ಅದಾನಿ ಪ್ರಕರಣದಲ್ಲಿ ಕೇಂದ್ರದ ಪಾತ್ರ ತನಿಖೆಯಾಗಲಿ: ಪ್ರಿಯಾಂಕ್‌ ಖರ್ಗೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಬೆಂಬಲದಿಂದ ಅಸ್ವಾಭಾವಿಕವಾಗಿ ಬೆಳೆದಿದ್ದ ಅದಾನಿ ಸಾಮ್ರಾಜ್ಯ ಕುಸಿಯುತ್ತಿದ್ದಂತೆಯೇ ಅದಾನಿ ವಿರುದ್ಧದ ‘ಹಿಂಡನ್‌ಬರ್ಗ್‌’ ವರದಿಯನ್ನು ಭಾರತದ ವಿರುದ್ಧದ ವರದಿ ಎಂಬಂತೆ ಬಿಂಬಿಸಲು ಯತ್ನಿಸಿದ್ದಾರೆ.

Central Role in Adani Case Should Be Probed Says Priyank Kharge gvd

ಬೆಂಗಳೂರು (ಫೆ.05): ‘ಪ್ರಧಾನಮಂತ್ರಿ ನರೇಂದ್ರ ಮೋದಿ ಬೆಂಬಲದಿಂದ ಅಸ್ವಾಭಾವಿಕವಾಗಿ ಬೆಳೆದಿದ್ದ ಅದಾನಿ ಸಾಮ್ರಾಜ್ಯ ಕುಸಿಯುತ್ತಿದ್ದಂತೆಯೇ ಅದಾನಿ ವಿರುದ್ಧದ ‘ಹಿಂಡನ್‌ಬರ್ಗ್‌’ ವರದಿಯನ್ನು ಭಾರತದ ವಿರುದ್ಧದ ವರದಿ ಎಂಬಂತೆ ಬಿಂಬಿಸಲು ಯತ್ನಿಸಿದ್ದಾರೆ. ಕೇವಲ 8,200 ಕೋಟಿ ರು. ಆಸ್ತಿ ಹೊಂದಿದ್ದ ಅದಾನಿ ಸಮೂಹ 3 ವರ್ಷದಲ್ಲಿ 9.94 ಲಕ್ಷ ಕೋಟಿ ರು.ಗೆ ಬೆಳೆಯಲು ಕಾರಣವೇನು? ಇದರಲ್ಲಿ ಕೇಂದ್ರ ಸರ್ಕಾರದ ಪಾತ್ರವೇನು?’ ಎಂಬ ಬಗ್ಗೆ ತನಿಖೆಯಾಗಬೇಕು ಎಂದು ಕಾಂಗ್ರೆಸ್‌ ನಾಯಕರು ಆಗ್ರಹಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಹಾಗೂ ವಕ್ತಾರರಾದ ಪ್ರಿಯಾಂಕ್‌ ಖರ್ಗೆ, ‘ಕಳೆದ ಮೂರು ವರ್ಷಗಳಲ್ಲಿ ಅದಾನಿ ಅವರ ಸಮೂಹದ ಆಸ್ತಿ 8200 ಕೋಟಿಯಿಂದ 9.94 ಲಕ್ಷ ಕೋಟಿ ಆಗಲು ಕಾರಣ ಏನು? ಪ್ರಧಾನಿ, ಗೃಹ ಸಚಿವರ ಅನುಮತಿ ಇಲ್ಲದೆ ಎಲ್‌ಐಸಿಯು 36,500 ಕೋಟಿ ರು. ಸಾರ್ವಜನಿಕರ ಹೂಡಿಕೆ ಹಣ ಅದಾನಿ ಸಮೂಹದಲ್ಲಿ ಹೇಗೆ ಹೂಡಿಕೆ ಮಾಡಿತು? ಇದರಲ್ಲಿ ಕೇಂದ್ರ ಸರ್ಕಾರದ ಪಾತ್ರದ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಗೌರಿಗದ್ದೆ ಅವಧೂತ ವಿನಯ್ ಗುರೂಜಿ ಮೊರೆ ಹೋದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್

ಈ ಸಂದರ್ಭದಲ್ಲಿ ಮಾತನಾಡಿದ ಪ್ರೊ.ಬಿ.ಕೆ. ಚಂದ್ರಶೇಖರ್‌ ಮಾತನಾಡಿ, ಒಬ್ಬ ವ್ಯಕ್ತಿಯ ಸದ್ಗುಣ ಹಾಗೂ ದುರ್ಗುಣದ ಬಗ್ಗೆ ವರದಿ ಮಾಡಿದರೆ ಅದು ದೇಶದ ಮೇಲಿನ ದಾಳಿ ಎಂದು ಹೇಳುತ್ತಿದ್ದಾರೆ. ಇದು ಅತ್ಯಂತ ಹೀನಾಯ ಕೃತ್ಯ. 2013ರ ಸೆಪ್ಟೆಂಬರ್‌ ವೇಳೆಗೆ ಅದಾನಿ ಅವರ ಸಂಪತ್ತು ಅಂಬಾನಿ ಸಂಪತ್ತಿನಷ್ಟಿತ್ತು. ಮೋದಿ ಅವರು ಪ್ರಧಾನಿ ಆಗಲಿದ್ದಾರೆ ಎಂದು ಹೇಳಿದ ತಕ್ಷಣವೇ ಅದಾನಿ ಗ್ರೂಪ್‌ ಷೇರುಗಳು ಗಗನಕ್ಕೇರಿತು. 60 ಸಾವಿರ ಕೋಟಿಗೆ ಸಂಪತ್ತು ಏರಿತ್ತು. ಇದಕ್ಕೆ ಮೋದಿ ಹಾಗೂ ಅದಾನಿ ಸಂಬಂಧವೇ ಕಾರಣ. ಹೀಗಾಗಿ ಇವರನ್ನು ರಾತ್ರೋರಾತ್ರಿ ವ್ಯವಹಾರ ಮಾಡುವವರು ಎನ್ನಬಹುದು ಎಂದು ಟೀಕಿಸಿದರು.

