ಮುಂಬೈ(ಜೂ.21): ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಕಿರಿಯ ಪುತ್ರ ತೇಜಸ್ ಠಾಕ್ರೆ ಹಾಗೂ ಅವರ ತಂಡ ಕರ್ನಾಟಕದ ಪಶ್ಚಿಮ ಘಟ್ಟದ ಸಕಲೇಶಪುರದಲ್ಲಿ ಹೊಸ ಪ್ರಬೇಧದ ಹಲ್ಲಿಯೊಂದನ್ನು ಪತ್ತೆ ಹಚ್ಚಿದ್ದಾರೆ. ಈ ಹೊಸ ಪ್ರಬೇಧದ ಹಲ್ಲಿಗೆ ‘Cnemaspis magnifica’ ಎಂದು ನಾಮಕರಣ ಮಾಡಲಾಗಿದೆ. 

ಹೌದು ತೇಜಸ್ ಠಾಕ್ರೆ ಸೇರಿ ಒಟ್ಟು ನಾಲ್ವರ ತಂಡ ಈ ಹೊಸ ಪ್ರಬೆಧದ ಹಲ್ಲಿಯ ಸಂಶೋಧನಾ ವರದಿ ತಯಾರಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಅಕ್ಷಯ್ ಖಾಂಡೆಕರ್ ಹೊಸ 'ಗೋಕೋ' ಪ್ರಬೇಧದ ಆವಿಷ್ಕಾರವನ್ನು ಜೀವ ವೈವಿಧ್ಯಗಳ ಭಂಡಾರವಿರುವ ಪಶ್ಚಿಮ ಘಟ್ಟದಲ್ಲಿ ನಡೆಸಿದ್ದೇವೆ ಎಂದಿದ್ದಾರೆ. ಇನ್ನು ಈ ಆವಿಷ್ಕಾರವನ್ನು ವರದಿಯನ್ನು ಅಂತಾರಾಷ್ಟ್ರೀಯ ಸಂಶೋಧನಾ ಪತ್ರಿಕೆ ಜೂಟಾಕ್ಸಾದಲ್ಲಿ ಪ್ರಕಟ ಮಾಡಲಾಗಿದೆ ಎಂಬುವುದು ಉಲ್ಲೇನೀಯ.

ಇನ್ನು ಇದಕ್ಕೂ ಮೊದಲು ತೇಜಸ್ ಠಾಕ್ರೆ 2015ರಲ್ಲಿ ಮೊದಲ ಬಾರಿಗೆ ಬೋಯಿಗಾ ಪ್ರಬೇಧಕ್ಕೆ ಸೇರಿದ ಈ ಹಾವು ಪತ್ತೆ ಹಚ್ಚಿದ್ದರು. ಬಳಿಕ ಹಾವಿನ ವರ್ತನೆಯನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ, ಅದರ ವರದಿಯನ್ನು ಜೀವವೈವಿಧ್ಯ ಸಂರಕ್ಷಣಾ ಸಂಸ್ಥೆಯ ಮುಂದಿಟ್ಟಿದ್ದರು. ಈ ಸಂಶೋಧನೆಯ ನೆನಪಿನಾರ್ಥ ಈ ಹಾವಿಗೆ ಠಾಕ್ರೇಸ್ ಕ್ಯಾಟ್ ಸ್ನೇಕ್ ಎಂದು ಹೆಸರಿಡಲಾಗಿತ್ತು. ಹಾವಿನ ಸಂಶೋಧನಾ ವರದಿ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ಪತ್ರಿಕೆಯಲ್ಲೂ ಪ್ರಕಟವಾಗಿತ್ತು.