Asianet Suvarna News Asianet Suvarna News

ಎಲ್‌ಐಸಿ, ಎಸ್‌ಬಿಐ ಮುಂದೆ ಕಾಂಗ್ರೆಸ್‌ ದೇಶವ್ಯಾಪಿ ಪ್ರತಿಭಟನೆ; ಸತತ 3ನೇ ದಿನವೂ ಸಂಸತ್‌ ಕಲಾಪ ಭಂಗ

‘ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಹಾಗೂ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ), ಅದಾನಿ ಕಂಪನಿಯಲ್ಲಿ ಬಂಡವಾಳ ತೊಡಗಿಸಿವೆ. ಎಲ್‌ಐಸಿ ಹಾಗೂ ಎಸ್‌ಬಿಐನಲ್ಲಿ ಇರುವ ಹಣ ದೇಶದ ಜನರಿಗೆ ಸೇರಿದ್ದು. ಆದರೆ ಹೂಡಿಕೆ ನೆಪದಲ್ಲಿ ಈ ಹಣವನ್ನು ಕೇಂದ್ರ ಸರ್ಕಾರವು ತನ್ನ ಆಪ್ತ ಗೆಳೆಯರಿಗೆ ನೀಡಿ ಅವರ ಉದ್ಧಾರದಲ್ಲಿ ತೊಡಗಿದೆ’ ಎಂಬದು ಕಾಂಗ್ರೆಸ್‌ ಆರೋಪ.

congress holds nationwide protest over adani hindenberg row ash
Author
First Published Feb 7, 2023, 7:45 AM IST

ನವದೆಹಲಿ (ಫೆಬ್ರವರಿ 7, 2023): ಅದಾನಿ ಸಮೂಹ ನಡೆಸಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ದೇಶದ ವಿವಿಧ ಭಾಗಗಳ ಎಲ್‌ಐಸಿ ಹಾಗೂ ಎಸ್‌ಬಿಐ ಕಚೇರಿಗಳ ಎದುರು ಕಾಂಗ್ರೆಸ್‌ ಪಕ್ಷ ಸೋಮವಾರ ಪ್ರತಿಭಟನೆ ನಡೆಸಿತು. ದಿಲ್ಲಿ, ಬೆಂಗಳೂರು, ಗುವಾಹಟಿ, ಪಣಜಿ, ಹೈದರಾಬಾದ್‌, ಮುಂಬೈ ಸೇರಿದಂತೆ ಮಹಾರಾಷ್ಟ್ರದ ವಿವಿಧ ನಗರಗಳು ಸೇರಿದಂತೆ ದೇಶದ ಅನೇಕ ಕಡೆ ಬೀದಿಗಿಳಿದ ಕಾಂಗ್ರೆಸ್ಸಿಗರು, ಅದಾನಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಅದಾನಿ ಅವರ ಪ್ರತಿಕೃತಿ ದಹಿಸಿದರು. ಕೆಲವೆಡೆ ರಸ್ತೆ ತಡೆಯನ್ನೂ ನಡೆಸಿದರು. ಪೊಲೀಸರೊಂದಿಗೆ ಕಾರ್ಯಕರ್ತರು ಜಟಾಪಟಿಗೆ ಇಳಿದ ಘಟನೆಗಳೂ ಕೆಲವು ಕಡೆ ನಡೆದವು.

‘ಭಾರತೀಯ ಜೀವ ವಿಮಾ ನಿಗಮ (Life Insurance Corporation of India) (ಎಲ್‌ಐಸಿ) (LIC) ಹಾಗೂ ಭಾರತೀಯ ಸ್ಟೇಟ್‌ ಬ್ಯಾಂಕ್‌ (State Bank of India) (ಎಸ್‌ಬಿಐ) (SBI), ಅದಾನಿ (Adani) ಕಂಪನಿಯಲ್ಲಿ ಬಂಡವಾಳ ತೊಡಗಿಸಿವೆ. ಎಲ್‌ಐಸಿ ಹಾಗೂ ಎಸ್‌ಬಿಐನಲ್ಲಿ ಇರುವ ಹಣ ದೇಶದ ಜನರಿಗೆ ಸೇರಿದ್ದು. ಆದರೆ ಹೂಡಿಕೆ ನೆಪದಲ್ಲಿ ಈ ಹಣವನ್ನು ಕೇಂದ್ರ ಸರ್ಕಾರವು ತನ್ನ ಆಪ್ತ ಗೆಳೆಯರಿಗೆ ನೀಡಿ ಅವರ ಉದ್ಧಾರದಲ್ಲಿ ತೊಡಗಿದೆ’ ಎಂಬದು ಕಾಂಗ್ರೆಸ್‌ (Congress) ಆರೋಪ.

