Asianet Suvarna News Asianet Suvarna News

ಹೆದ್ದಾರಿ ಪಕ್ಕದಲ್ಲಿಯೇ ಕಾರ್ ನಿಲ್ಲಿಸಿ ಇಬ್ಬರು ಯುವತಿಯರ ಜೊತೆ ಯುವಕನ ರೊಮ್ಯಾನ್ಸ್; ಓಯೋ ರೂಮ್‌ಗೆ ಹೋಗಿ ಎಂದ ಜನರು

ಕಾರ್‌ನಲ್ಲಿ ಓರ್ವ ಯುವಕ ಇಬ್ಬರು ಯುವತಿಯರ ಜೊತೆ ರೊಮ್ಯಾನ್ಸ್ ಮಾಡಿದ್ದಾನೆ. ಈ ದೃಶ್ಯವನ್ನು ದಾರಿಹೋಕರು ಸೆರೆ ಹಿಡಿದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

youth romance with two girl in luxury car at lucknow ayodhya national highway obscenity video mrq
Author
First Published Aug 12, 2024, 4:07 PM IST | Last Updated Aug 12, 2024, 4:07 PM IST

ಲಕ್ನೋ: ಉತ್ತರ ಪ್ರದೇಶದ ಬಾರಾಬಂಕಿ ಭಾಗದಲ್ಲಿ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಲಕ್ಷುರಿ ಕಾರ್‌ನಲ್ಲಿ ಓರ್ವ ಯುವಕ, ಇಬ್ಬರು ಯುವತಿಯರ ಜೊತೆ ರೊಮ್ಯಾನ್ಸ್‌ ಮೂಡ್‌ಗೆ ಜಾರಿದ್ದಾನೆ. ಕಾರ್ ಮೇಲೆ ಬಿಜೆಪಿ ಪಕ್ಷದ ಧ್ವಜ ಇರೋದನ್ನು ಕಾಣಬಹುದಾಗಿದೆ. ಅಯೋಧ್ಯೆ-ಲಕ್ನೋ ರಾಷ್ಟ್ರೀಯ ಹೆದ್ದಾರಿಯ ಅಸೇನಿ ಬಳಿ ನಡೆದ ಘಟನೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಆದರೆ ಈ ವಿಡಿಯೋದಲ್ಲಿರುವ ಕಾರ್ ಯಾರದ್ದು, ಅಲ್ಲಿದ್ದ ಯುವಕ ಮತ್ತು ಯುವತಿಯರ ಬಗ್ಗೆಯೂ ಸ್ಪಷ್ಟ ಮಾಹಿತಿಯೂ ಲಭ್ಯವಾಗಿಲ್ಲ.

ವಿಡಿಯೋದಲ್ಲಿ ಕಾರ್ ನಂಬರ್ ಉತ್ತರ ಪ್ರದೇಶದ ನೋಂದಣಿಯನ್ನು ಹೊಂದಿದ್ದು, ಯುಪಿ 33 ಎಎಲ್ 0011 ಸಂಖ್ಯೆಯ ವಾಹನ ಇದಾಗಿದೆ. ಹೆದ್ದಾರಿ ಬಳಿ ಕಾರ್ ನಿಂತಿರೋದನ್ನು ಗಮನಿಸಬಹುದು. ಕಾರ್ ನಲ್ಲಿ ಓರ್ವನ ಜೊತೆ ಇಬ್ಬರು ಯುವತಿಯರಿದ್ದಾರೆ. ನೋಡ ನೋಡುತ್ತಿದ್ದಂತೆ ಮೂವರು ಪರಸ್ಪರ ಕಿಸ್ ಮಾಡಲು ಶುರು ಮಾಡುತ್ತಾರೆ. ಈ ಎಲ್ಲಾ ದೃಶ್ಯವನ್ನು ದಾರಿಹೋಕರು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ವೈರಲ್ ಬಳಿಕ ಈ ವಿಷಯ ಪೊಲೀಸರ ಗಮನಕ್ಕೂ ಬಂದಿದೆ. ಆದ್ರೆ ಪೊಲೀಸರು ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ತಿಳಿದು ಬಂದಿದೆ.

