ದೆಹಲಿ ಬಳಿಕ ಪುದುಚೇರಿಯಲ್ಲೂ ಲಾಕ್‌ಡೌನ್ ವಿಸ್ತರಣೆ; ದೇಶದ ಬಹುತೇಕ ರಾಜ್ಯ ಲಾಕ್!

  • ಕೊರೋನಾ ನಿಯಂತ್ರಿಸಲು ಲಾಕ್‌ಡೌನ್ ವಿಸ್ತರಣೆ
  • ದೆಹಲಿ ಬಳಿಕ ಪುದುಚೇರಿಯಲ್ಲೂ ಲಾಕ್‌ಡೌನ್ ವಿಸ್ತರಣೆ
  • ದೇಶದ ಬಹುತೇಕ ರಾಜ್ಯಜಲ್ಲಿ ನಿರ್ಬಂಧ ವಿಸ್ತರಣೆ
Coronavirus Puducherry lockdown restrictions extended till May 31 after Delhi ckm

ಪುದುಚೇರಿ(ಮೇ.23):  ಕೊರೋನಾ ವೈರಸ್ ನಿಯಂತ್ರಣಕ್ಕೆ ಹೇರಲಾಗಿರುವ ಲಾಕ್‌ಡೌನ್ ಇದೀಗ ಒಂದೊಂದೆ ರಾಜ್ಯಗಳು ವಿಸ್ತರಣೆ ಮಾಡುತ್ತಿದೆ. ಕರ್ನಾಟಕ, ಕೇರಳ ಲಾಕ್‌ಡೌನ್ ಅವಧಿ ವಿಸ್ತರಿಸಿದೆ. ಇತ್ತ ದೆಹಲಿ ಸತತವಾಗಿ ಲಾಕ್‌ಡೌನ್ ವಿಸ್ತರಿಸುತ್ತಲೇ ಬಂದಿದೆ. ಇದೀಗ ಪುದುಚೇರಿಯಲ್ಲೂ ಲಾಕ್‌ಡೌನ್ ವಿಸ್ತರಣೆಯಾಗಿದೆ. ಮೇ 31ರ ವರೆಗೆ ಪುದುಚೇರಿಯಲ್ಲಿ ಲಾಕ್‌ಡೌನ್ ವಿಸ್ತರಿಸಲಾಗಿದೆ.

ಕೊರೋನಾಗಿಂತಲೂ ಹೆಚ್ಚು ಲಸಿಕೆ ಭಯ: ವೈದ್ಯರನ್ನು ನೋಡಿ ನದಿಗೆ ಹಾರಿದ ಜನ!

ಲಾಕ್‌ಡೌನ್ ವಿಸ್ತರಣೆಯನ್ನು ಪುದುಚೇರಿ ಗರ್ವನರ್ ತಮಿಳ್‌ಸಾಯಿ ಸೌಂದರಾಜನ್ ಸ್ಪಷ್ಟಪಡಿಸಿದ್ದಾರೆ. ಆಗತ್ಯ ವಸ್ತುಗಳ ಸೇವೆ ಬೆಳೆಗ್ಗೆಯಿಂದ 12 ಗಂಟೆವರೆಗೆ ಇರಲಿದೆ. ಬಳಿಕ ಸಂಪೂರ್ಣ ಬಂದ್ ಆಗಲಿದೆ. ಈ ಮೂಲಕ ಕೊರೋನಾ ನಿಯಂತ್ರಣಕ್ಕೆ ಕಠಿಣ ನಿರ್ಬಂಧಗಳನ್ನು ವಿಧಿಸಿದೆ.

ಪುದುಚೇರಿಯಲ್ಲಿ ಇಂದು(ಮೇ.23) 1,448 ಹೊಸ ಕೊರೋನಾ ಪ್ರಕರಣ ಪತ್ತೆಯಾಗಿದೆ. ಇನ್ನು 34 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಈ ಮೂಲಕ ಪುದುಚೇರಿ ಸಾವಿನ ಸಂಖ್ಯೆ 1,359ಕ್ಕೆ ಏರಿಕೆಯಾಗಿದೆ.

ಕೊರೋನಾ ಸಂಕಷ್ಟ, 1,250 ಕೋಟಿ ಮೊತ್ತದ ಪ್ಯಾಕೇಜ್ ಘೋಷಣೆ: ಯಾರಿಗೆಷ್ಟು ಪರಿಹಾರ? 

ದೆಹಲಿಯಲ್ಲೂ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿದೆ. ಮೇ.24ಕ್ಕೆ ಅಂತ್ಯವಾಗಬೇಕಿದ್ದ ಲಾಕ್‌ಡೌನ್ ಇದೀಗ ಮೇ.31ರ ವರೆಗೆ ವಿಸ್ತರಿಸಲಾಗಿದೆ. ದೆಹಲಿಯಲ್ಲಿ ಕೊರೋನಾ ಪ್ರಕರಣ ಸಂಖ್ಯೆ ಇಳಿಕೆಯಾಗಿದೆ. ಆದರೆ ತಜ್ಞರ ಸಲಹೆಯಂತೆ ಕಟ್ಟು ನಿಟ್ಟಿನ ಕ್ರಮ ಮುಂದುವರಿಸಲು ಸಿಎಂ ಅರವಿಂದ್ ಕೇಜ್ರಿವಾಲ್ ನಿರ್ಧರಿಸಿದ್ದಾರೆ. ಈ ಮೂಲಕ ಸಂಪೂರ್ಣ ಕೊರೋನಾ ಮುಕ್ತ ಮಾಡಲು ಮುಂದಾಗಿದ್ದಾರೆ.

ಭಾರತದ ಬಹುತೇಕ ರಾಜ್ಯಗಳು ಲಾಕ್‌ ಆಗಿವೆ. ಕೆಲ ರಾಜ್ಯಗಳಲ್ಲಿ ಕರ್ಫ್ಯೂ , ಮೈಕ್ರೋ ಕಂಟೈನ್ಮೆಂಟ್‌ಝೋನ್ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಮೂಲಕ ಕೊರೋನಾ ನಿಯಂತ್ರಣಕ್ಕೆ ಅಸ್ತ್ರ ಪ್ರಯೋಗಿಸಿದ್ದಾರೆ. 

ಭಾರತದಲ್ಲಿ ಮೇ.22ರಂದು 3 ಲಕ್ಷ ಕೊರೋನ ಹೊಸ ಪ್ರಕರಣಗಳು ದಾಖಲಾಗಿತ್ತು. ಇನ್ನು ಕಳೆದ 24 ಗಂಟೆಯಲ್ಲಿ 240,842 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿದೆ. ಇನ್ನು 3,741 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.

Latest Videos
Follow Us:
Download App:
  • android
  • ios