ಐತಿಹಾಸಿಕ ಸೆಂಗೋಲ್‌ಅನ್ನು ನೆಹರು ಅವರ 'ಚಿನ್ನದ ಊರುಗೋಲು' ಮಾಡಿದ್ಯಾರು? ಕಾಂಗ್ರೆಸ್‌ಗೆ ಬಿಜೆಪಿ ಪ್ರಶ್ನೆ!

ಅಧಿಕಾರ ಹಸ್ತಾಂತರದ ಕಾರಣವಾಗಿ ನೆಹರು ಅವರಿಗೆ ಬ್ರಿಟಿಷರು ನೀಡಿದ್ದ ಸೆಂಗೋಲ್‌ ಇಲ್ಲಿಯವರೆಗೂ ಅಲಹಾಬಾದ್‌ನ ಅನಂದ ಭವನ ಮ್ಯೂಸಿಯಂನಲ್ಲಿ 'ನೆಹರು ಅವರಿಗೆ ಗಿಫ್ಟ್‌ ಆಗಿ ನೀಡಲಾದ ಚಿನ್ನದ ಊರುಗೋಲು' ಎನ್ನುವ ಅರ್ಥದಲ್ಲಿ ಪ್ರದರ್ಶಿತವಾಗಿತ್ತು. ಸೆಂಗೋಲ್‌ನ ಇತಿಹಾಸವನ್ನು ಸೆನ್ಸಾರ್‌ ಮಾಡಿದ್ದಕ್ಕೆ ಬಿಜೆಪಿ, ಕಾಂಗ್ರೆಸ್ ಹಾಗೂ ಎಡಪಕ್ಷಗಳ ವಿರುದ್ಧ ಕಿಡಿಕಾರಿದೆ.

Sengol Was Belittled As Nehru Golden Walking Stick Left Congress ecosystem has censored its history san

ನವದೆಹಲಿ (ಮೇ.25): ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಸೆಂಗೋಲ್‌ ಅಂದರೆ ರಾಜದಂಡವನ್ನು ಹೊಸ ಸಂಸತ್‌ ಭವನದ ಕಟ್ಟಡದ ಸ್ಪೀಕರ್‌ ಕುರ್ಚಿಯ ಬಳಿ ಇರಿಸೋದಾಗಿ ಹೇಳಿದ ಬಳಿಕವೇ, ದೇಶದ ಬಹುತೇಕರಿಗೆ ರಾಜದಂಡ ಎನ್ನುವ ವಸ್ತು ದೇಶದ ಇತಿಹಾಸದಲ್ಲಿ ಅತ್ಯಂತ ಮಹತ್ವದ ಸ್ಮರಣಿಕೆ ಎನ್ನುವುದೇ ಗೊತ್ತಿರಲಿಲ್ಲ. ಭಾರತಕ್ಕೆ ಅಧಿಕಾರ ಹಸ್ತಾಂತರ ಮಾಡುವ ನೆನಪಿನಲ್ಲಿ ಸ್ಮರಣಿಕೆಯಾಗಿದ್ದ ಸೆಂಗೋಲ್‌ ಅಥವಾ ರಾಜದಂಡ ಹಾಗಿದ್ದರೆ ಇಲ್ಲಿವರೆಗೂ ಎಲ್ಲಿತ್ತು ಎನ್ನುವ ಪ್ರಶ್ನೆ ದೇಶದ ಬಹುತೇಕ ಪ್ರಜೆಗಳನ್ನು ಕಾಡಿದ್ದು ಸುಳ್ಳಲ್ಲ. ರಾಜರ ಆಳ್ವಿಕೆಯ ಕಾಲದಿಂದಲೂ ಭಾರತದಲ್ಲಿ ಅಧಿಕಾರಿ ಹಾಗೂ ಕಾನೂನು ಆಳ್ವಿಕೆಯ ಹಸ್ತಾಂತರವನ್ನು ಸೆಂಗೋಲ್‌ ಮೂಲಕ ಮಾಡಲಾಗುತ್ತಿತ್ತು. ಚೋಳರ ಕಾಲದ ಈ ರಾಜದಂಡ ಭಾರತದ ಸ್ವಾತಂತ್ರ್ಯದ ಸಂಕೇತವಾಗಿ ಅಂದಿನ ಪ್ರಧಾನಮಂತ್ರಿ ಜವಹರಲಾಲ್‌ ನೆಹರು ಅವರಿಗೆ ನೀಡಲಾಗಿತ್ತು. ದೇಶದ ಇತಿಹಾಸದಲ್ಲಿ ಅತ್ಯಂತ ಪ್ರಾಮುಖ್ಯತೆ ಪಡೆದ ಸ್ಮರಣಿಕೆಯೊಂದಿಗೆ ಇಲ್ಲಿಯವರೆಗೂ ಅಲಹಾಬಾದ್‌ನ ಆನಂದ ಭವನದ ಮ್ಯೂಸಿಯಂನ ಗಾಜಿನೆ ಪೆಟ್ಟಿಗೆಯ ಒಳಗೆ ಲಾಕ್‌ ಆಗಿತ್ತು. ಅದರ ಕೆಳಗೆ ಬರೆದಿದ್ದ ಒಕ್ಕಣೆಯಲ್ಲಿ 'ಗೋಲ್ಡನ್‌ ವಾಕಿಂಗ್‌ ಸ್ಟಿಕ್‌ ಗಿಫ್ಟೆಡ್‌ ಟು ಪಂಡಿತ್‌ ಜವಹರಲಾಲ್‌ ನೆಹರು' ಎಂದು ಬರೆಯಲಾಗಿದೆ. ಅಂದರೆ, ಪಂಡಿತ್‌ ಜವಹರಲಾಲ್‌ ನೆಹರು ಅವರಿಗೆ ಉಡುಗೊರೆಯಾಗಿ ನೀಡಲಾದ ಚಿನ್ನದ ಊರುಗೋಲು..

