ಚುನಾವಣಾ ಬಾಂಡ್‌ ರದ್ದತಿಯ ನಂತರವೂ, ಚುನಾವಣಾ ಟ್ರಸ್ಟ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ಕಾರ್ಪೊರೇಟ್ ದೇಣಿಗೆ ಹರಿವು ಮುಂದುವರೆದಿದೆ. 2024-25ರ ವರದಿ ಪ್ರಕಾರ, ಬಿಜೆಪಿಯು ₹959 ಕೋಟಿ ಪಡೆದು ಅತಿ ದೊಡ್ಡ ಫಲಾನುಭವಿಯಾಗಿದ್ದು, ಇದರಲ್ಲಿ ಟಾಟಾ  ಗ್ರೂಪ್‌ನ PET ಟ್ರಸ್ಟ್‌ನಿಂದಲೇ ₹757.6 ಕೋಟಿ ಬಂದಿದೆ. 

ಚುನಾವಣಾ ಬಾಂಡ್‌ಗಳನ್ನು ದೇಶದಲ್ಲಿ ರದ್ದುಗೊಂಡ ಬಳಿಕ ರಾಜಕೀಯ ಪಕ್ಷಗಳಿಗೆ ದೇಣಿಗೆ ಹರಿವು ಕುಂಠಿತವಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ರಾಜಕೀಯ ಪಕ್ಷಗಳ ಹಣಕಾಸು ಮೂಲಗಳು ಖಾಲಿಯಾಗದಂತೆ ಭಾರತೀಯ ಕಾರ್ಪೊರೇಟ್ ಜಗತ್ತು ನೋಡಿಕೊಂಡಿದೆ. ಚುನಾವಣಾ ಆಯೋಗವು ಪ್ರಕಟಿಸಿರುವ 2024–25 ರ ಚುನಾವಣಾ ಟ್ರಸ್ಟ್‌ಗಳ (Electoral Trusts – ET) ದೇಣಿಗೆ ವರದಿ ಪರಿಶೀಲಿಸಿದಾಗ, ಅದರಲ್ಲಿ ಸಿಂಹಪಾಲು ಮೊತ್ತ ಭಾರತೀಯ ಜನತಾ ಪಕ್ಷ (BJP) ಪಾಲಾಗಿರುವುದು ಬಹಿರಂಗವಾಗಿದೆ.

ಟಾಟಾ ಗ್ರೂಪ್ ಟ್ವಸ್ಟ್ PET: ₹915 ಕೋಟಿಯಲ್ಲಿ BJP ಗೆ 83%

ಟಾಟಾ ಗ್ರೂಪ್ ನಿಯಂತ್ರಿತ Progressive Electoral Trust (PET) 2024–25ರಲ್ಲಿ ಒಟ್ಟು ₹915 ಕೋಟಿಯನ್ನು ರಾಜಕೀಯ ಪಕ್ಷಗಳಿಗೆ ಹಂಚಿದ್ದು, ಅದರಲ್ಲಿ ಬಹುಪಾಲು 83% ಅಂದರೆ ₹757.6 ಕೋಟಿ BJP ಗೆ ಹರಿದುಬಂದಿದೆ. ಕಾಂಗ್ರೆಸ್‌ಗೆ PET ಕೇವಲ ₹77.3 ಕೋಟಿ (8.4%) ದೇಣಿಗೆ ನೀಡಿದೆ.

ಎಲೆಕ್ಟೋರಲ್‌ ಟ್ರಸ್ಟ್‌ಗಳಿಂದ BJP ಗೆ ಒಟ್ಟು ₹959 ಕೋಟಿ

ಚುನಾವಣಾ ಆಯೋಗದ ಅಧಿಕೃತ ಮಾಹಿತಿಯ ಪ್ರಕಾರ, BJP 2024–25ರಲ್ಲಿ ವಿವಿಧ ಟ್ರಸ್ಟ್‌ಗಳಿಂದ ಪಡೆದ ದೇಣಿಗೆಗಳು ಇಂತಿದೆ

Progressive Electoral Trust (PET) — ₹757.6 ಕೋಟಿ

New Democratic Electoral Trust — ₹150 ಕೋಟಿ

Harmony Electoral Trust — ₹30.1 ಕೋಟಿ

Triumph Electoral Trust — ₹21 ಕೋಟಿ

Jan Kalyan Electoral Trust — ₹9.5 ಲಕ್ಷ

N. Igartig Electoral Trust — ₹7.75 ಲಕ್ಷ

ಒಟ್ಟು BJP ಪಡೆದ ಮೊತ್ತ: ₹959 ಕೋಟಿ

ಇನ್ನೂ BJP ಗೆ ದಾಖಲೆಯ ಅತ್ಯಂತ ದೊಡ್ಡ ದೇಣಿಗೆಯನ್ನು ನೀಡುತ್ತಿರುವ Prudent Electoral Trust ವರದಿ ಪ್ರಕಟವಾಗಿಲ್ಲ. ಅದು ಹೊರಬಂದ ಮೇಲೆ BJP ದೇಣಿಗೆ ಮೊತ್ತ ಇನ್ನಷ್ಟು ಏರಿಕೆ ಕಾಣುವುದು ಖಚಿತ.

