ತಿರುವನಂತಪುರ(ಡಿ.07): ಕೇರಳದದ ಪ್ರತಿಷ್ಠಿತ ‘ರಾಜೀವ್‌ ಗಾಂಧಿ ಜೈವಿಕ ತಂತ್ರಜ್ಞಾನ ಕೇಂದ್ರ’ಕ್ಕೆ ಹಿಂದುತ್ವದ ಪ್ರಬಲ ಪ್ರತಿಪಾದಕ, ಆರ್‌ಎಸ್‌ಎಸ್‌ ಮುಖಂಡ ಮಾಧವ ಸದಾಶಿವ ಗೋಲ್ವಾಲ್ಕರ್‌ ಅವರ ಹೆಸರನ್ನು ನಾಮಕರಣ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.

ಸಿದ್ದರಾಮಯ್ಯ ಹೋರಾಟದ ನೇತೃತ್ವ ವಹಿಸಿಕೊಳ್ಳಲಿ, RSS, ಈಶ್ವರಪ್ಪ ಯಾಕೆ ಬೇಕು?'

ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಕೇರಳದ ಆಡಳಿತಾರೂಢ ಎಲ್‌ಡಿಎಫ್‌ ಹಾಗೂ ವಿಪಕ್ಷ ಕಾಂಗ್ರೆಸ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ವಿಜ್ಞಾನ ಕ್ಷೇತ್ರಕ್ಕೆ ಗೋಲ್ವಾಲ್ಕರ್‌ ಕೊಡುಗೆಯನ್ನು ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿರುವ ಕಾಂಗ್ರೆಸ್‌ ಮತ್ತು ಎಲ್‌ಡಿಎಫ್‌, ಪ್ರತಿಯೊಂದು ವಿಚಾರಗಳನ್ನು ಬಿಜೆಪಿ ತನ್ನ ಕೋಮುವಾದಕ್ಕೆ ಬಳಸಿಕೊಳ್ಳುತ್ತಿದೆ ಎಂದು ಕಿಡಿಕಾರಿವೆ.

RSS ಕೈವಾಡ ಇರೋದ್ರಿಂದ ಕುರುಬ ಹೋರಾಟಕ್ಕೆ ಹೋಗಲ್ಲ: ಸಿದ್ದರಾಮಯ್ಯ

ಮತ್ತೊಂದೆಡೆ ರಾಜೀವ್‌ ಗಾಂಧಿ ಜೈವಿಕ ತಂತ್ರಜ್ಞಾನದ 2ನೇ ಕ್ಯಾಂಪಸ್‌ಗೆ ಗೋಲ್ವಾಲ್ಕರ್‌ ಹೆಸರು ಮರುನಾಮಕರಣ ಮಾಡುವ ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು. ಜೊತೆಗೆ ಗೋಲ್ವಾಲ್ಕರ್‌ ಬದಲಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಪಡೆದ ಭಾರತದ ವಿಜ್ಞಾನಿಯೊಬ್ಬರ ಹೆಸರನ್ನು ಈ ಸಂಸ್ಥೆಗೆ ನಾಮಕಾರಣ ಮಾಡುವ ಬಗ್ಗೆಯೂ ಗಂಭೀರವಾಗಿ ಪರಿಗಣಿಸಬೇಕು ಎಂದು ಕೇಂದ್ರ ಮಂತ್ರಿ ಡಾ. ಹರ್ಷವರ್ಧನ್‌ ಅವರಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಪತ್ರ ಮುಖೇನಾ ಮನವಿ ಮಾಡಿಕೊಂಡಿದ್ದಾರೆ.