ಕಿತ್ನೇ ಆದ್ಮೀ ಥೇ?: ರೇಪ್‌ ಕುರಿತ ರೇಣುಕಾ ಚೌಧರಿ ಹೇಳಿಕೆಯಿಂದ ವಿವಾದ

ಸಾರ್ವಕಾಲಿಕ ಸೂಪರ್‌ಹಿಟ್‌ ಚಿತ್ರ ಶೋಲೆಯ ಖಳನಟ ಗಬ್ಬರ್‌ ಸಿಂಗ್‌ನ ಕಿತ್ನೇ ಆದ್ಮೀ ಥೇ?’ ಸಂಭಾಷಣೆಯನ್ನು ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಉಲ್ಲೇಖಿಸಿ ಕಾಂಗ್ರೆಸ್‌ ಸಂಸದೆ ರೇಣುಕಾ ಚೌಧರಿ ವಿವಾದಕ್ಕೀಡಾಗಿದ್ದಾರೆ.

Kitne aadmi the Congress leader Renuka Chowdhury kicks row

ಪಟನಾ: ಸಾರ್ವಕಾಲಿಕ ಸೂಪರ್‌ಹಿಟ್‌ ಚಿತ್ರ ‘ಶೋಲೆ’ಯ ಖಳನಟ ಗಬ್ಬರ್‌ ಸಿಂಗ್‌ನ ‘ಕಿತ್ನೇ ಆದ್ಮೀ ಥೇ?’ ಸಂಭಾಷಣೆಯನ್ನು ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಉಲ್ಲೇಖಿಸಿ ಕಾಂಗ್ರೆಸ್‌ ಸಂಸದೆ ರೇಣುಕಾ ಚೌಧರಿ ವಿವಾದಕ್ಕೀಡಾಗಿದ್ದಾರೆ. ಸಮಾರಂಭವೊಂದರಲ್ಲಿ ಅವರು ಮಾತನಾಡಿ, ‘ಇಂದು ಮಹಿಳೆಯರು ಮನೆಯಿಂದ ಹೊರಗೇ ಹೋಗಲ್ಲ. ಹುಡುಗಿ ಮನೆಯಿಂದ ಹೊರಹೋದಾಗ ಆಕೆಯ ಮೇಲೆ ಬಲಾತ್ಕಾರವಾಗುತ್ತದೆ. ಆಗ ಠಾಣೆಗೆ ದೂರು ನೀಡಲು ಹೋದಾಗ ಪೊಲೀಸರು, ‘ಕಿತ್ನೇ ಆದ್ಮೀ ಥೇ?’ (ಎಷ್ಟುಜನರು ನಿನ್ನ ಮೇಲೆ ಅತ್ಯಾಚಾರ ಮಾಡಿದರು)’ ಎಂದು ಕೇಳುತ್ತಾರೆ ಎಂದು ವ್ಯಂಗ್ಯವಾಗಿ ಹೇಳಿದರು.

ರೇಣುಕಾರ ಈ ಹೇಳಿಕೆ ಕೀಳು ಮಟ್ಟಿದಿಂದ ಕೂಡಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ. ಇತ್ತೀಚೆಗೆ ರೇಣುಕಾ ಅವರು ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ವೇಳೆ ಗಹಗಹಿಸಿ ನಕ್ಕಿದ್ದರು. ಅವರ ಈ ನಗುವನ್ನು ಶೂರ್ಪನಖಿಯ ನಗುವಿಗೆ ಹೋಲಿಸಿ ಮೋದಿ ವ್ಯಂಗ್ಯವಾಡಿದ್ದರು. ಇದು ರೇಣುಕಾಗೆ ಭಾರಿ ಮುಖಭಂಗ ಉಂಟು ಮಾಡಿತ್ತು.

Latest Videos
Follow Us:
Download App:
  • android
  • ios