ಕಾಂಗ್ರೆಸ್ ದೇಣಿಗೆ ಚಿತ್ರಣ: ₹517 ಕೋಟಿ – ಅದರಲ್ಲಿ ₹313 ಕೋಟಿ ಟ್ರಸ್ಟ್‌ಗಳಿಂದ

2024–25ರಲ್ಲಿ ಕಾಂಗ್ರೆಸ್‌ಗೆ ಬಂದ ದೇಣಿಗೆಗಳು ಹೀಗಿವೆ:

PET — ₹77.3 ಕೋಟಿ

New Democratic Trust — ₹5 ಕೋಟಿ

Jan Kalyan Trust — ₹9.5 ಲಕ್ಷ

Prudent Trust (ಕಾಂಗ್ರೆಸ್ ವರದಿ ಪ್ರಕಾರ) — ₹216.33 ಕೋಟಿ

AB General Electoral Trust — ₹15 ಕೋಟಿ

ಒಟ್ಟು: ₹517 ಕೋಟಿ, ಅದರಲ್ಲೂ ₹313 ಕೋಟಿ ಟ್ರಸ್ಟ್‌ಗಳಿಂದಲೇ ಬಂದಿವೆ.

PET ದೇಣಿಗೆ ಪಡೆದ ಇತರೆ ಪಕ್ಷಗಳು

PET ಹಲವು ಪ್ರಾದೇಶಿಕ ಮತ್ತು ರಾಷ್ಟ್ರೀಯ ಪಕ್ಷಗಳಿಗೆ ₹10 ಕೋಟಿಯ ದೇಣಿಗೆಗಳನ್ನು ನೀಡಿದೆ. ಅವುಗಳೆಂದರೆ, ತೃಣಮೂಲ ಕಾಂಗ್ರೆಸ್ (TMC), ವೈಎಸ್‌ಆರ್ ಕಾಂಗ್ರೆಸ್ (YSRCP), ಶಿವಸೇನೆ, ಬಿಜು ಜನತಾ ದಳ (BJD), ಭಾರತ್ ರಾಷ್ಟ್ರ ಸಮಿತಿ (BRS), ಜನತಾ ದಳ (ಯುನೈಟೆಡ್) – JDU, ದ್ರಾವಿಡ ಮುನ್ನೇತ್ರ ಕಳಗಂ (DMK), ಲೋಕ ಜನ ಶಕ್ತಿ ಪಕ್ಷ – LJP (ರಾಮ್ ವಿಲಾಸ್).

ಬಾಂಡ್‌ ರದ್ದಾದ ನಂತರ ಪಕ್ಷಗಳ ಹಣಕಾಸು ಸ್ಥಿತಿ

ಕಾಂಗ್ರೆಸ್

2023–24: ₹828 ಕೋಟಿ (ಬಾಂಡ್‌ಗಳಿಂದ)

2024–25: ದೇಣಿಗೆ ಗಮನಾರ್ಹವಾಗಿ ಕುಸಿತ

ಆದರೂ 2022–23ರ ₹171 ಕೋಟಿಗಿಂತ ಹೆಚ್ಚು.

TMC

2024–25: ₹184.5 ಕೋಟಿ (₹153.5 ಕೋಟಿ ಟ್ರಸ್ಟ್‌ಗಳಿಂದ)

2023–24: ₹612 ಕೋಟಿ (ಬಾಂಡ್‌ಗಳಿಂದ)

BJD

2023–24: ₹245.5 കോടി

2024–25: ₹60 ಕೋಟಿಗೆ ಇಳಿಕೆ

BRS

ಬಾಂಡ್‌ಗಳ ಮೂಲಕ ಪಡೆದ ₹495 ಕೋಟಿ ಆದಾಯ

ಟ್ರಸ್ಟ್‌ ದೇಣಿಗೆ ₹85 ಕೋಟಿಯಿಂದ ₹15 ಕೋಟಿಗೆ ಕುಸಿತ

PETಗೆ ಹಣ ನೀಡಿದ ಟಾಟಾ ಕಂಪನಿಗಳು

2024–25ರಲ್ಲಿ PET ಗೆ ಅತಿ ಹೆಚ್ಚಿನ ದೇಣಿಗೆ ನೀಡಿದ ಟಾಟಾ ಕಂಪನಿಗಳ ಪಟ್ಟಿ:

Tata Sons Pvt Ltd — ₹308 ಕೋಟಿ

TCS — ₹217.6 ಕೋಟಿ

Tata Steel — ₹173 ಕೋಟಿ

Tata Motors — ₹49.4 ಕೋಟಿ

Tata Power — ₹39.5 ಕೋಟಿ

Tata Communications — ₹14.8 ಕೋಟಿ

Tata Consumer, Tata Elxsi, Tata Autocomp Systems — ₹19.7 ಕೋಟಿ

ಇತರೆ ಎಲೆಕ್ಟೋರಲ್ ಟ್ರಸ್ಟ್‌ಗಳ ದೇಣಿಗೆ ವಿವರ

New Democratic Trust (Mahindra Group-backed)

BJP — ₹150 ಕೋಟಿ

Congress — ₹5 ಕೋಟಿ

Shiv Sena (UBT) — ₹5 ಕೋಟಿ

Triumph Electoral Trust

BJP — ₹21 ಕೋಟಿ

TDP — ₹4 ಕೋಟಿ

Harmony Electoral Trust

BJP — ₹30.1 ಕೋಟಿ

Shiv Sena (UBT) — ₹3 ಕೋಟಿ

NCP–Sharad Pawar — ₹2 ಕೋಟಿ

Jan Pragati Trust

Shiv Sena — ₹1 ಕೋಟಿ