ಚುನಾವಣೆ ರ್‍ಯಾಲಿ ವೇಳೆ ಕಾರ್ಯಕರ್ತೆಗೆ ಲೈಂಗಿಕ ಕಿರುಕುಳ ನೀಡಿದ ಹರ್ಯಾಣ ಕಾಂಗ್ರೆಸ್‌ ನಾಯಕ! ವಿಡಿಯೋ ವೈರಲ್

ಹರ್ಯಾಣ ಚುನಾವಣೆ ರ್‍ಯಾಲಿ ಸಂದರ್ಭದಲ್ಲಿ ವೇದಿಕೆ ಮೇಲೆ ತನ್ನ ಪಕ್ಷದ ಮಹಿಳಾ ಕಾರ್ಯಕರ್ತೆಯೊಂದಿಗೆ ಅನುಚಿತವಾಗಿ ವರ್ತಿಸಿದ ಕಾಂಗ್ರೆಸ್‌ ನಾಯಕರು ಆಕೆಗೆ ಕಿರುಕುಳ ನೀಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Congress Woman Supporter Molested On Stage At Congress Rally; Kumari Selja Calls For Action rav

ನವದೆಹಲಿ (ಅ.6): ಹರ್ಯಾಣ ಚುನಾವಣೆ ರ್‍ಯಾಲಿ ಸಂದರ್ಭದಲ್ಲಿ ವೇದಿಕೆ ಮೇಲೆ ತನ್ನ ಪಕ್ಷದ ಮಹಿಳಾ ಕಾರ್ಯಕರ್ತೆಯೊಂದಿಗೆ ಅನುಚಿತವಾಗಿ ವರ್ತಿಸಿದ ಕಾಂಗ್ರೆಸ್‌ ನಾಯಕರು ಆಕೆಗೆ ಕಿರುಕುಳ ನೀಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕಾಂಗ್ರೆಸ್‌ ಸಂಸದ ದೀಪೇಂದರ್ ಹೂಡಾ ತಮ್ಮ ಪಕ್ಷದ ಅಭ್ಯರ್ಥಿ ಪರ ಚುನಾವಣಾ ಪ್ರಚಾರಕ್ಕಾಗಿ ಆಯೋಜಿಸಿದ್ದ ಸಭೆಯೊಂದರಲ್ಲಿ ದೀಪೇಂದರ್‌ ಅವರನ್ನು ಸನ್ಮಾನಿಸಲು ವೇದಿಕೆ ಮೇಲೆ ಬಂದಿದ್ದ ಮಹಿಳಾ ಕಾರ್ಯಕರ್ತೆಯೊಂದಿಗೆ ನಾಯಕರು ಅನುಚಿತವಾಗಿ ವರ್ತಿಸಿದ್ದಲ್ಲದೇ, ಅವರಿಗೆ ಕಿರುಕುಳ ನೀಡಿದ್ದಾರೆ. ಈ ಸಂಬಂಧ ವಿಡಿಯೋವೊಂದು ವೈರಲ್‌ ಆಗಿದೆ. ತನ್ನ ಪಕ್ಷದ ನಾಯಕರ ವಿರುದ್ಧ ಕಠಿಣ ಕೈಗೊಳ್ಳಬೇಕೆಂದು ಸಂಸದೆ ಕುಮಾರಿ ಸಲ್ಜಾ ಅವರು ಆಗ್ರಹಿಸಿದ್ದಾರೆ.

2 ರಾಜ್ಯಗಳ ಚುನಾವಣೋತ್ತರ ಸಮೀಕ್ಷೆ ಪ್ರಕಟ: ಹರ್‍ಯಾಣದಲ್ಲಿ ಕಾಂಗ್ರೆಸ್‌, ಕಾಶ್ಮೀರದಲ್ಲಿ ಅತಂತ್ರ?

