Asianet Suvarna News Asianet Suvarna News

ರೈಲಲ್ಲಿ ಪಾನ್‌ ಉಗಿಯಲು ಪರಿಸರಸ್ನೇಹಿ ಚೀಲ!

* ಬಂದಿವೆ ಉಗುಳುವ ಪೌಚ್‌, ಪೀಕುದಾನಿ, ಸ್ಪಿಟ್‌ ಬಿನ್‌

* ರೈಲ್ವೆ ನಿಲ್ದಾಣದಲ್ಲೂ ಇರುತ್ತೆ, ಪ್ರಯಾಣಿಕರ ಕೈಗೂ ಕೊಡ್ತಾರೆ!

* ಎಲೆಯಡಿಕೆ, ಗುಟ್ಕಾ ತಿನ್ನುವವರು ಈ ಪೌಚ್‌ನಲ್ಲಿ ಉಗಿಯಬಹುದು

* ಎಸೆದ ನಂತರ ಗಿಡ ಹುಟ್ಟುತ್ತದೆ!

To tackle public spitting in trains Railways push for pocket sized biodegradable spittoons pod
Author
Bangalore, First Published Oct 11, 2021, 11:16 AM IST

 ನವದೆಹಲಿ(ಅ.11): ರೈಲ್ವೆ ನಿಲ್ದಾಣ(Railway Station), ಬಸ್‌ ನಿಲ್ದಾಣದಂಥ(Bus Station) ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರ(Spit) ಸಂಖ್ಯೆ ಹೆಚ್ಚು. ಇದನ್ನು ತಡೆಯಲು ಭಾರತೀಯ ರೈಲ್ವೆ ವಿನೂತನ ವಿಧಾನ ಕಂಡುಕೊಂಡಿದೆ. ಪ್ರಯಾಣಿಕರು ಉಗುಳಿದರೂ ಅದು ಅನ್ಯರಿಗೆ ತೊಂದರೆ ಆಗದಂತೆ ಹೊಸ ಆವಿಷ್ಕಾರ ಮಾಡಲಾಗಿದ್ದು, ಅದನ್ನು ರೈಲ್ವೆ ಈಗ ಅಳವಡಿಸಿದೆ.

ಪ್ಯಾಕೆಟ್‌ ಪೌಚ್‌(Packet Pauch), ಮೊಬೈಲ್‌ ಕಂಟೇನರ್‌ ಹಾಗೂ ಉಗುಳುವ ಬಿನ್‌ಗಳನ್ನು ಉತ್ತರ, ಪಶ್ಚಿಮ ಹಾಗೂ ಮಧ್ಯ ರೈಲ್ವೆಯ 42 ನಿಲ್ದಾಣಗಳಲ್ಲಿ ಅಳವಡಿಸಲಾಗಿದೆ.

ಪ್ಯಾಕೆಟ್‌ ಪೌಚ್‌ಗಳನ್ನು 15-20 ಸಲ ಮರುಬಳಕೆ ಮಾಡಬಹುದಾಗಿದೆ. ಇವುಗಳ ಬೆಲೆ 5ರಿಂದ 10 ರು. ಮಾತ್ರ. ಉಗುಳುವವರು ಪ್ರಯಾಣಿಸುವ ವೇಳೆ ತಮ್ಮ ಜತೆಗೇ ಕೊಂಡೊಯ್ದು, ಈ ಪೌಚ್‌ಗಳಲ್ಲೇ ಉಗುಳಬಹುದು. ಅದನ್ನು ಬಳಸಿ ಒಮ್ಮೆ ನೆಲಕ್ಕೆ ಎಸೆದರೆ ಅದರಿಂದ ಪರಿಸರಕ್ಕೆ ಅಥವಾ ಅನ್ಯರ ಆರೋಗ್ಯಕ್ಕೆ ಯಾವುದೇ ಹಾನಿ ಇಲ್ಲ. ಈ ಪೌಚ್‌ಗಳಲ್ಲಿ ಸಸ್ಯಗಳ ಬೀಜಗಳನ್ನು ಇಟ್ಟಿರುತ್ತಾರೆ. ಉಗಿದವರು ಪೌಚ್‌ ಎಸೆದರೆ ಆ ನೆಲದಲ್ಲಿ ಸಸ್ಯಗಳು ಹುಟ್ಟುತ್ತವೆ.

