Asianet Suvarna News Asianet Suvarna News

ಹಿಟ್ಟಿಗೆ ಉಗುಳಿ ರೊಟ್ಟಿ ಮಾಡಿದ ವ್ಯಕ್ತಿ... ವಿಡಿಯೋ ವೈರಲ್‌ : ಆರೋಪಿಗಳ ಬಂಧನ

  • ಹಿಟ್ಟಿಗೆ ಉಗುಳಿ ರೊಟ್ಟಿ ತಯಾರಿ
  • ಅಸಹ್ಯಕರ ಕೃತ್ಯವೆಸಗಿದ ಆರೋಪಿಗಳ ಬಂಧನ
  • ಉತ್ತರಪ್ರದೇಶದ ಲಖ್ನೋದಲ್ಲಿ ಘಟನೆ
cook spitting on the dough for making rotis at Lucknow akb
Author
Bangalore, First Published Jan 12, 2022, 8:13 PM IST

ಲಖ್ನೋ( ಜ. 12): ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ರೊಟ್ಟಿ ಹಿಟ್ಟಿಗೆ ರೊಟ್ಟಿ ಮಾಡುವ ವ್ಯಕ್ತಿಯೋರ್ವ ಉಗುಳುತ್ತಿರುವ ವಿಡಿಯೋ ವೈರಲ್‌ ಆಗಿದ್ದು ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ. ಉತ್ತರಪ್ರದೇಶದ ಲಖ್ನೋದ ಬೀದಿ ಬದಿಯ ಉಪಹಾರ ಮಳಿಗೆಯೊಂದರಲ್ಲಿ ಈ ಘಟನೆ ನಡೆದಿದೆ.  22 ಸೆಕೆಂಡ್‌ಗಳ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಬಳಿಕ ಘಟನೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು,  ಹಿಟ್ಟಿಗೆ ಉಗಿದು ರೊಟ್ಟಿ ಮಾಡುವಾತ ಹಾಗೂ ಆತನ ಐವರು ಸಹಾಯಕರನ್ನು ಪೊಲೀಸರು ಬಂಧಿಸಿದ್ದಾರೆ. 

ಡ್ಯಾನಿಶ್ (Danish), ಹಫೀಜ್ ( Hafiz), ಮುಖ್ತಾರ್ ( Mukhtar), ಫಿರೋಜ್ (Firoz) ಮತ್ತು ಅನ್ವರ್‌ (Anwar) ಬಂಧಿತ ಆರೋಪಿಗಳಾಗಿದ್ದಾರೆ. ಇವರು ಅಡುಗೆ ಮಾಡುವಾತ ಹಿಟ್ಟಿಗೆ ಉಗುಳುತ್ತಿದ್ದರೆ ಅದನ್ನು ನೋಡುತ್ತಾ ನಿಂತಿದ್ದರು. ಆರೋಪಿಗಳ ವಿರುದ್ಧ ಸಾಂಕ್ರಾಮಿಕ ಕಾಯ್ದೆಯಡಿಯಲ್ಲಿ ರೋಗ ಅಥವಾ ಸೋಂಕನ್ನು ಹರಡುವ ನಿರ್ಲಕ್ಷ್ಯದ ಕ್ರಿಯೆ ಮತ್ತು ಸೋಂಕನ್ನು ಹರಡಲು ಮಾಡಿದ ಮಾರಣಾಂತಿಕ ಕೃತ್ಯದ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ. ಅಡುಗೆಯವರೊಂದಿಗೆ ಡಾಬಾ ಮಾಲೀಕ ಯಾಕೂಬ್‌ (Yakub)ನನ್ನು ಸಹ ಬಂಧಿಸಲಾಗಿದೆ ಎಂದು ಕಕೋರಿ(Kakori) ಸಹಾಯಕ ಪೊಲೀಸ್ ಕಮಿಷನರ್ ಅಶುತೋಷ್ ಕುಮಾರ್ (Ashutosh Kumar)ತಿಳಿಸಿದ್ದಾರೆ.

 

ಇಂಟರ್ನೆಟ್‌ನಲ್ಲಿ ಈ ವಿಡಿಯೋ ನೋಡಿದ ಜನರು ಕೋಪಗೊಂಡಿದ್ದುಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ದೂರದಿಂದ ಈ ವಿಡಿಯೋ ಚಿತ್ರೀಕರಣವಾಗಿದ್ದು, ಅಡುಗೆಯವರು ನಿಜವಾಗಿಯೂ ಉಗುಳುತ್ತಿದ್ದಾರೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ. ಆರೋಪವನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ತಾಂತ್ರಿಕ ಸಹಾಯ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ. 