ಟ್ವಿಟ್‌ನಲ್ಲಿ ಖಚಿತಪಡಿಸಿದ ಕುಮಾರಿ ಸೆಲ್ಜಾ:

ಹಾಡಹಾಗಲೇ ಅದು ದೀಪೇಂದರ್ ಹೂಡಾ ಅವರ ಸಮ್ಮುಖದಲ್ಲಿ ನಡೆದ ಚುನಾವಣಾ ಪ್ರಚಾರ ವೇಳೆ ಕಾಂಗ್ರೆಸ್ ವೇದಿಕೆಯಲ್ಲಿ ಮಹಿಳಾ ನಾಯಕಿಯೊಬ್ಬರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಬಹಿರಂಗವಾಗಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಹಗಲಲ್ಲೇ ಸಾರ್ವಜನಿಕ ವೇದಿಕೆಗಳಲ್ಲಿ ಕಾಂಗ್ರೆಸ್ ನ ಮಹಿಳೆಯರು ಸುರಕ್ಷಿತವಾಗಿಲ್ಲದಿದ್ದರೆ ರಾಜ್ಯದ ಮಹಿಳೆಯರು ಎಷ್ಟು ಸುರಕ್ಷಿತ ಎಂದು ಪ್ರಶ್ನಿಸಿದ್ದಾರೆ.

'ಈ ಘಟನೆ ಕಾಂಗ್ರೆಸ್‌ನ ಮಹಿಳಾ ವಿರೋಧಿ ಮನಸ್ಥಿತಿಯನ್ನು ಸೂಚಿಸುತ್ತದೆ" ಎಂದು ಒತ್ತಿ ಹೇಳಿದ ಪೂನಾವಾಲಾ, ಮಹಿಳಾ ನಾಯಕಿಯೊರ್ವಳು ಸಾರ್ವಜನಿಕ ವೇದಿಕೆಯಲ್ಲೇ ಕಾಂಗ್ರೆಸ್‌ ಮುಖಂಡರಿಂದ ಕಿರುಕುಳಕ್ಕೊಳಗಾಗಿರುವುದು ಅವರು ಅನುಭವಿಸಿದ ಅಸ್ವಸ್ಥತೆ, ಮುಜುಗರ ವೀಡಿಯೊದಲ್ಲಿ ಕಾಣಿಸುತ್ತದೆ ಎಂದಿದ್ದಾರೆ.

 

ಹರ್ಯಾಣದಲ್ಲಿ ಬಿಜೆಪಿಗೆ ಶಾಕ್, ಜಮ್ಮು ಕಾಶ್ಮೀರ ಅತಂತ್ರ; ಮತಗಟ್ಟೆ ಸಮೀಕ್ಷೆ ಪ್ರಕಟ!

'ಕಾಂಗ್ರೆಸ್‌ ಪುರುಷರ ದುರ್ವರ್ತನೆಯಿಂದಾಗಿ ಕಾಂಗ್ರೆಸ್‌ನ ಹಲವು ಮಹಿಳಾ ಮುಖಂಡರು ಪಕ್ಷ ತೊರೆದಿದ್ದಾರೆ. ಆದರೂ ಮಹಿಳಾ ಸಬಲೀಕರಣದ ಬಗ್ಗೆ ಮಾಡುವ ಪ್ರಿಯಾಂಕಾ ವಾದ್ರಾ ಯಾಕೆ ಮೌನವಾಗಿದ್ದಾರೆ. ಕಾಂಗ್ರೆಸ್‌ ಮಹಿಳಾ ವಿರೋಧಿ ಮನಸ್ಥಿತಿಯನ್ನು ಸೂಚಿಸುತ್ತದೆ. ಪ್ರಿಯಾಂಕಾ ವಾದ್ರಾ ಮತ್ತು ರಾಹುಲ್ ಗಾಂಧಿ ಹೂಡಾ ಬೆಂಬಲಿಗರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆಯೇ? ಎಂದು ಪ್ರಶ್ನಿಸಿದ್ದಾರೆ.

Latest Videos
Follow Us:
Download App:
  • android
  • ios