ಇದನ್ನು ಓದಿ: ಅದಾನಿ ಪ್ರಕರಣದಲ್ಲಿ ಕೇಂದ್ರದ ಪಾತ್ರ ತನಿಖೆಯಾಗಲಿ: ಪ್ರಿಯಾಂಕ್‌ ಖರ್ಗೆ

ಅಮೆರಿಕದ ಹಿಂಡನ್‌ಬರ್ಗ್‌ (Hindenburg) ಎಂಬ ಕಂಪನಿ ಇತ್ತೀಚೆಗೆ ಅದಾನಿ ಪಾಲುದಾರಿಕೆಯಿಂದ ಹೊರಬಿದ್ದಿತ್ತು ಹಾಗೂ ಅದಾನಿ ಮೇಲೆ ಷೇರುಪೇಟೆ (Stock Market) ಅಕ್ರಮ, ತೆರಿಗೆ ವಂಚಕರ ಸ್ವರ್ಗದಲ್ಲಿ ಹಣ ಹೂಡಿಕೆ, ಅಕ್ರಮ ಹಣ ವರ್ಗಾವಣೆ ಆರೋಪ ಹೊರಿಸಿತ್ತು. ಬಳಿಕ ಅದಾನಿ ಕಂಪನಿ ಷೇರು ಮೌಲ್ಯ 10 ಲಕ್ಷ ಕೋಟಿ ರೂ.ನಷ್ಟು ಬಿದ್ದಿದೆ.

ಅದಾನಿ ಅಕ್ರಮ: ಸತತ 3ನೇ ದಿನವೂ ಸಂಸತ್‌ ಕಲಾಪ ಭಂಗ
ಉದ್ಯಮಿ ಗೌತಮ್‌ ಅದಾನಿ ಅವರ ಸಮೂಹ ನಡೆಸಿದೆ ಎನ್ನಲಾದ ಅಕ್ರಮದ ವಿರುದ್ಧ ವಿಪಕ್ಷಗಳು ಸೋಮವಾರವೂ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಪ್ರತಿಭಟನೆ ಮುಂದುವರಿಸಿದವು. ಪರಿಣಾಮ ಸತತ 3ನೇ ದಿನವಾದ ಸೋಮವಾರ ಇಡೀ ದಿನ ಕಲಾಪ ಸಾಧ್ಯವಾಗದೇ ಮಂಗಳವಾರಕ್ಕೆ ಮುಂದಕ್ಕೆ ಹೋಯಿತು.

ಇದನ್ನೂ ಓದಿ: ಅದಾನಿ ಸಮೂಹದ ಬಗ್ಗೆ ಮಾರುಕಟ್ಟೆ ನಿಯಂತ್ರಕರ ನಿಗಾ; ದೇಶದ ಇಮೇಜ್‌ಗೆ ಧಕ್ಕೆ ಇಲ್ಲ: ನಿರ್ಮಲಾ ಸೀತಾರಾಮನ್

ವಾರಾಂತ್ಯದ 2 ದಿನದ ವಿರಾಮ ಬಳಿಕ ಸದನಗಳು ಸೇರುತ್ತಿದ್ದಂತೆಯೇ ಕಾಂಗ್ರೆಸ್‌ ಹಾಗೂ ವಿಪಕ್ಷ ಸದಸ್ಯರು, ‘ಅದಾನಿ ಸರ್ಕಾರ್‌ ಶೇಮ್‌ ಶೇಮ್‌ ’ ಎಂದು ಘೋಷಣೆ ಕೂಗಿದರು ಮತ್ತು ಜಂಟಿ ಸದನ ಸಮಿತಿ ಅಥವಾ ನ್ಯಾಯಾಂಗ ತನಿಖೆಗೆ ಒತ್ತಾಯಿಸಿದವು. ಅಲ್ಲದೆ, ಚರ್ಚೆಗೆ ಪಟ್ಟು ಹಿಡಿದವು. ಸ್ಪೀಕರ್‌ ಅವರು ಶಾಂತರಾಗಿ ಎಂದು ಹೇಳಿದರೂ ವಿಪಕ್ಷ ಸದಸ್ಯರು ಪ್ರತಿಭಟನೆ ಮುಂದುವರಿಸಿದರು. ಕೊನೆಗೆ ಚರ್ಚೆಯ ಬೇಡಿಕೆ ತಿರಸ್ಕರಿಸಿದ ಸಭಾಪತಿಗಳು ಮಂಗಳವಾರಕ್ಕೆ ಕಲಾಪ ಮುಂದೂಡಿದರು.

ಇದನ್ನೂ ಓದಿ: ಮುಳುಗಿಯೇ ಬಿಡುತ್ತಾ ಅದಾನಿ ಸಾಮ್ರಾಜ್ಯ..? ಅದಾನಿ ಷೇರಿನಲ್ಲಿರೋ ಎಲ್ಐಸಿ ಹಣ ಎಷ್ಟು ಸೇಫ್?

Follow Us:
Download App:
  • android
  • ios