ಹೆಲ್ಮೆಟ್ ಇಲ್ಲದೆ ಬುಲೆಟ್ ಬೈಕ್‌ನಲ್ಲಿ ಕಾಂಗ್ರೆಸ್ ಲೋಕಸಭಾ ಲೀಡರ್ ಸ್ಟಂಟ್, ನೆಟ್ಟಿಗರ ಕ್ಲಾಸ್!
ಕಾಂಗ್ರೆಸ್ ಲೋಕಸಭಾ ಲೀಡರ್ ಅಧೀರ್ ರಂಜನ್ ಚೌಧರಿ ಇದೀಗ ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸಿ ವಿವಾದಕ್ಕೀಡಾಗಿದ್ದಾರೆ. ಈ ಬೈಕ್ ರೈಡ್ ವೇಳೆ ಅಧೀರ್ ರಂಜನ್ ಎರಡೂ ಕೈಗಳನ್ನು ಬಿಟ್ಟು ಬೈಡ್ ರೈಡ್ ಮಾಡಿದ್ದಾರೆ. ಇದೀಗ ಕಾಂಗ್ರೆಸ್ ನಾಯಕನ ವಿರುದ್ಧ ಟೀಕೆ ಜೋರಾಗುತ್ತಿದ್ದಂತೆ, ನಾನು ಹೋದ ರಸ್ತೆಯಲ್ಲಿ ಪೊಲೀಸರೇ ಇರಲಿಲ್ಲ ಎಂದಿದ್ದಾರೆ.
ಕೋಲ್ಕತಾ(ಅ.15) ಕಾಂಗ್ರೆಸ್ ಲೋಕಸಭಾ ನಾಯಕ ಅಧೀರ್ ರಂಜನ್ ಚೌಧರಿ ತಮ್ಮ ವಿವಾದಾತ್ಮಕ ಮಾತುಗಳಿಂದಲೇ ಹೆಚ್ಚು ಸುದ್ದಿಯಾಗಿದ್ದಾರೆ. ಇತ್ತೀಚೆಗೆ ಲೋಕಸಭೆಯಲ್ಲಿ ದುರ್ನಡತೆ ಕಾರಣದಿಂದ ಅಮಾನತ್ತಾಗಿದ್ದ ಅಧೀರ್ ರಂಜನ್ ಚೌಧರಿ ಇದೀಗ ಸಾರ್ವಜನಿಕ ರಸ್ತಯಲ್ಲಿ ನಿಯಮ ಉಲ್ಲಂಘಿಸಿ ಟೀಕೆಗೆ ಗುರಿಯಾಗಿದ್ದಾರೆ. ಇಂದು ಬೆಳಗ್ಗೆ ಪಶ್ಚಿಮ ಬಂಗಾಳದ ಬೆರಂಪೊರ್‌ನಲ್ಲಿ 11 ಕಿಲೋಮೀಟರ್ ರಾಯಲ್ ಎನ್‌ಫೀಲ್ಡ್ ಬೈಕ್ ಓಡಿಸಿದ್ದಾರೆ. ಈ ವೇಳೆ ಹೆಲ್ಮೆಟ್ ಹಾಕದೇ ಹೆದ್ದಾರಿಯಲ್ಲಿ ರೈಡ್ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.ಟೀಕ ಬೆನ್ನಲ್ಲೇ ಅಧೀರ್ ರಂಜನ್ ಚೌಧರಿ ನೀಡಿರುವ ಉತ್ತರ ಹಲವರನ್ನು ಕೆರಳಿಸಿದೆ. ನಾನು ಬೈಕ್ ರೈಡಿಂಗ್ ಮಾರ್ಗದಲ್ಲಿ ಯಾವುದೇ ಪೊಲೀಸರು ಇರಲಿಲ್ಲ ಎಂದಿದ್ದಾರೆ.
ಬೆರಂಪೋರ್ ಸಂಸದರಾಗಿರುವ ಅಧೀರ್ ರಂಜನ್ ಚೌಧರಿ ಇಂದು ಬೈಪಾಸ್ ರಸ್ತೆ ಉದ್ಘಾಟನೆ ಕಾರ್ಯಕ್ರಮಕ್ಕೆ ಬುಲೆಟ್ ಬೈಕ್‌ನಲ್ಲಿ ಆಗಮಿಸಿದ್ದಾರೆ. ಅಧೀರ್ ರಂಜನ್ ಚೌಧರಿ ಹಾಗೂ ಪಕ್ಷದ ಇತರ ಕೆಲ ನಾಯಕರು ಬೈಕ್ ಸವಾರಿ ಮೂಲಕ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಸುಮಾರು 11 ಕಿಲೋಮೀಟರ್ ಬೈಕ್ ಸವಾರಿ ಮಾಡಿದ್ದಾರೆ. ಅಧೀರ್ ರಂಜನ್ ಚೌಧರಿ ಕ್ಷೇತ್ರವಾಗಿರುವ ಕಾರಣ ಈ ಪ್ರದೇಶದಲ್ಲಿ ತಾವು ಹೆಚ್ಚಾಗಿ ಓಡಾಡಿದ್ದಾರೆ. ಹೀಗಾಗಿ ಹೆಲ್ಮೆಟ್ ಹಾಕದೇ ಸಾರ್ವಜನಿಕರಿಗೆ ದರ್ಶನ ನೀಡುತ್ತಾ ತೆರಳಿದ್ದಾರೆ.
