* ಬಿಹಾರದಲ್ಲೊಂದು ಅಮಾನವೀಯ ಘಟನೆ* ಸೋಲು ಸಹಿಸದ ಜನ ನಾಯಕ, ದಲಿತರ ಮೇಲೆ ದೌರ್ಜನ್ಯ* ಸೋತ ನಾಯಕನ ಪುಂಡಾಟ ಕ್ಯಾಮೆರಾದಲ್ಲಿ ಸೆರೆ
ಪಾಟ್ನಾ(ಡಿ.13): ಮಾನವೀಯತೆ ಮತ್ತು ಪ್ರಜಾಪ್ರಭುತ್ವವನ್ನು ನಾಚಿಸುವಂತಹ ಘಟನೆಯೊಂದು ಬಿಹಾರದಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ಪ್ರಮುಖ ಅಭ್ಯರ್ಥಿಯೊಬ್ಬರು ಚುನಾವಣಾ ಪೂರ್ವದಲ್ಲಿ ಮತ ಪಡೆಯಲು ಕ್ಷೇತ್ರದ ಅಭಿವೃದ್ಧಿ ಹಾಗೂ ಸಮಾಜ ಸೇವೆ ಮಾಡುವುದಾಗಿ ಮತದಾರರಿಗೆ ಭರವಸೆ ನೀಡಿದರು. ಅಷ್ಟೇ ಅಲ್ಲದೇ, ಮತ ಪಡೆಯಲು ಹಣವನ್ನೂ ಹಂಚಿದ್ದರು. ಆದರೆ ಸೋತಾಗ ಅದೇ ಮತದಾರರ ಮೇಲೆ ದೌರ್ಜನ್ಯವೆಸಗಿದ್ದಾರೆ, ಸಮಾಧಾನವಾಗದಿದ್ದಾಗ ನಡುರಸ್ತೆಯಲ್ಲೇ ತಾನು ಉಗುಳಿದ್ದನ್ನು ತಿನ್ನುವಂತೆ ಒತ್ತಾಯಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ವಾಸ್ತವವಾಗಿ, ಈ ನಾಚಿಕೆಗೇಡಿನ ಘಟನೆ ನಡೆದದ್ದು ಔರಂಗಾಬಾದ್ ಜಿಲ್ಲೆಯ ಕುಟುಂಬ ಬ್ಲಾಕ್‌ನಲ್ಲಿ. ಮುಖ್ಯ ಅಭ್ಯರ್ಥಿ ಬಲವಂತ್ ಕುಮಾರ್ ಅವರು ಸೋಲಿನ ಬಳಿಕ ಇಬ್ಬರು ಯುವಕರಾದ ಅನಿಲ್ ಕುಮಾರ್ ಮತ್ತು ಮಂಜೀತ್ ಅವರ ಮುಂದೆ ಆಕ್ಷೇಪಾರ್ಹ ಮಾತುಗಳನ್ನು ಆಡಿದ್ದಾರೆ. ಇದಾದ ಬಳಿಕ ಯುವಕನೊಬ್ಬನಿಗೆ ತಾನು ಉಗುಳಿದ್ದನ್ನು ತಿನ್ನಿಸಿದ್ದಾನೆ. ಈ ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೀಡಿಯೋ ಖರಂತಿ ತೊಲೆ ಭೂಯಾನ್ ಬಿಘಾ ಗ್ರಾಮದಲ್ಲಿ ನಡೆದ ಘಟನೆಯದ್ದೆನ್ನಲಾಗಿದೆ
ಕೃತ್ಯದ ನಂತರ ಪೊಲೀಸರು ಕಾರ್ಯಪ್ರವೃತ್ತ
ವಿಡಿಯೋ ವೈರಲ್ ಆದ ತಕ್ಷಣ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದು ಔರಂಗಾಬಾದ್ ಎಸ್ಪಿ ಕಾಂತೇಶ್ ಕುಮಾರ್ ಮಿಶ್ರಾ ಸೂಚನೆ ಮೇರೆಗೆ ಅಂಬಾ ಪೊಲೀಸರು ಆರೋಪಿ ಬಲ್ವಂತ್ ಸಿಂಗ್ ನನ್ನು ಬಂಧಿಸಿದ್ದಾರೆ. ಇದೇ ವೇಳೆ ಸಂತ್ರಸ್ತ ಯುವಕರ ವಿಚಾರಣೆ ನಡೆಸಲಾಗುತ್ತಿದೆ.
ಆರೋಪಿ ಹೇಳೋದೇ ಬೇರೆ ಕಥೆ
ಮತ್ತೊಂದೆಡೆ ಆರೋಪಿ ಬಲವಂತ್ ತನ್ನ ಪರ ಹೇಳಿಕೆ ನೀಡಿ ಯುವಕರಿಬ್ಬರೂ ಮದ್ಯ ಸೇವಿಸಿ ಗಲಾಟೆ ಮಾಡುತ್ತಿದ್ದರು ಎಂದು ಸ್ಪಷ್ಟಪಡಿಸಿದ್ದಾರೆ. ಗ್ರಾಮದ ಜನರು ತಮ್ಮ ದೂರುಗಳೊಂದಿಗೆ ನನ್ನ ಬಳಿಗೆ ಬಂದಿದ್ದರು, ಆದ್ದರಿಂದ ಈ ಜನರ ಅಮಲು ತೊಡೆದುಹಾಕಲು ಧರಣಿಗಳನ್ನು ಆಯೋಜಿಸಲಾಗಿದೆ. ಏಕೆಂದರೆ ಈ ಜನರು ಪ್ರತಿದಿನ ಮದ್ಯ ಸೇವಿಸುತ್ತಾರೆ ಮತ್ತು ಜನರನ್ನು ನಿಂದಿಸುತ್ತಾರೆ. ಆದರೆ, ವೈರಲ್ ಆಗಿರುವ ವಿಡಿಯೋದಲ್ಲಿ ಮಾತ್ರ ಆರೋಪಿಯ ವರ್ತನೆ ಸ್[ಪಷ್ಟವಾಘಿ ಗೋಚರಿಸುತ್ತದೆ.