Bihar Polls: ಸೋಲು ಸಹಿಸದಾದ ಜನನಾಯಕ, ಯುವಕನಿಗೆ ಥಳಿಸಿ ತನ್ನ ಉಗುಳು ಬಲವಂತವಾಗಿ ತಿನ್ನಿಸಿದ!

ಕೆಲ ದಿನಗಳ ಹಿಂದೆ ಉತ್ತರ ಪ್ರದೇಶ (Uttar Pradesh)ದ ಮುಜಾಫರ್‌ನಗರ (Muzaffarnagar)ದಲ್ಲಿ ನಡೆದ ಕೇಶ ವಿನ್ಯಾಸದ ತರಬೇತಿ ಸೆಮಿನಾರ್‌ನಲ್ಲಿ ಖ್ಯಾತ ಕೇಶ ವಿನ್ಯಾಸಕ ಜಾವೇದ್ ಹಬೀಬ್ (Jawed Habib) ಅವರು ಹೇರ್‌ ಸ್ಟೈಲ್ ಮಾಡುವಾಗ ನೀರು ಕಡಿಮೆಯಾದರೆ ತಲೆಯ ಮೇಲೆ ಉಗುಳಿ ಎಂದು ಹೇಳಿ ಮಹಿಳೆಯ ತಲೆ ಮೇಲೆ ಉಗುಳುವ ಮೂಲಕ ವಿವಾದವನ್ನು ಎಬ್ಬಿಸಿದ ಕೆಲವು ದಿನಗಳ ನಂತರ ಈ ವೀಡಿಯೊ ಹೊರಹೊಮ್ಮಿದೆ. ಅವರು ತಮ್ಮ ಈ ವಿಕೃತಿ ಬಗ್ಗೆ ಕ್ಷಮೆಯಾಚಿಸಿದರೂ ಸಹ, ಕೇಶ ವಿನ್ಯಾಸಕನ ವಿರುದ್ಧ ಉತ್ತರಪ್ರದೇಶ ಪೊಲೀಸರು ಸಾಂಕ್ರಾಮಿಕ ಕಾಯ್ದೆಯಡಿಯಲ್ಲಿ ಮತ್ತು ಶಾಂತಿಯನ್ನು ಕದಡಿದ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.

ರೈಲಲ್ಲಿ ಪಾನ್‌ ಉಗಿಯಲು ಪರಿಸರಸ್ನೇಹಿ ಚೀಲ!

ಆದಾಗ್ಯೂ, ವಿಶೇಷವಾಗಿ ಈ ಕೋವಿಡ್‌ ಸಾಂಕ್ರಾಮಿಕ ರೋಗದ ಈ ಸಂದರ್ಭದಲ್ಲಿ ಆಹಾರ ಮಾರಾಟಗಾರರು ಅಥವಾ ಅಡುಗೆಯವರು ಈ ಅಸಹ್ಯಕರ ಕಾರ್ಯವನ್ನು ಮಾಡಿರುವುದು ಇದೇ ಮೊದಲಲ್ಲ. ಕಳೆದ ವರ್ಷ, ಉತ್ತರಪ್ರದೇಶದಲ್ಲಿ ನಡೆದ ಮದುವೆಯೊಂದರಲ್ಲೂ ಇದೇ ರೀತಿಯ ಪ್ರಕರಣವೊಂದು ವೈರಲ್ ಆಗಿತ್ತು. ಆಗಿನ ವೈರಲ್ ವೀಡಿಯೊದಲ್ಲಿ, ನೌಶಾದ್ ಅಲಿಯಾಸ್ ಸೊಹೈಲ್ (Naushad alias Sohail) ಎಂದು ಗುರುತಿಸಲಾದ ವ್ಯಕ್ತಿಯೊಬ್ಬರು ರೊಟ್ಟಿಗೆ ಉಗುಳುವುದು ಕಂಡುಬಂದಿತ್ತು. ಉತ್ತರ ಪ್ರದೇಶದ (Uttar Pradesh) ಮೀರತ್‌ (Meerut) ನಲ್ಲಿ ನಡೆದ ಮದುವೆಯೊಂದರಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
 

Follow Us:
Download App:
  • android
  • ios