ಸೆಂಗೋಲ್ ಅಲ್ಲ ಅದು 'ಬೋಗಸ್', ಕಾಂಗ್ರೆಸ್ ಮಾತಿಗೆ ಕಿಡಿಕಿಡಿಯಾದ ಬಿಜೆಪಿ!
ನಿರೀಕ್ಷೆಯಂತೆಯೇ ಕಾಂಗ್ರೆಸ್ ಪಕ್ಷ ಸೆಂಗೋಲ್ ವಿರುದ್ಧ ತನ್ನ ಟೀಕೆಗಳನ್ನು ಮಾಡಿದೆ. ಸೆಂಗೋಲ್ ಎನ್ನುವುದು ಅಧಿಕಾರ ಹಸ್ತಾಂತರದ ಪ್ರತಿಬಿಂಬ ಎಂದು ಇತಿಹಾಸದಲ್ಲೂ ಎಲ್ಲೂ ದಾಖಲಾಗಿಲ್ಲ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿರುವ ಮಾತಿಗೆ ಬಿಜೆಪಿ ಕಿಡಿಕಿಡಿಯಾಗಿದೆ.
ನವದೆಹಲಿ (ಮೇ.26): ಅಧಿಕಾರ ಹಸ್ತಾಂತರದ ರೂಪದಲ್ಲಿ ಸೆಂಗೋಲ್‌ಅನ್ನು ಬ್ರಿಟಿಷರು ಭಾರತಕ್ಕೆ ನೀಡಿದ್ದರು ಎನ್ನುವುದಕ್ಕೆ ಲಾರ್ಡ್ ಮೌಂಟ್‌ಬ್ಯಾಟನ್, ಸಿ ರಾಜಗೋಪಾಲಾಚಾರಿ ಮತ್ತು ಜವಾಹರ್‌ಲಾಲ್ ನೆಹರು ಮೂಲಕ ಯಾವುದೇ ಅಧಿಕೃತ ದಾಖಲಿತ ಪುರಾವೆಗಳಿಲ್ಲ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ನೀಡಿರುವ ಹೇಳಿಕೆ ಶುಕ್ರವಾರ ರಾಜಕೀಯ ಕ್ಷೇತ್ರದಲ್ಲಿ ಗದ್ದಲಕ್ಕೆ ಕಾರಣವಾಗಿದೆ. ಸೆಂಗೋಲ್ ಬಗ್ಗೆ ನೇರವಾಗಿ ಹಾಗೂ ಬಹಳ ಸರಳವಾಗಿ ಹೇಳುವುದೇನೆಂದರೆ, ಇದು ಬೋಗಸ್ ಎಂದು ಹಿರಿಯ ಕಾಂಗ್ರೆಸ್ ನಾಯಕ ಹೇಳಿದ್ದಾರೆ. ಇದಕ್ಕೆ ದೊಡ್ಡ ಮಟ್ಟದಲ್ಲಿ ಟೀಕೆ ಮಾಡಿರುವ ಗೃಹ ಸಚಿವ ಅಮಿತ್ ಶಾ, ಭಾರತದ ಅತ್ಯಂತ ಹಳೆಯ ಪಕ್ಷವು, ದೇಶದ ಕುರಿತಾಗಿ ಮತ್ತೊಮ್ಮೆ ಅವಮಾನ ಮಾಡುತ್ತಿದೆ ಎಂದು ಆರೋಪ ಮಾಡಿದ್ದಾರೆ. "ಕಾಂಗ್ರೆಸ್ ಪಕ್ಷವು ಭಾರತೀಯ ಸಂಪ್ರದಾಯಗಳು ಮತ್ತು ಸಂಸ್ಕೃತಿಯನ್ನು ಏಕೆ ಇಷ್ಟು ದ್ವೇಷಿಸುತ್ತದೆ? ಭಾರತದ ಸ್ವಾತಂತ್ರ್ಯವನ್ನು ಸಂಕೇತಿಸಲು ತಮಿಳುನಾಡಿನ ಪವಿತ್ರ ಶೈವ ಮಠವು ಪಂಡಿತ್ ನೆಹರು ಅವರಿಗೆ ಪವಿತ್ರ ಸೆಂಗೋಲ್ ಅನ್ನು ನೀಡಿತು ಆದರೆ ಅದನ್ನು 'ವಾಕಿಂಗ್ ಸ್ಟಿಕ್' ಎಂದು ಮ್ಯೂಸಿಯಂನಲ್ಲಿ ಇಡುವ ಮೂಲಕ ಇಷ್ಟು ವರ್ಷ ಇತಿಹಾಸದಿಂದ ಮರೆಮಾಚಲಾಗಿತ್ತು' ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
ದೇಶದ ಸಂಸತ್‌ನಲ್ಲಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಸೆಂಗೋಲ್ ಅಥವಾ ರಾಜದಂಡವನ್ನು ಪ್ರತಿಷ್ಠಾಪನೆ ಮಾಡುತ್ತಿದ್ದಾರೆ. ಈ ಕುರಿತಾಗಿ ವಾಗ್ದಾಳಿ ನಡೆಸಿದ ಜೈರಾಮ್ ರಮೇಶ್, ರಾಜದಂಡವನ್ನು ಈಗ ತಮಿಳುನಾಡಿನಲ್ಲಿ ತಮ್ಮ ರಾಜಕೀಯ ಉದ್ದೇಶಗಳಿಗಾಗಿ ಪ್ರಧಾನಿ ಮೋದಿ ಡ್ರಮ್ ಬಾರಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಇದು ತನ್ನ ತಿರುಚಿದ ಉದ್ದೇಶಗಳಿಗೆ ಸರಿಹೊಂದುವಂತೆ ಸತ್ಯಗಳನ್ನು ಕಸೂತಿ ಮಾಡುವ ಈ ಬ್ರಿಗೇಡ್‌ನ ವಿಶಿಷ್ಟವಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ. "ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಹೊಸ ಸಂಸತ್ತನ್ನು ಉದ್ಘಾಟಿಸಲು ಏಕೆ ಅವಕಾಶ ನೀಡುತ್ತಿಲ್ಲ ಎಂಬುದು ನಿಜವಾದ ಪ್ರಶ್ನೆ" ಎಂದು ಜೈರಾಮ್ ರಮೇಶ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.
ಪವಿತ್ರ ಶೈವ ಮಠವಾದ ತಿರುವಾಡುತುರೈ ಅಧೀನಂ ಭಾರತ ಸ್ವಾತಂತ್ರ್ಯದ ಸಮಯದಲ್ಲಿ ಸೆಂಗೋಲ್‌ನ ಮಹತ್ವದ ಬಗ್ಗೆ ಮಾತನಾಡಿದೆ ಎಂದು ಅಮಿತ್ ಶಾ ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಅವರ ನಡವಳಿಕೆಯನ್ನು ಪ್ರತಿಬಿಂಬಿಸಬೇಕಾಗಿದೆ ಎಂದು ಅವರು ಹೇಳಿದರು.
ಮದ್ರಾಸ್ ಪ್ರಾಂತ್ಯದ ಧಾರ್ಮಿಕ ಸಂಸ್ಥೆಯಿಂದ ನಿರ್ಮಾಣವಾದ ಮತ್ತು ಮದ್ರಾಸ್ ನಗರದಲ್ಲಿ (ಈಗ ಚೆನ್ನೈ) ರಚಿಸಲಾದ ಭವ್ಯವಾದ ರಾಜದಂಡವನ್ನು ಆಗಸ್ಟ್ 1947 ರಲ್ಲಿ ಜವಾಹರಲಾಲ್ ನೆಹರು ಅವರಿಗೆ ನೀಡಲಾಯಿತು ಎಂದು ಜೈರಾಮ್ ರಮೇಶ್ ಹೇಳಿದ್ದಾರೆ. ಆದರೆ, ಇದನ್ನೀಗ ಕೆಲವರ ಮನಸ್ಸಿನಲ್ಲಿ ಸಂಪೂರ್ಣವಾಗಿ ಬೇರೆಯದೇ ರೀತಿಯಲ್ಲಿ ತಯಾರಿಸಲ್ಪಟ್ಟಿದೆ ಮತ್ತು ವಾಟ್ಸ್‌ಆಪ್ ಮೂಲಕ ಇದನ್ನು ಮಾಧ್ಯಮದಲ್ಲಿರುವ ಮೋದಿ ಭಕ್ತರಿಗೆ ನೀಡಲಾಗಿದೆ. ಆದರೆ, ಇಬ್ಬರು ರಾಜಾಜಿ ವಿದ್ವಾಂಸರು ಇದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ ಎಂದು ಕಾಂಗ್ರೆಸ್‌ನ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿರುವ ಜೈರಾಮ್ ರಮೇಶ್ ಹೇಳಿದ್ದಾರೆ.
Historic Sceptre Sengol: ಕಾಂಗ್ರೆಸ್ ಮರೆತಿದ್ದ ರಾಜದಂಡವನ್ನು ಹೊಸ ಸಂಸತ್ತಿನಲ್ಲಿ ಇಡಲಿರುವ ಪ್ರಧಾನಿ ಮೋದಿ!
ಜೆಪಿ ನಡ್ಡಾ ಟೀಕೆ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದು ಹೊಸ ಸಂಸತ್ತಿನ ಕಟ್ಟಡದ ಉದ್ಘಾಟನೆಯನ್ನು ಬಹಿಷ್ಕರಿಸುವ ಪಕ್ಷಗಳು ರಾಜವಂಶಸ್ಥರು ಎಂದು ಹೇಳಿದರು. ಹೊಸ ಸಂಸತ್ತು ಉದ್ಘಾಟನೆಯನ್ನು ಬಾಯ್ಕಾಟ್ ಮಾಡುತ್ತಿರುವುದು ಸಂವಿಧಾನ ರಚಿಸಿದ್ದವರಿಗೆ ಮಾಡಿರುವ ದೊಡ್ಡ ಅವಮಾನ. ಇದನ್ನು ಕಾಂಗ್ರೆಸ್ ಎನ್ನುವ ಬದಲು ನೆಹರು-ಗಾಂಧಿ ರಾಜವಂಶ ಎನ್ನುವುದು ಸೂಕ್ತ ಎಂದಿದ್ದಾರೆ. ಭಾನುವಾರ ನೂತನ ಸಂಸತ್ ಭವನವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. 20 ವಿರೋಧ ಪಕ್ಷಗಳು ಕಾರ್ಯಕ್ರಮವನ್ನು ಬಹಿಷ್ಕರಿಸಲು ನಿರ್ಧರಿಸಿದ್ದರೂ ಸಹ 25 ಪಕ್ಷಗಳು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಐತಿಹಾಸಿಕ ಸೆಂಗೋಲ್‌ಅನ್ನು ನೆಹರು ಅವರ 'ಚಿನ್ನದ ಊರುಗೋಲು' ಮಾಡಿದ್ಯಾರು? ಕಾಂಗ್ರೆಸ್‌ಗೆ ಬಿಜೆಪಿ ಪ್ರಶ್ನೆ!