Asianet Suvarna News Asianet Suvarna News

ನಗರೀಕರಣದಿಂದ ಪಶ್ಚಿಮ ಘಟ್ಟಗಳಿಗೆ ಅಪಾಯ!

ನಗರೀಕರಣದಿಂದ ಪಶ್ಚಿಮ ಘಟ್ಟಗಳಿಗೆ ಅಪಾಯ| ಔಟ್‌ ಲುಕ್‌ ವರದಿ| ಜನಸಂಖ್ಯಾ ಸ್ಫೋಟ, ಅಭಿವೃದ್ಧಿ ಕಾಮಗಾರಿಯಿಂದಾಗಿ ಘಟ್ಟಕ್ಕೆ ಸಂಚಾಕಾರ| ಹವಮಾನ ಬದಲಾವಣೆಯಿಂದಾಗಿ ಜೀವ ವೈವಿಧ್ಯಗಳಿಗೆ ತೊಂದರೆ| ವಿಶ್ವ ಪಾರಂಪರಿಕ ಔಟ್‌ಲುಕ್‌ ವರದಿಯಿಂದ ಆಘಾತಕಾರಿ ಮಾಹಿತಿ

Conservation outlook of Western Ghats grim says report pod
Author
Bangalore, First Published Dec 7, 2020, 8:09 AM IST

ಕೊಚ್ಚಿ(ಡಿ.07): ವಿಶ್ವದ ಹಲವು ಅಪರೂಪದ ಜೀವಿಗಳ ಆವಾಸ ಸ್ಥಾನವಾಗಿರುವ, ಯುನೆಸ್ಕೋದ ವಿಶ್ವ ನೈಸರ್ಗಿಕ ಪಾರಂಪರಿಕ ತಾಣ ಎಂದು ಘೋಷಣೆಯಾಗಿರುವ ಪಶ್ಚಿಮ ಘಟ್ಟ, ಜನಸಂಖ್ಯಾ ಸ್ಪೋಟ, ನಗರೀಕರಣ ಹಾಗೂ ಹವಾಮಾನ ಬದಲಾವಣೆಯಿಂದಾಗಿ ಅಪಾಯದಲ್ಲಿದೆ ಎನ್ನುವ ಆಘಾತಕಾರಿ ವಿಷಯ ವರದಿಯೊಂದರಿಂದ ಗೊತ್ತಾಗಿದೆ. ಯುನೆಸ್ಕೋದಿಂದ ಪಾರಂಪರಿಕ ತಾಣ ಎಂದು ಘೋಷಿಸಲಾಗಿರುವ 252 ತಾಣಗಳು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಧ್ಯವೇ ಎನ್ನುವ ಬಗ್ಗೆ ವಿಶ್ವ ಪಾರಂಪರಿಕ ಔಟ್‌ಲುಕ್‌ನ ಪ್ರಕೃತಿ ಸಂರಕ್ಷಣೆಯ ಅಂತಾರಾಷ್ಟ್ರೀಯ ಒಕ್ಕೂಟ ಮಾಡಿದ ಸಂಶೋಧನೆಯಿಂದ ಈ ಮಾಹಿತಿ ತಿಳಿದು ಬಂದಿದೆ.

ಹೊಸ ಪ್ರಬೇಧದ ಹಲ್ಲಿ ಅನ್ವೇಷಿಸಿದ ಉದ್ಧವ್ ಠಾಕ್ರೆ ಪುತ್ರ ತೇಜಸ್ ಹಾಗೂ ತಂಡ!

ಪಶ್ಚಿಮ ಘಟ್ಟದ ಸುತ್ತಮುತ್ತಲಿನ ಜನಸಂಖ್ಯಾ ಒತ್ತಡ, ಹೊಸ ರಸ್ತೆ ನಿರ್ಮಾಣ, ಇರುವ ರಸ್ತೆಯ ಅಗಲೀಕರಣ, ವಿದ್ಯುತ್‌ ಉತ್ಪಾದನೆ ಮುಂತಾದ ಅಭಿವೃದ್ಧಿ ಕಾಮಗಾರಿಗಳಿಂದಾಗಿ ಪಶ್ಚಿಮ ಘಟ್ಟಅಪಾಯದ ಅಂಚಿನಲ್ಲಿದೆ. ಇದರ ಜತೆಗೆ ನಗರೀಕರಣ, ಕೃಷಿ ವಿಸ್ತರಣೆ, ಜಾನುವಾರುಗಳ ಮೇವು ಮತ್ತು ಕಾಡುಗಳ ವಿಂಗಡನೆ ಅಲ್ಲಿರುವ ಜೀವ ವೈವಿಧ್ಯಗಳ ಮೇಲೆ ಋುಣಾತ್ಮಕ ಪರಿಣಾಮ ಬೀರುತ್ತಿದೆ. ಇವೆಲ್ಲವುಗಳಿಗಿಂತ ಹವಾಮಾನ ಬದಲಾವಣೆಯಿಂದ ಮುಂಗಾರಿನ ಮೇಳೆ ಉಂಟಾಗುವ ಪರಿಣಾಮ ಪಶ್ಚಿಮ ಘಟ್ಟಗಳನ್ನು ತೀವ್ರವಾಗಿ ಭಾಧಿಸುತ್ತಿದೆ ಎಂದು ವರದಿ ಹೇಳಿದೆ.

ಅಲ್ಲದೇ ಪಶ್ಚಿಮ ಘಟ್ಟದ ಸುತ್ತಮುತ್ತ ನಡೆಯುತಿರುವ ಕೆಲಸಗಳಿಂದಾಗಿ ಘಟ್ಟವನ್ನು ಉಳಿಸಿಕೊಳ್ಳುವುದು ಕಷ್ಟ. ಈಗಾಗಲೇ ಶೇ.40ರಷ್ಟುಸಹಜ ಕಾಡು ನಾಶವಾಗಿದ್ದರಿಂದ ಪಶ್ಚಿಮ ಘಟ್ಟವನ್ನು ಉಳಿಸುವುದು ಕಷ್ಟಸಾಧ್ಯ ಎಂದು ಕಳವಳ ವ್ಯಕ್ತ ಪಡಿಸಿದೆ. ಜತೆಗೆ ಸಂರಕ್ಷಿತ ಪ್ರದೇಶಗಳ ನಡುವೆ ವನ್ಯಜೀವಿಗಳ ಚಲನೆಗೆ ಕಾರಿಡಾರ್‌ಗಳ ನಿರ್ಮಾಣದ ಅಗತ್ಯವಿದೆ ಎಂದಿ ವರದಿ ಪ್ರತಿಪಾದಿಸಿದೆ.

16 ವರ್ಷದಿಂದ ಜೀವವೈವಿಧ್ಯ ಸಮಿತಿ ಇಲ್ಲ!

ಪಶ್ಚಿಮ ಘಟ್ಟದ ಒಳಗೆ ಹಾಗೂ ಸುತ್ತಮುತ್ತ ಭಾರೀ ಜನಸಂಖ್ಯಾ ಒತ್ತಡದ ನಡುವೆಯೂ ಅಲ್ಲಿನ ಜೀವ ವೈವಿಧ್ಯತೆ ಉಳಿದುಕೊಂಡಿರುವುದೇ ಅಸಾಧಾರಣ ಎಂದು ವರದಿಯಲ್ಲಿ ಹೇಳಲಾಗಿದೆ.

Follow Us:
Download App:
  • android
  • ios