'ಕೈ' ಹಿಡಿಯಲಿದೆಯಂತೆ ಆಪ್: ಕಾಂಗ್ರೆಸ್ ಮೊಗಸಾಲೆಯಿಂದ ಮೈತ್ರಿ ಮಾತು!...

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಎಎಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ಚುನಾವಣೋತ್ತರ ಸಮೀಕ್ಷೆಗಳ ಬೆನ್ನಲ್ಲೇ,  ಕಾಂಗ್ರೆಸ್ ಹಾಗೂ ಆಪ್ ಮೈತ್ರಿ ಸಾಧ್ಯತೆಯ ಮಾತುಗಳು ಕೇಳಲಾರಂಭಿಸಿವೆ.

ಮೀಸಲಾತಿ ಮೂಲಭೂತ ಹಕ್ಕಲ್ಲ, ಸರ್ಕಾರದ ವಿವೇಚನೆಗೆ ಬಿಟ್ಟ ವಿಚಾರ: ಸುಪ್ರೀಂ...

ಪರಿಶಿಷ್ಟಜಾತಿ ಹಾಗೂ ಪಂಗಡಗಳಿಗೆ ಉದ್ಯೋಗ ಮತ್ತು ಬಡ್ತಿಯಲ್ಲಿ ಮೀಸಲಾತಿ ನೀಡುವುದು ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟವಿಚಾರ. ಸರ್ಕಾರಿ ಉದ್ಯೋಗದಲ್ಲಿ ಮೀಸಲು ಬೇಕೇಬೇಕು ಎಂದು ಕೇಳುವುದಕ್ಕೆ ಅದು ಯಾವುದೇ ಮೂಲಭೂತ ಹಕ್ಕು ಇಲ್ಲ. ಮೀಸಲು ನೀಡುವಂತೆ ಸರ್ಕಾರಗಳಿಗೆ ಆದೇಶಿಸುವ ಅಧಿಕಾರ ನ್ಯಾಯಾಲಯಗಳಿಗೂ ಇಲ್ಲ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ಪ್ರಕಟಿಸಿದೆ.

ಮಗನ ಮದುವೆ ಬಗ್ಗೆ ನನ್ನದೊಂದು ಕನಸಿದೆ: ಕುಮಾರಸ್ವಾಮಿ

ನಾಳೆ ನಡೆಯಲಿರುವ ಮಗನ ನಿಶ್ಚಿತಾರ್ಥದ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಎಲ್ಲಾ ಪಕ್ಷದ ಶಾಸಕರು, ನಾಯಕರು, ಪ್ರಮುಖ ಕಾರ್ಯಕರ್ತರಿಗೆ ಆಹ್ವಾನ ನೀಡಲಾಗಿದೆ. ನಾಳಿನ ಎಂಗೇಜ್‌ಮೆಂಟ್‌ಗೆ 4-5 ಸಾವಿರ ಜನ ಬರುವ ನಿರೀಕ್ಷೆ ಇದೆ ಎಂದಿದ್ದಾರೆ. 

'ಬಾಬರ್'ಗೆ ಗ್ರಾಮಸ್ಥರ ವಿರೋಧ: ಅಯೋಧ್ಯೆ ಮಸೀದಿಗೆ ಹೊಸ ಹೆಸರು?

ರಾಮ ಜನ್ಮಭೂಮಿ-ಬಾಬ್ರಿ ಪ್ರಕರಣದ ತೀರ್ಪಿನ ಅನುಸಾರ ಮುಸ್ಲಿಂ ಅರ್ಜಿದಾರರಿಗೆ ಅಯೋಧ್ಯೆಯ ಧನ್ನೀಪುರದಲ್ಲಿ ನೀಡಲಾದ 5 ಎಕರೆ ಸ್ಥಳದಲ್ಲಿ ನಿರ್ಮಾಣ ಮಾಡುವ ಮಸೀದಿಗೆ ಮೊಘಲ್‌ ದೊರೆ ಬಾಬರನ ಹೆಸರು ಇಡಬಾರದು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಬಾಬರ್‌ ಬದಲು ಅಮಾನ್‌ ಮಸೀದಿ (ಶಾಂತಿಯ ಮಸೀದಿ) ಎಂದು ನಾಮಕರಣ ಮಾಡಿ ಎಂದು ಒತ್ತಾಯಿಸಿದ್ದಾರೆ.

