ಚುನಾವಣಾ ಬಾಂಡ್ ಹಗರಣ: ನಿರ್ಮಲಾ ಸೀತಾರಾಮನ್ ಸೇರಿ ಹಲವರ ವಿರುದ್ಧದ FIRಗೆ ಹೈಕೋರ್ಟ್ ಮಧ್ಯಂತರ ತಡೆ
ಚುನಾವಣಾ ಬಾಂಡ್ ಹಗರಣದ ಸಂಬಂಧ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿ ಹಲವರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶದ ಮೇರೆಗೆ ದಾಖಲಾಗಿದ್ದ ಎಫ್‌ಐಆರ್‌ಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಈ ಸಂಬಂಧ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 22 ಕ್ಕೆ ಮುಂದೂಡಲಾಗಿದೆ.
ಬೆಂಗಳೂರು (ಸೆ.30): ಚುನಾವಣಾ ಬಾಂಡ್ ಹಗರಣದ ಸಂಬಂಧ ಬೆಂಗಳೂರಿನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ , ಇ.ಡಿ. ಅಧಿಕಾರಿಗಳು, ನಳಿನ್ ಕುಮಾರ್ ಕಟೀಲ್, ವಿಜಯೇಂದ್ರ, ಜೆ.ಪಿ.ನಡ್ಡಾ ಸೇರಿ ಹಲವರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶದ ಮೇರೆಗೆ ತಿಲಕನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್ ಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿ ಮುಂದಿನ ವಿಚಾರಣೆಯನ್ನು ಅಕ್ಟೋಬರ್.22 ಕ್ಕೆ ಮುಂದೂಡಿದೆ.
ಚುನಾವಣೆ ಬಾಂಡದ ಮೂಲಕ ಲಂಚ ಪಡೆಯಲಾಗುತ್ತಿದೆ. ಕೆಲವು ಕಂಪನಿಗಳಿಗೆ ಹೆದರಿಸಿ ಚುನಾವಣೆ ಬಾಂಡ್ ಮೂಲಕ ಸುಲಿಗೆ ಮಾಡಲಾಗುತ್ತಿದೆ. ಇದು ಪಕ್ಕಾ ಸುಲಿಗೆ ಪ್ರಕರಣ. ಹೀಗಾಗಿ ಆರೋಪಿಗಳ ವಿರುದ್ಧ ಮಧ್ಯಂತರ ತಡೆ ನೀಡಬಾರದು. ತನಿಖೆ ನಡೆದು ಸ್ಪಷ್ಟ ವಿಚಾರ ಹೊರಗೆ ಬರಬೇಕಿದೆ. ಇಡಿ ಕೆಲವು ಕಂಪನಿಗೆ ಹೆದರಿಸಿ ಚುನಾವಣಾ ಬಾಂಡ್ ಪಡೆದುಕೊಳ್ಳುತ್ತಿದೆ ಎಂದು ಪ್ರಶಾಂತ್ ಭೂಷಣ್ ವಾದವಾಗಿತ್ತು.
ಇಲ್ಲಿ ಸುಲಿಗೆಯ ವಿಚಾರವೇ ಬರೋದಿಲ್ಲ. ಮೂಲ ಅಂಶವೇ ಇಲ್ಲ ಎಂದರೆ ಒಳಸಂಚು ಸಾಧ್ಯವೇ ಇಲ್ಲ. ಹೀಗಾಗಿ ಪ್ರಕರಣದ ತನಿಖೆಗೆ ಸ್ಟೇ ನೀಡಬೇಕು. ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್ ಪರ ವಕೀಲ ರಾಘವನ್ ವಾದ ಮಂಡಿಸಿದ್ದರು.