ಅವಿಶ್ವಾಸ ಸೋತ ವಿಪಕ್ಷಕ್ಕೆ ಮತ್ತೊಂದು ಶಾಕ್, ಕಾಂಗ್ರೆಸ್ ನಾಯಕ ಅಧೀರ್‌ರಂಜನ್ ಅಮಾನತು!
ಅಧೀರ್ ರಂಜನ್ ಚೌಧರಿ ತಮ್ಮ ರಾಜಕೀಯ ಜೀವನ ಆರಂಭಿಸಿದ ಕಾಲದಲ್ಲಿ ಬೈಕ್‌ನಲ್ಲಿ ಓಡಾಡಿದ ದಿನಗಳೇ ಹೆಚ್ಚು. ಬೈಕ್ ರೈಡಿಂಗ್ ಅತೀವ ಇಷ್ಟ ಪಡುವ ಅಧೀರ್ ರಂಜನ್ ಚೌಧರಿ ಉತ್ತ ರೈಡಿಂಗ್ ಸ್ಕಿಲ್ ಕರಗತ ಮಾಡಿಕೊಂಡಿದ್ದಾರೆ. 67 ವರ್ಷದ ಅಧೀರ್ ರಂಜನ್ ಚೌಧರಿ ಇಂದು ಹೆದ್ದಾರಿ ಮೂಲಕ ಸಾಗುವಾಗ, ಉದ್ದೇಶ ಪೂರ್ವಕವಾಗಿ ಎರಡೂ ಕೈಗಳನ್ನು ಬಿಟ್ಟು ಸ್ಟಂಟ್ ಪ್ರದರ್ಶಿಸಿದ್ದಾರೆ. ಇದೇ ದಾರಿಯಲ್ಲಿ ಸಾಗುತ್ತಿದ್ದ ಇತರ ವಾಹನ ಸವಾರರು, ವಿಡಿಯೋ ಮಾಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಆರಂಭಿಸುತ್ತಿದ್ದಂತೆ ಟೀಕೆಗಳು ವ್ಯಕ್ತವಾಗಿದೆ. ಕಾಂಗ್ರೆಸ್ ಲೋಕಸಭಾ ಲೀಡರ್ ಆಗಿ ಜವಾಬ್ದಾರಿಯುತ ಸ್ಥಾನದಲ್ಲಿರುವ ತಾವು, ಹೆಲ್ಮೆಟ್ ಇಲ್ಲದೆ ರೈಡ್ ಮಾಡಿ ಯಾವ ಸಂದೇಶ ನೀಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಸ್ಟಂಟ್ ಪ್ರದರ್ಶಿಸುತ್ತಾ ದಾರಿ ತಪ್ಪಿಸುವ ಕೆಲಸ ಮಾಡುತ್ತೀದ್ದಿರಿ. ನಿಮ್ಮ ಕ್ಷೇತ್ರದಲ್ಲಿ ಜನರು ನಿಮ್ಮನ್ನು ಹಿಂಬಾಲಿಸುತ್ತಾರೆ. ಈ ಜನತೆಗೆ ಈ ರೀತಿಯ ಸಂದೇಶ, ಮಾದರಿಯನ್ನು ನೀವು ನೀಡಿದರೆ ನಿಯಮ ಯಾರಿಗೆ ಎಂದು ಹಲವರು ಪ್ರಶ್ನಿಸಿದ್ದಾರೆ.
ವಿಪಕ್ಷ ನಾಯಕರನ್ನೇ ಯಾಕೆ ಸೈಡ್‌ಲೈನ್ ಮಾಡಿದ್ದೀರಿ, ಅಧೀರ್ ಬಾಬು ಪರ ನಮ್ಮ ಅನುಕಂಪವಿದೆ: ನರೇಂದ್ರ ಮೋದಿ
ಈ ವಿಡಿಯೋ ಆಧರಿಸಿ ಪೊಲೀಸರು ಅದೀರ್ ರಂಜನ್ ಚೌಧರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹಲವರು ಆಗ್ರಹಿಸಿದ್ದಾರೆ. ಟೀಕೆ ಬೆನ್ನಲ್ಲೇ ಅದೀರ್ ರಂಜನ್ ಚೌಧರಿ ಉತ್ತರಿಸಿದ್ದಾರೆ. ಪೊಲೀಸರು ದಂಡ ಹಾಕಿದರೆ ಕಟ್ಟುತ್ತಿದ್ದೆ. ಆದರೆ ನಾನು ಸಾಗಿದ ಮಾರ್ಗದಲ್ಲಿ ಪೊಲೀಸರೇ ಇರಲಿಲ್ಲ ಎಂದು ಚೌಧರಿ ಹೇಳಿದ್ದಾರೆ.