ಸಿಎಂ ನಿವಾಸದ ಎದುರೇ ಅಪ್ಪಿಕೊಂಡು ಮುದ್ದಿಸುತ್ತಾ ತುಟಿಗೆ ತುಟಿ ಸೇರಿಸಿದ ಜೋಡಿ; ವಿಡಿಯೋ ವೈರಲ್

ಬಾರಾಬಂಕಿ ಜಿಲ್ಲೆಯ ಲಕ್ನೊ-ಅಯೋಧ್ಯೆಯ ಅಸೇನಿ ಬಳಿಯ ರೆಸ್ಟೋರೆಂಟ್ ಮುಂದೆ ನಿಂತಿದ್ದ ಕಾರ್ ದೃಶ್ಯಾವಳಿಗಳು ಎಂದು ನೆಟ್ಟಿಗರು ಕಂಡು ಹಿಡಿದು ಕಮೆಂಟ್ ಮಾಡಿದ್ದಾರೆ. ಕಾರ್ ಹಿಂದೆಯೇ ದ್ವಿಚಕ್ರ ಸೇರಿದಂತೆ ಹಲವು ವಾಹನಗಳು ಚಲಿಸುತ್ತಿರೋದನ್ನು ವಿಡಿಯೋದಲ್ಲಿ ನೋಡಬಹುದು. ವಾಹನದಟ್ಟನೆಯುಳ್ಳ ರಸ್ತೆಯಾಗಿದ್ದರೂ ಮೂವರು ಕಾರ್‌ನಲ್ಲಿಯೇ ಅಶ್ಲೀಲವಾಗಿ ವರ್ತಿಸಿದ್ದಾರೆ. ಆದರೆ ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಓರ್ವ ಸೋಶಿಯಲ್ ಮೀಡಿಯಾ ಬಳಕೆದಾರ ಇದು ಬಾರಾಬಂಕಿಯ ಕಲಿಕಾ ಹವೇಲಿ ರೆಸ್ಟೋರೆಂಟ್ ಎಂದು ದೃಢಪಡಿಸಿದ್ದಾರೆ. ಈ ರೆಸ್ಟೋರೆಂಟ್‌ಗೆ ಜನರು ಕುಟುಂಬಸ್ಥರ ಜೊತೆ ಆಗಮಿಸುತ್ತಾರೆ. ಇಲ್ಲಿ ಕುಟುಂಬದ ಜೊತೆ ಕಾಲ ಕಳೆಯಲು ಮಹಿಳೆಯರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಇಂತಹ ಸ್ಥಳದಲ್ಲಿ ಈ ರೀತಿ ನಡೆದುಕೊಳ್ಳುವುದು ತಪ್ಪು ಎಂದು ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ. ಅಷ್ಟು ಅರ್ಜೆಂಟ್ ಆಗಿದ್ರೆ ಸಮೀಪದ ಯಾವುದಾದ್ರೂ ಓಯೋ ಹೋಟೆಲ್‌ನಲ್ಲಿ ರೂಮ್ ಬುಕ್ ಮಾಡಿಕೊಳ್ಳಹುದಿತ್ತು ಎಂಬ ಸಲಹೆಯನ್ನು ಸಹ ನೀಡಲಾಗಿದೆ.

ಸ್ಕೂಲ್ ಟೀಚರ್ ಡಾನ್ಸ್‌ ನೋಡಿ, ಶಿಕ್ಷಕಿಯ ಸಂಬಳ ಹೆಚ್ಚಿಸುವಂತೆ ಸರ್ಕಾರಕ್ಕೆ ನೆಟ್ಟಿಗರ ಡಿಮ್ಯಾಂಡ್ 

Latest Videos
Follow Us:
Download App:
  • android
  • ios