ವಾರಕ್ಕೆ 150 ಐ ಫೋನ್ ಕೊಳ್ಳುವ ತಾಕತ್ತು ಇರುವವನ ಬಳಿ ಮುರುಕಲು ಫೋನು..!

ಇದು ಕಲ್ಲರಳಿ ಹೂವಾದ ಕತೆ. ಬಡತನವನ್ನೇ ಬೆನ್ನಿಗೆ ಕಟ್ಟಿಕೊಂಡು ಬೆಳೆದ ಲಿವರ್‌ಪೋಲ್ ಫುಟ್ಬಾಲ್ ದಿಗ್ಗಜ ಸದಿಯೋ ಮಾನೆ ಈಗ ಮನಸ್ಸು ಮಾಡಿದರೆ ವಾರಕ್ಕೆ ನೂರೈವತ್ತು ಐಫೋನ್ ಕೊಂಡುಕೊಳ್ಳುವ ಸಾಮರ್ಥ್ಯವಿದೆ. ಆದರೆ ಈಗಲೂ ಸದಿಯೋ ಮಾನೆ ಬಳಸುತ್ತಿರುವುದು ಮುರುಕಲು ಫೋನನ್ನು. ಯಾಕೆ ಹೀಗೆ..? ಯಾರೀತ ಎನ್ನುವ ನಿಮ್ಮ ಕುತೂಹಲಕ್ಕೆ ಉತ್ತರ ಸಿಕ್ಕಿದೆ.

ದರ್ಶನ್‌ ಅಂದ್ರೆ ಇಷ್ಟ, ಅನುಷ್ಕಾ ಶೆಟ್ಟಿ ಎಂದರೆ ಮಾದರಿ; ಪ್ರಿಯಾ ಹೆಗ್ಡೆ ಹೇಗಿದ್ದಾರೆ ನೋಡಿ!

'ಜಿಲ್ಕ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಮೂಡಬಿದ್ರೆ ಮೂಲದ ಹುಡುಗಿ ಪ್ರಿಯಾ ಹೆಗ್ಡೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನೆಚ್ಚಿನ ನಟ, ನಟಿ, ರೋಲ್ ಮಾಡೆಲ್ ಸೇರಿದಂತೆ ಪ್ರಿಯಾ ಇಷ್ಟ ಕಷ್ಟದ ವಿವರ ಈ ಸ್ಟೋರಿಯಲ್ಲಿದೆ.

ಪೂನಂ ಪಾಂಡೆ 'ಪ್ರೈವಸಿ' ಗೆ ಕೈ ಹಾಕಿದ ಶಿಲ್ಪ ಶೆಟ್ಟಿ ಪತಿ : ಹೈಕೋರ್ಟ್ ಮೆಟ್ಟಿಲೇರಲು ನಟಿ ನಿರ್ಧಾರ!

ಕಾಂಟ್ರೋವರ್ಸಿ ಮಾಡೆಲ್‌ ಕಮ್ ನಟಿ ಪೂನಂ ಪಾಂಡೆ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.  ಆದರೀಗ ಸಿನಿಮಾ ಅಥವಾ ಹಾಟ್‌ ವಿಡಿಯೋ ವಿಚಾರ ಅಲ್ಲ, ಬದಲಾಗಿ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ ವಿರುದ್ಧ ದೂರಿನ ವಿಚಾರದಲ್ಲಿ. ಪೂನಂ ಕೇಸ್ ಕುರಿತ ಹೆಚ್ಚಿನ ವಿವರ ಈ ಸ್ಟೋರಿಯಲ್ಲಿದೆ.