ಇದರ ಬೆನ್ನಲ್ಲಿಯೇ ಕಾಂಗ್ರೆಸ್‌ ಹಾಗೂ ಎಡಪಕ್ಷಗಳ ವಿರುದ್ಧ ಬಿಜೆಪಿ ಹಾಗೂ ದೇಶದ ಇತಿಹಾಸಕಾರರು ಮುಗಿಬಿದ್ದಿದ್ದಾರೆ. ದೇಶದ ಸ್ವಾತಂತ್ರ್ಯದ ಸಂಕೇತವಾಗಿದ್ದ ಸೆಂಗೋಲ್‌, ನೆಹರು ಅವರ ಚಿನ್ನದ ವಾಕಿಂಗ್‌ ಸ್ಟಿಕ್‌ ಆಗಿ ಬದಲಾಗಿದ್ದೇಗೆ ಎನ್ನುವ ಪ್ರಶ್ನೆಗಳನ್ನು ಮಾಡಲಾರಂಭಿಸಿದ್ದಾರೆ. ಸೆಂಗೋಲ್‌ನ ಇತಿಹಾಸವನ್ನು ಅತ್ಯಂತ ಪ್ರಬುದ್ಧವಾಗಿ ಕಾಂಗ್ರೆಸ್‌ ಹಾಗೂ ಎಡಪಕ್ಷಗಳು ಹೇಗೆ ಸೆನ್ಸಾರ್‌ ಮಾಡಿದವು ಎನ್ನುವುದನ್ನು ಬಿಜೆಪಿ ಪ್ರಶ್ನೆ ಮಾಡಿದೆ.

ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮ ಈ ಕುರಿತಾಗಿ ಟ್ವೀಟ್‌ ಮಾಡಿದ್ದು, 'ಸೆಂಗೋಲ್‌ ಅನ್ನುವುದು ಭಾರತದ ಸ್ವಾತಂತ್ರ್ಯದ ಅವಿಭಾಜ್ಯ ಅಂಗವಾಗಿತ್ತು. ಇಲ್ಲಿಯವರೆಗೂ ಮ್ಯೂಸಿಯಂನಲ್ಲಿ ವಾಕಿಂಗ್‌ ಸ್ಟಿಕ್‌ ಆಗಿತ್ತು. ಇಡೀ ವ್ಯವಸ್ಥೆಯಲ್ಲಿ ಪ್ರಾಚೀನ ಭಾರತ ಮತ್ತು ಹಿಂದೂ ಆಚರಣೆಗಳನ್ನು ವೈಭವೀಕರಿಸುವ ಯಾವುದೇ ಘಟನೆಯನ್ನು ಹೇಗೆ ಸೆನ್ಸಾರ್ ಮಾಡಿದೆ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ' ಎಂದು ಬರೆದಿದ್ದಾರೆ.

ಐತಿಹಾಸಿಕ ರಾಜದಂಡವನ್ನು ಇಲ್ಲಿಯವರೆಗೂ ಇತಿಹಾಸದಿಂದ ಮರೆಮಾಚಿದ್ದಲ್ಲದೆ, ಇನ್ನೊಂದಷ್ಟು ವರ್ಷ ಜಾರಿದ್ದರೆ ಅದು ಬಹುಶಃ ನೆಹರು ಅವರ ಚಿನ್ನದ ಊರುಗೋಲಾಗಿಯೇ ಶಾಶ್ವತವಾಗಿ ಉಳಿಯುವ ಅಪಾಯವಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ಈ ವಿಚಾರ ಬಂದಾಗ ಇದರ ಪೂರ್ವಾಪರವನ್ನು ವಿಚಾರಣೆ ಮಾಡಿ ಅದನ್ನು ನೂತನ ಸಂಸತ್‌ ಭವನದಲ್ಲಿ ಇಡುವ ವ್ಯವಸ್ಥೆ ಮಾಡಿದ್ದಾರೆ.

ಇನ್ನೂ ಕೆಟ್ಟ ಸಂಗತಿ ಏನೆಂದರೆ, ಶಕ್ತಿ ಹಾಗೂ ನ್ಯಾಯವನ್ನು ಪ್ರತಿನಿಧಿಸಿದ್ದ ಪವಿತ್ರ ಚಿನ್ನ-ಬೆಳ್ಳಿಯ ಸೆಂಗೋಲ್‌ ಅನ್ನು 'ಗೋಲ್ಡನ್‌ ವಾಕಿಂಗ್‌ ಸ್ಟಿಕ್‌' ಎಂದು ಮ್ಯೂಸಿಯಂನಲ್ಲಿ ಬರೆದಿಟ್ಟಿದ್ದು, ಸ್ವತಃ ಇತಿಹಾಸಕಾರರೇ ತಲೆತಗ್ಗಿಸುವಂತೆ ಮಾಡಿದೆ.

ಹಿಂದು ಆಚರಣೆಗಳ ಬಗ್ಗೆ ಕಾಂಗ್ರೆಸ್‌ ತಿರಸ್ಕಾರ: ಸೆಂಗೋಲ್‌ನ ಮಹತ್ವವನ್ನು ಸಾರಿರುವ ಅಮಿತ್‌ ಮಾಳವಿಯಾ,  "ಭಾರತದ ಸ್ವಾತಂತ್ರ್ಯದ ಮುನ್ನಾದಿನದಂದು ಜವಾಹರಲಾಲ್ ನೆಹರು ಅವರಿಗೆ ಪವಿತ್ರ ಸೆಂಗೋಲ್ ಅನ್ನು ಹಸ್ತಾಂತರಿಸಿದ್ದು, ಬ್ರಿಟಿಷರಿಂದ ಭಾರತಕ್ಕೆ ಅಧಿಕಾರವನ್ನು ವರ್ಗಾಯಿಸಿದ ಅತ್ಯಂತ ಪ್ರಮುಖ ಕ್ಷಣ. ಆದರೆ, ಈ ಸೆಂಗೋಲ್‌ಗೆ ಅದರ ಹೆಮ್ಮೆಯ ಸ್ಥಾನವನ್ನು ನೀಡುವ ಬದಲು ಆನಂದ ಭವನದಲ್ಲಿ ಇರಿಸಲಾಗಿದ್ದು ಮಾತ್ರವಲ್ಲದೆ, ನೆಹರು ಅವರ ಚಿನ್ನದ ಊರುಗೋಲು ಎಂದು ಬರೆದು ಇಡಲಾಯಿತು. ಇದು ಕಾಂಗ್ರೆಸ್‌ ಹಿಂದು ಆಚರಣೆಗಳ ಬಗ್ಗೆ ಎಷ್ಟು ತಿರಸ್ಕಾರ ಹೊಂದಿರುವುದನ್ನು ಸೂಚಿಸುತ್ತದೆ' ಎಂದು ಬರೆದಿದ್ದಾರೆ.

Historic Sceptre Sengol: ಕಾಂಗ್ರೆಸ್‌ ಮರೆತಿದ್ದ ರಾಜದಂಡವನ್ನು ಹೊಸ ಸಂಸತ್ತಿನಲ್ಲಿ ಇಡಲಿರುವ ಪ್ರಧಾನಿ ಮೋದಿ!

1947ರಲ್ಲಿ ದೊರೆತಿದ್ದ, ದೇಶದ ಇತಿಹಾಸದ ಭಾಗವಾಗಿರುವ ಸೆಂಗೋಲ್‌ಅನ್ನು ಪ್ರಧಾನಿ ಮೋದಿ ಲೋಕಸಭೆಯಲ್ಲಿ ಪ್ರತಿಷ್ಠಾಪನೆ ಮಾಡಲಿದ್ದು, ಸ್ಪೀಕರ್‌ ಸ್ಥಾನದ ಬಳಿ ಇರಲಿದೆ ಎಂದಿದ್ದಾರೆ. ಇಡೀ ರಾಷ್ಟ್ರ ನೋಡುವಂತೆ ಇದನ್ನು ಇಡಲಾಗುತ್ತದೆ. ವಿಶೇಷ ಸಂದರ್ಭದಲ್ಲಿ ಇದನ್ನು ಹೊರತೆಗೆಯಲಾಗುತ್ತದೆ. ಈಗ ಸೆಂಗೋಲ್‌ ಹಾಗೂ ವಿರೋಧಪಕ್ಷ ಆಗುವ ಸಮಯ' ಎಂದು ಟ್ವೀಟ್‌ ಮಾಡಿದ್ದಾರೆ.

ಸಂಸತ್‌ ಭವನ ಉದ್ಘಾಟನೆಯ ಸಮಯ ಸರಿಯಿಲ್ಲ, ಪ್ಲೀಸ್‌ ಬದಲಾಯಿಸಿ ಎಂದು ಜ್ಯೋತಿಷಿಯ ಮನವಿ!

Latest Videos
Follow Us:
Download App:
  • android
  • ios