ಮೊಬೈಲ್‌ ಕಂಟೇನರ್‌ (ಪೀಕುದಾನಿ)ಗಳನ್ನು 20, 30, 40 ಸಲ ಮರುಬಳಕೆ ಮಾಡಬಹುದು. ಇನ್ನು ನಿಲ್ದಾಣಗಳಲ್ಲಿ ಸ್ಪಿಟ್‌ ಬಿನ್‌ಗಳನ್ನು ಅಳವಡಿಸಲಾಗಿದ್ದು, ಎಲ್ಲೆಂದರಲ್ಲಿ ಜನರು ಉಗಿಯುವ ಬದಲು ಈ ಬಿನ್‌ಗಳಲ್ಲಿ ಉಗಿಯಬಹುದು.

ಈಜಿ ಸ್ಪಿಟ್‌ ಎಂಬ ಪುಣೆಯ ಸ್ಟಾರ್ಟಪ್‌ ಈ ಉಗುಳು ಕಂಡಿಕೆಗಳನ್ನು ಸೃಷ್ಟಿಸಿದ್ದು, ಅದರ ಜತೆ ರೈಲ್ವೆ ಇಲಾಖೆ ಒಪ್ಪಂದ ಮಾಡಿಕೊಂಡಿದೆ.

ರೈಲು ಅಥವಾ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಉಗಿದರೆ 500 ರು. ದಂಡವಿದೆ. ಆದರೂ ಜನ ದಂಡದ ಬಗ್ಗೆ ಕ್ಯಾರೇ ಅನ್ನುತ್ತಿಲ್ಲ. ಪ್ರಸ್ತುತ ರೈಲ್ವೆ ಇಲಾಖೆ ಉಗುಳು ಕಲೆಗಳನ್ನು ಸ್ವಚ್ಛಗೊಳಿಸಲು ವಾರ್ಷಿಕ 1200 ಕೋಟಿ ರು. ಖರ್ಚು ಮಾಡುತ್ತದೆ. ಇನ್ನು ಹೊಸ ಆವಿಷ್ಕಾರದಿಂದ ಈ ಖರ್ಚು ತಗ್ಗುವ ಸಾಧ್ಯತೆ ಇದೆ.

----

ಪುಣೆ ಸ್ಟಾರ್ಟಪ್‌ನ ಹೊಸ ಆವಿಷ್ಕಾರ

- ಉಗಿಯುವ ಪೌಚ್‌, ಸ್ಪಿಟ್‌ಬಿನ್‌ ತಯಾರಿಸಿರುವುದು ಪುಣೆಯ ಸ್ಟಾರ್ಟಪ್‌ ಕಂಪನಿ

- ರೈಲು ನಿಲ್ದಾಣ, ರೈಲ್ವೆಯ ಒಳಗೆ ಉಗುಳುವುದರಿಂದ ಆಗುವ ಕೊಳೆಗೆ ಪರಿಹಾರ

- ಈಜಿ ಸ್ಟಿಟ್‌ ಕಂಪನಿ ಜೊತೆ ರೈಲ್ವೆ ಇಲಾಖೆ ಒಪ್ಪಂದ, 42 ಕಡೆ ಹೊಸ ಸೌಕರ‍್ಯ ಅಳವಡಿಕೆ

- ಜನರು ಉಗುಳಲು ಈ ಸ್ಪಿಟ್‌ಬಿನ್‌ ಅಥವಾ ಮೊಬೈಲ್‌ ಪೌಚ್‌ಗಳನ್ನು ಬಳಸಬಹುದು

- ಪೌಚ್‌ನಲ್ಲಿ ಬೀಜವಿರುತ್ತದೆ, ಜನರು ಎಸೆದ ಮೇಲೆ ಈ ಬೀಜ ಮೊಳೆದು ಸಸಿಯಾಗುತ್ತದೆ

(ಫೋಟೋ; ಜನರಲ್‌ ಡೆಸ್ಕ್‌ ಫೋಲ್ಡರ್‌: ಸ್ಪಿಟ್‌1, ಸ್ಪಿಟ್‌ 2)

Follow Us:
Download App:
  • android
  • ios