ಡಿ. ಕೆ. ಶಿವಕುಮಾರ್‌ಗೆ ಧನ್ಯವಾದ ತಿಳಿಸಿದ ಗೋಕಾಕ ಸಾಹುಕಾರ: ಕಾರಣ?

ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಅವರಿಗೆ ಧನ್ಯವಾದಗಳನ್ನ ಹೇಳುತ್ತೇನೆ. ಅವರು ನನ್ನನ್ನ ವಿರೋಧಿಸಿದ್ದಕ್ಕೆ ನಾನು ದೊಡ್ಡ ಲೀಡರ್ ಆಗಿದ್ದೇನೆ. ಕಾಂಗ್ರೆಸ್ ನಾಯಕರು ನನ್ನನ್ನು ನಿರ್ಲಕ್ಷಿಸಿದ್ದು ಒಳ್ಳೆಯದೇ ಆಗಿದೆ. ನನ್ನ ಕನಸ್ಸಿನಲ್ಲಿಯೂ ಸಹ ನಾನು ಬಿಜೆಪಿಯಲ್ಲಿ ಸಚಿವನಾಗುತ್ತೇನೆ ಎಂದು ಉಹಿಸಿರಲಿಲ್ಲ. ಮಹೇಶ ಕುಮಟಹಳ್ಳಿ ಅಂತಹ ಜನರು ಜೊತೆಗಿದ್ರೆ ಜಗತ್ತನ್ನೇ ಗೆಲ್ಲಬಹುದು ಎಂದು ನೂತನ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ. 

11 ಕಿ.ಮೀ ರೈಡ್ ಬಳಿಕ ಹೆಲ್ಮೆಟ್ ತೆಗೆದಾಗ ಬೆಚ್ಚಿ ಬಿದ್ದ ಶಿಕ್ಷಕ; ಆಸ್ಪತ್ರೆಗೆ ದಾಖಲು!

ಮೋಟಾರು ವಾಹನ ಕಾಯ್ದೆ ತಿದ್ದುಪಡಿಯಿಂದ ಹೆಚ್ಚಿನವರು ಹೆಲ್ಮೆಟ್ ಮರಯದೆ ತೆಗೆದುಕೊಳ್ಳುತ್ತಾರೆ. ಹೀಗೆ ಸಂಸ್ಕೃತ ಶಿಕ್ಷಕ ಹೆಲ್ಮೆಟ್ ಧರಿಸಿ ಶಾಲೆಗೆ ತೆರಳಿದ್ದಾರೆ. ಸ್ಕೂಲ್‌ನಲ್ಲಿ ಬೈಕ್ ಪಾರ್ಕ್ ಮಾಡುವಾಗ ಹೆಲ್ಮೆಟ್ ತೆಗೆದಾಗ ಶಿಕ್ಷಕ ಬೆಚ್ಚಿ ಬಿದ್ದಿದ್ದಾನೆ. ಇಷ್ಟೇ ಅಲ್ಲ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ. 

ಸೇನಾ ರಹಸ್ಯಕ್ಕೆ ಕನ್ನ ಬಯಲು: ಕೇರಳ, ಉ.ಪ್ರ.ದಲ್ಲಿ ಪಾಕ್‌ ಟೆಲಿಫೋನ್‌ ಎಕ್ಸ್‌ಚೇಂಜ್‌!

ಉತ್ತರ ಪ್ರದೇಶ ಮತ್ತು ಕೇರಳದಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದ್ದ ವಿಒಐಪಿ (ವಾಯ್‌್ಸ ಓವರ್‌ ಇಂಟರ್ನೆಟ್‌ ಪ್ರೊಟೊಕಾಲ್‌) ಟೆಲಿಪೋನ್‌ ಎಕ್ಸ್‌ಚೇಂಜ್‌ ದಂಧೆಯೊಂದನ್ನು ಜಮ್ಮು- ಕಾಶ್ಮೀರ ಸೇನಾ ಗುಪ್ತಚರ ಮತ್ತು ಮುಂಬೈ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಯಲಿಗೆ ಎಳಿದಿದ್ದಾರೆ.