್ಸ್ ಶುರು ಮಾಡಿದ್ದಾರೆ. 

ಸಾರಿಗೆ ಬಸ್ಸಿನ ಹಿಂಬದಿ ಸೀಟಿನಲ್ಲಿ ಜೋಡಿಯ ಕಿಸ್ಸಿಂಗ್-ರೋಮ್ಯಾನ್ಸ್, ವಿಡಿಯೋ ಲೀಕ್!

ಇತ್ತ ಮಕ್ಕಳು, ಮಹಿಳೆಯರು ಸೇರಿದಂತೆ ಸಹ ಪ್ರಯಾಣಿಕರಿಗೆ ಮುಜುಗರವಾಗಿದೆ. ಈ ಕುರಿತು ಟಿಕೆಟ್ ಪರಿಶೀಲಕರಿಗೆ ಮಾಹಿತಿ ನೀಡಿದ್ದಾರೆ. ಟಿಕೆಟ್ ಚೆಕ್ಕರ್ ಆಗಮಿಸಿ ಜೋಡಿಗೆ ವಾರ್ನಿಂಗ್ ನೀಡಿದರೂ ಕ್ಯಾರೆ ಎಂದಿಲ್ಲ. ಇವರ ರೋಮ್ಯಾನ್ಸ್ ಮುಂದುವರಿದಿದೆ. ತಬ್ಬಿ ಮುದ್ದಾಡಿದ ಈ ಜೋಡಿಯ ರೋಮ್ಯಾನ್ಸ್ ಇದೀಗ ಸಾಮಾಜಿಕ ಮಾಧ್ಯಮದಿಂದ ವೈರಲ್ ಆಗಿದೆ.

 

 

ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಹಲವರು ಆಕ್ರೋಶ ಹೊರಹಾಕಿದ್ದಾರೆ. ಈ ರೀತಿ ಆದರೆ ರೈಲಿನಲ್ಲಿ ಪ್ರಯಾಣಿಸುವುದು ಹೇಗೆ? ಹೆಣ್ಣು ಮಕ್ಕಳನ್ನು ಯಾವ ಸುರಕ್ಷತೆಯಲ್ಲಿ ಕಳುಹಿಸಲು ಸಾಧ್ಯ ಎಂದು ಹಲವರು ಪ್ರಶ್ನಿಸಿದ್ದಾರೆ. ಇದು ಓಯೋ ಕ್ಲಾಸ್ ಅಥವಾ ಸ್ಲೀಪಿಂಗ್ ಕ್ಲಾಸ್ ಎಂದು ಹಲವರು ಟ್ರೋಲ್ ಮಾಡಿದ್ದಾರೆ.

ಅಬ್ಬಬ್ಬಾ.. ಈ ಪರಿ ರೊಮ್ಯಾನ್ಸಾ? ವಿಡಿಯೋ ನೋಡಿ ಕಂಟ್ರೋಲ್​.. ಕಂಟ್ರೋಲ್​ ಅಂತಿದ್ದಾರೆ ಫ್ಯಾನ್ಸ್​!

ಮೆಟ್ರೋದಲ್ಲಿದ್ದ ಈ ರೀತಿಯ ರೋಮ್ಯಾನ್ಸ್ ಚಾಳಿ ಇದೀಗ  ಭಾರತೀಯ ರೈಲ್ವೇಗೂ ಆಗಮಿಸಿದೆ. ಸಾರ್ವಜನಿಕ ಪ್ರದೇಶದಲ್ಲಿ ಈ ರೀತಿಯ ವರ್ತನೆಗಳು ಹೆಚ್ಚಾಗಿದೆ. ಇದಕ್ಕೆ ಕಡಿಣವಾಣ ಹಾಕಲು ಕ್ರಮ ಕೈಗೊಳ್ಳಬೇಕು. ಸುರಕ್ಷತೆ, ಸಭ್ಯತೆ, ಮೌಲ್ಯ, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಈ ರೀತಿ ಘಟನೆ ಮರುಕಳಿಸಬಾರದು. ಇದಕ್ಕೆ ಕಠಿಣ ಕ್ರಮದ ಅಗತ್ಯವಿದೆ ಎಂದು ಆಗ್ರಹಿಸಿದ್ದಾರೆ.
 

Latest Videos
Follow Us:
Download App:
  • android
  • ios