ಫಲಿತಾಂಶಕ್ಕೂ ಮೊದಲೇ ಕೇಳಿಬಂದ ಮೈತ್ರಿ ಮಾತು| ಆಪ್-ಕಾಂಗ್ರೆಸ್ ನಡುವೆ ಮೈತ್ರಿ ಸಾಧ್ಯತೆ ಎಂದ ಕೈ ನಾಯಕ| ಚುನಾವಣೋತ್ತರ ಸಮೀಕ್ಷೆಗಳೆಲ್ಲಾ ತಲೆಕೆಳಗಾಗಲಿವೆ ಎಂದ ಪಿಸಿ ಚಾಕೋ| ಫಲಿತಾಂಶದ ಆಧಾರದ ಮೇಲೆ ಆಪ್-ಕಾಂಗ್ರೆಸ್ ಮೈತ್ರಿ ಎಂದ ಪಿಸಿ ಚಾಕೋ| 'ಫಲಿತಾಂಶದ ಆಧಾರದ ಮೇಲೆ ಮೈತ್ರಿ ನಿರ್ಧಾರ ಅವಲಂಬನೆ'| ಚುನಾವಣೋತ್ತರ ಸಮೀಕ್ಷೆಗಳು ಸತ್ಯಕ್ಕೆ ದೂರ ಎಂದ ಪಿಸಿ ಚಾಕೋ|

ನವದೆಹಲಿ(ಫೆ.09): ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಎಎಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ಚುನಾವಣೋತ್ತರ ಸಮೀಕ್ಷೆಗಳ ಬೆನ್ನಲ್ಲೇ, ಕಾಂಗ್ರೆಸ್ ಹಾಗೂ ಆಪ್ ಮೈತ್ರಿ ಸಾಧ್ಯತೆಯ ಮಾತುಗಳು ಕೇಳಲಾರಂಭಿಸಿವೆ.

Add Asianetnews Kannada as a Preferred SourcegooglePreferred

ಈ ಕುರಿತು ಮಾತನಾಡಿರುವ ಹಿರಿಯ ಕಾಂಗ್ರೆಸ್ ನಾಯಕ ಪಿಸಿ ಚಾಕೋ, ಫಲಿತಾಂಶದ ಆಧಾರದ ಮೇಲೆ ಆಪ್ ಹಾಗೂ ಕಾಂಗ್ರೆಸ್ ನಡುವೆ ಮೈತ್ರಿಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. 

ಚುನಾವಣಾ ಫಲಿತಾಂಶದ ಆಧಾರದ ಕಾಂಗ್ರೆಸ್-ಆಪ್ ನಡುವಿನ ಮೈತ್ರಿ ನಿರ್ಧಾರ ಅವಲಂಬನೆಯಾಗಿದೆ ಎಂದು ಪಿಸಿ ಚಾಕೋ ಅಭಿಪ್ರಾಯಪಟ್ಟಿದ್ದಾರೆ.

Scroll to load tweet…

ಚುನಾವಣೋತ್ತರ ಸಮೀಕ್ಷಗಳು ಆಪ್ ಪರವಾಗಿದ್ದರೂ, ಫಲಿತಾಂಶ ಬಂದ ಮೇಲೆ ಮೈತ್ರಿ ಸಂಭವನೀಯತೆಯನ್ನು ತಳ್ಳಿ ಹಾಕುವುದು ಸಾಧ್ಯವಿಲ್ಲ ಎಂದು ಪಿಸಿ ಚಾಕೋ ನುಡಿದಿದ್ದಾರೆ. 

ಮುಗಿದ ದೆಹಲಿ ದಂಗಲ್: ರಾಜಧಾನಿ ಈಗ ಸಮೀಕ್ಷೆಗಳ ಜಂಗಲ್!

ಚುನಾವಣೋತ್ತರ ಸಮೀಕ್ಷೆಗಳು ಸತ್ಯಕ್ಕೆ ದೂರವಾವಗಿದ್ದು, ಕಾಂಗ್ರೆಸ್‌ಗೆ ಅಗತ್ಯ ಸ್ಥಾನಗಳು ಲಭಿಸಲಿವೆ ಎಂದು ಪಿಸಿ ಚಾಕೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಫೆಬ್ರವರಿ 9ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