IPC ಸೆ 384 ಸುಲಿಗೆ ಮಾಡುವುದಕ್ಕೆ ಶಿಕ್ಷೆಯ ಸೆಕ್ಷನ್ ಆಗಿದೆ. ಅದು ಸೆ.383 ಅಡಿಯಲ್ಲಿ ಸುಲಿಗೆ ಆಗಿರಬೇಕು. ಅದರ ಪ್ರಮುಖ ಅಂಶಗಳು ಹೇಳುವುದು ಅಲ್ಲಿ ಬೆದರಿಕೆ ಇರಬೇಕು. ಅದನ್ನ ನೊಂದ ವ್ಯಕ್ತಿ ನೇರವಾಗಿ ಬಂದು ಹೇಳಬೇಕು. ಆರೋಪಿಯ ಬಗ್ಗೆ ನೇರವಾಗಿ ನೊಂದ ವ್ಯಕ್ತಿ ಹೇಳಬೇಕು. ಈ ಕೇಸ್ ನಲ್ಲಿ ದೂರುದಾರರ ಕೇಸ್ ಆಗಲ್ಲ. ಇಲ್ಲಿ ಈ ದೂರುದಾರನಿಗೆ ಯಾವುದೇ ಬೆದರಿಕೆ ಹಾಕಿಲ್ಲ. ಬೆದರಿಕೆ ಹಾಕಿ ವ್ಯಕ್ತಿಯಿಂದ ಆಸ್ತಿ ಕಿತ್ತು ಕೊಂಡಿರಬೇಕು. ಇಲ್ಲಿ ದೂರುದಾರರಿಂದ ಯಾವುದೇ ಸುಲಿಗೆ ಮಾಡಿಲ್ಲ. ಹೀಗಾಗಿ ಈ ವಿಚಾರ ದೂರುದಾರನಿಗೆ ಸಂಬಂಧಿಸಿದ್ದಲ್ಲ. ತನಿಖೆಗೆ ಆದೇಶ ಮಾಡಿರುವ ಮ್ಯಾಜಿಸ್ಟ್ರೇಟ್ ಕೂಡ ಸುಲಿಗೆ ಸೆಕ್ಷನ್ ಗಮನಿಸಿಲ್ಲ. ಹೀಗಾಗಿ ಮುಂದಿನ ವಿಚಾರಣೆ ವರೆಗೂ ತನಿಖೆಗೆ ತಡೆ ನೀಡಲಾಯ್ತು. ದೂರುದಾರರ ಆದರ್ಶ್ ಅಯ್ಯರ್ ಪರ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಾದ ಮಂಡಿಸಿದ್ದರು.
ಬೈರಾದೇವಿ ಸಿನಿಮಾ ನೋಡ್ತಿದ್ದ ಮಹಿಳೆ ಮೈಮೇಲೆ ಆವೇಶ, ರಾಧಿಕಾ ಕಾಳಿಮಾತೆ ಅವತಾರಕ್ಕೆ ಬೆರಗಾದ ಸ್ಯಾಂಡಲ್‌ವುಡ್!
ಜನಾಧಿಕಾರ ಸಂಘರ್ಷ ಪರಷತ್‌ನ ಆದರ್ಶ ಆರ್. ಐಯ್ಯರ್ ನೀಡಿದ ದೂರಿನ ಮೇರೆಗೆ ಶುಕ್ರವಾರ ಜನಪ್ರತಿನಿಧಿಗಳ ನ್ಯಾಯಾಲಯ ಎಫ್ಐಆರ್ ದಾಖಲಿಸುವಂತೆ ಸೂಚಿಸಿ ಮುಂದಿನ ವಿಚಾರಣೆಯನ್ನು ಅ.10ಕ್ಕೆ ಮುಂದೂಡಿಕೆ ಮಾಡಿತ್ತು.
ಬೀಚ್ ವೇರ್‌ನಲ್ಲಿ ಸ್ಟನ್ನಿಂಗ್ ಆಗಿ ನಟ ನಾಗಚೈತನ್ಯ ಮನದರಸಿ ನಟಿ ಶೋಭಿತಾ ಧೂಳಿಪಾಲ
ಸಚಿವೆ ನಿರ್ಮಲಾ ಸೀತಾರಾಮನ್ ಜತೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಬಿಜೆಪಿ ಮುಖಂಡ ನಳಿನ್ ಕುಮಾರ್ ಕಟೀಲ್, ಕೇಂದ್ರ ಹಾಗೂ ರಾಜ್ಯ ಬಿಜೆಪಿ ಕಚೇರಿ ಮತ್ತು ಇ.ಡಿ. ಇಲಾಖೆ ವಿರುದ್ಧ ದೂರು ದಾಖಲಿಸಲಾಗಿತ್ತು. 2019ರ ಏಪ್ರಿಲ್ ತಿಂಗಳಿನಿಂದ 2022ರ ಆಗಸ್ಟ್ ತಿಂಗಳವರೆಗೆ ಉದ್ಯಮಿ ಅನಿಲ್ ಅಗಲ್‌ವಾಲ್ ಅವರ ಸಂಸ್ಥೆಯ ಕಡೆಯಿಂದ ಸುಮಾರು 230 ಕೋಟಿ ರು. ಮತ್ತು ಅರೊಬಿಂದೋ ಫಾರ್ಮಸಿ ಸಂಸ್ಥೆಯಿಂದ 49 ಕೋಟಿ ರು.ನಷ್ಟು ಚುನಾವಣಾ ಬಾಂಡ್‌ಗಳ ಮೂಲಕ ವಸೂಲಿ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖವಿದೆ.