ನವದೆಹಲಿ(ಫೆ.08): ದೆಹಲಿ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮತದಾರರ ನಿರಾಸ ಪ್ರಕ್ರಿಯೆ ನಡುವೆಯೇ ರಾಜಕೀಯ ಪಕ್ಷಗಳು ಫೆ.11(ಮಂಗಳವಾರ)ರ ಚುನಾವಣಾ ಫಲಿತಾಂಶಕ್ಕಾಗಿ ಕಾತರದಿಂದ ಕಾಯುತ್ತಿವೆ.

ಸಂಜೆ ಆರು ಗಂಟೆಗೆ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೇ.54.65ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಮತದಾರರ ಈ ನಿರಸ ಪ್ರತಿಕ್ರಿಯೆ ಮೂರೂ ಪ್ರಮುಖ ಪಕ್ಷಗಳ ನಿದ್ದೆಗೆಡೆಸಿದೆ.

ಇನ್ನು ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೇ ಚುನಾವಣೋತ್ತರ ಸಮೀಕ್ಷೆಗಳ ಭರಾಟೆ ಶುರುವಾಗಿದ್ದು, ಪ್ರಮುಖ ಸುದ್ದಿವಾಹಿನಿಗಳು ಹಾಗೂ ಸಂಸ್ಥೆಗಳು ದೆಹಲಿ ಚುನಾವಣೋತ್ತರ ಸಮೀಕ್ಷೆಯನ್ನು ಪ್ರಕಟಿಸಿವೆ.

ಅದರಂತೆ ದೆಹಲಿ ವಿಧಾನಸಭೆ ಚುನಾವಣೋತ್ತರ ಸಮೀಕ್ಷೆಗಳ ಕುರಿತು ಗಮನ ಹರಿಸುವುದಾದರೆ....


1. ಟೈಮ್ಸ್ ನೌ:

ಆಪ್: 44
ಬಿಜೆಪಿ: 26
ಕಾಂಗ್ರೆಸ್: 00
ಇತರರು: 00

2. ರಿಪಬ್ಲಿಕ್:

ಆಪ್: 48-61
ಬಿಜೆಪಿ: 9-21
ಕಾಂಗ್ರೆಸ್: 0-1
ಇತರರು: 00

3. ನ್ಯೂಸ್ ಎಕ್ಸ್:

ಆಪ್: 50-56
ಬಿಜೆಪಿ: 10-14
ಕಾಂಗ್ರೆಸ್: 00
ಇತರರು: 00

4. ನ್ಯೂಸ್ ನೇಷನ್:
ಆಪ್: 67
ಬಿಜೆಪಿ: 03
ಕಾಂಗ್ರೆಸ್: 00
ಇತರರು: 00

5. ಇಂಡಿಯಾ ಟಿವಿ:

ಆಪ್: 44
ಬಿಜೆಪಿ: 26
ಕಾಂಗ್ರೆಸ್: 00
ಇತರರು: 00

6. ಭಾರತ್ ವರ್ಷ್:

ಆಪ್: 54
ಬಿಜೆಪಿ: 15
ಕಾಂಗ್ರೆಸ್: 01
ಇತರರು: 00

7. ಎಬಿಪಿ-ಸಿ ವೋಟರ್:

ಆಪ್: 49-63
ಬಿಜೆಪಿ: 05-19
ಕಾಂಗ್ರೆಸ್: 0-04
ಇತರರು: 00

8. ಎನ್‌ಡಿಟಿವಿ:

ಆಪ್: 51
ಬಿಜೆಪಿ:18
ಕಾಂಗ್ರೆಸ್: 01
ಇತರರು: 00

 

ಒಟ್ಟಿನಲ್ಲಿ ಎಲ್ಲಾ ಪ್ರಮುಖ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಮತ್ತೆ ಅಧಿಕಾರ ಪಡೆಯಲಿದೆ ಎಂದು ಅಂದಾಜಿಸಲಾಗಿದ್ದು, ಬಿಜೆಪಿ ಪ್ರಮುಖ ವಿರೋಧ ಪಕ್ಷವಾಗಿ ಹೊರ ಹೊಮ್ಮಲಿದೆ ಎಂದು ಹೇಳಲಾಗಿದೆ.

ಇನ್ನು ಕಾಂಗ್ರೆಸ್’ಗೆ ಈ ಬಾರಿಯೂ ನಿರಾಸೆ ಕಾದಿದ್ದು, ದೆಹಲಿ ಚುನಾವಣೆ ದಂಗಲ್’ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ಮಾಡಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಅಂದಾಜಿಸಿವೆ.