ದಿಲ್ಲಿ ಮಾರ್ಕೆಟ್‌ಗೆ ರಾಹುಲ್ ಗಾಂಧಿ ಭೇಟಿ ವ್ಯಾಪಾರಸ್ಥರ ಕಷ್ಟ-ಸುಖ ಆಲಿಕೆ
ದೆಹಲಿಯ ಅಜಾದ್‌ಪುರದ ಮಂಡಿಗೆ ಭೇಟಿ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲಾರಿ ಡ್ರೈವರ್, ಮೆಕಾನಿಕಲ್‌ಗಳು ಹಾಗೂ ಕೃಷಿಕರನ್ನು ಭೇಟಿಯಾಗಿ ಸಂವಾದ ನಡೆಸಿದರು.
ನವದೆಹಲಿ: ಲಾರಿ ಡ್ರೈವರ್, ಮೆಕಾನಿಕಲ್‌ಗಳು ಹಾಗೂ ಕೃಷಿಕರನ್ನು ಭೇಟಿಯಾಗಿ ಸಂವಾದ ನಡೆಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಬೆಳ್ಳಂಬೆಳಗ್ಗೆ ದೆಹಲಿಯ ಅಜಾದ್‌ಪುರದ ಮಂಡಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ರಾಹುಲ್ ತರಕಾರಿ ಮತ್ತು ಹಣ್ಣುಗಳನ್ನು ಮಾರುತ್ತಿದ್ದ ವ್ಯಾಪಾರಸ್ಥರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಕಾಂಗ್ರೆಸ್ ತನ್ನ ಟ್ವೀಟರ್‌ನಲ್ಲಿ ಈ ಕುರಿತಾದ ಕಿರು ವಿಡಿಯೋವೊಂದನ್ನು ಹಂಚಿಕೊಂಡಿದ್ದು ರಾಹುಲ್, ಕಿಕ್ಕಿರಿದ ಮಾರುಕಟ್ಟೆಯಲ್ಲಿ ನಡೆದುಕೊಂಡು ಬರುತ್ತಿದ್ದು ಅವರ ಸುತ್ತ ಅನೇಕರು ನೆರೆದಿದ್ದು ಅವರನ್ನು ಮಾತನಾಡಿಸುತ್ತಿದ್ದಾರೆ. ಈ ವೇಳೆ ಅಲ್ಲಿದ್ದ ಜನರು ‘ಈರುಳ್ಳಿ, ಟೊಮೆಟೋ, ರಸಗೊಬ್ಬರ, ಸಿಲಿಂಡರ್, ವಿದ್ಯುತ್ ಮತ್ತು ಡಿಸೇಲ್ ಸೇರಿಂದತೆ ಹಲವು ವಸ್ತುಗಳ ಬೆಲೆ ಗಗನಕ್ಕೇರಿದೆ. 200ರು.ಗೆ ಟೊಮೆಟೋ ಖರೀದಿಸಲು ಸಾಧ್ಯವಿಲ್ಲ ಎಂದು ರಾಹುಲ್ ಬಳಿ ದೂರಿದ್ದಾರೆ.
ಸಾಮಾನ್ಯ ಜನರಂತೆ ಏರ್‌ಪೋರ್ಟ್ ಸೆಕ್ಯುರಿಟಿ ಚೆಕ್‌ನಲ್ಲಿ ನಿಂತ ರಾಹುಲ್ ಗಾಂಧಿ!
ಇತ್ತೀಚೆಗೆ ದಿಲ್ಲಿಯ ಕೆಲವು ಬೀದಿಬದಿ ವ್ಯಾಪಾರಿಗಳು ಟೊಮೆಟೋ ಬೆಲೆ ಏರಿದ್ದರೂ ಅದರ ಲಾಭ ತಮಗೇನೂ ಆಗುತ್ತಿಲ್ಲ. ಬೆಲೆ ಏರಿಕೆ ತಮ್ಮನ್ನು ಕಷ್ಟಕ್ಕೆ ದೂಡುತ್ತಿದೆ ಎಂದಿದ್ದರು.
ಕಾಂಗ್ರೆಸ್‌ಗೆ ಪ್ರಧಾನಿ ಹುದ್ದೆಯಲ್ಲಿ ಆಸಕ್ತಿ ಇಲ್ಲ, ವಿಪಕ್ಷ ಸಭೆಯಲ್ಲಿ ಕಾಂಗ್ರೆಸ್ ಸ್ಫೋಟಕ ಹೇಳಿಕೆ!