ಸಿ.ಡಿ. ಮಾಡಿದವರು, ಮಾಡಿಸಿಕೊಂಡವರಿಗೆ ಕೇಳಿ: ಸಿ.ಡಿ. ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರಿಯಾಂಕ್‌ ಖರ್ಗೆ ಅವರು, ‘ಸಿಡಿ ಮಾಡಿದವರು, ಮಾಡಿಸಿಕೊಂಡವರಿಗೆ ಪ್ರಶ್ನೆ ಕೇಳಿ. ಬಿಜೆಪಿಯವರೇ ನೂರಾರು ಸಿಡಿ ಇದೆ ಎಂದು ಹೇಳುತ್ತಿದ್ದಾರೆ. ಹೀಗಾಗಿ ಸಿಡಿ ವಿಚಾರವಾಗಿ ಅವರನ್ನೇ ಕೇಳಬೇಕು. ಅವರ ಬಳಿ ಸಾಕ್ಷ್ಯಗಳಿದ್ದರೆ ಮೊದಲೇ ನೀಡಬೇಕಿತ್ತು. ಚುನಾವಣೆ ಬರುವವರೆಗೂ ಕಾದಿದ್ದೇಕೆ?’ ಎಂದು ಪ್ರಶ್ನಿಸಿದರು.

ಕನ್ನಡಿಗರಿಗೆ ಮೋಸ: ಇದು ಸಂಪೂರ್ಣ ಫ್ಲಾಫ್‌ ಬಜೆಟ್‌, ಬರೀ ಘೋಷಣೆಗಳ ಬಜೆಟ್‌, ಬಜೆಟ್‌ನಲ್ಲಿ ಕನ್ನಡಿಗರಿಗೆ ಮಹಾ ಮೋಸ ಆಗಿದೆ ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ಟೀಕಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರದ ಯುವಕರ ಭವಿಷ್ಯಕ್ಕೆ ಮಾರಕವಾದ ಬಜೆಟ್‌ ಇದಾಗಿದೆ. ಎರಡು ಬಾರಿ ರಾಜ್ಯದಿಂದ ಆಯ್ಕೆಯಾದ ಖುಣ ತಿರಿಸಬೇಕು ಅಂತ ನಿರ್ಮಲಾ ಸಿತಾರಾಮ ಅವರಿಗೆ ಅನ್ನಿಸಲೇ ಇಲ್ಲ ಎಂದು ಟೀಕಿಸಿದ್ದಾರೆ. ಕನ್ನಡಿಗರ ಪರವಾಗಿ ಮಾತನಾಡುವವರು ಯಾರಿದ್ದಾರೆ ಬಿಜೆಪಿ ಸರ್ಕಾರದಲ್ಲಿ? ಇನ್‌ ಕಮ್‌ ಟ್ಯಾಕ್ಸ್‌ 7 ಲಕ್ಷಕ್ಕೆ ಏರಿಕೆ ವಿಚಾರ ದೇಶದಲ್ಲಿ ಆರ್ಥಿಕ ಅಸಮಾನತೆ ಜಾಸ್ತಿಯಾಗಿದೆ. 

ಮೀಸಲಾತಿ ವಿಷಯದಲ್ಲಿ ಕಾಂಗ್ರೆಸ್‌ನಿಂದ ದಲಿತರಿಗೆ ಮೋಸ: ಸಿ.ಟಿ.ರವಿ

ಜನರ ಆದಾಯ ಕಡಿಮೆಯಾಗಿದೆ, 25 ಕೋಟಿ ಜನ ವಾಪಾಸ್‌ ಬಡತನ ರೇಖೆಗಿಂತ ಕೆಳಗಡೆ ಹೋಗಿದ್ದಾರೆ. ಇದಕ್ಕೆ ಪರಿಹಾರ ಹುಡುಕೋ ಬದಲು ಲಿಮಿಟ್‌ ಜಾಸ್ತಿ ಮಾಡಿದ್ದರಿಂದ ಪ್ರಯೋಜನವಿಲ್ಲ ಎಂದಿದ್ದಾರೆ. ಪ್ರಧಾನಿ ಮತ್ತೆ ಮತ್ತೆ ರಾಜ್ಯಕ್ಕೆ ಆಗಮಿಸುತ್ತಿರುವ ವಿಚಾರವಾಗಿ ಪ್ರಸ್ತಾಪಿಸಿದ ಅವರು ನಾವು ಆಣೆಕಟ್ಟು ಕಟ್ಟಿದ್ದೇವೆ, ಗೇಟು ತೆಗೆಯೋಕೆ ಅವರು ಬರ್ತಿದ್ದಾರೆ, ಚಾಯ್‌ ಪೇ ಚರ್ಚಾ ಎಂದು ಹೇಳುತ್ತಾರಲ್ಲಾ. ಚರ್ಚೆಗೆ ಬರಲಿ ನಾವು ಸಿದ್ದರಿದ್ದೇವೆ. ಅವರಿಗೆ ಚಹಾ ಸಹ ನಾವೇ ಕುಡಿಸುತ್ತೇವೆ. ಚರ್ಚೆಗೆ ಬರಲಿ ಎಂದು ಪ್ರಧಾನಿ ಮೊದಿ ಅವರಿಗೆ ಪ್ರಿಯಾಂಕ್‌ ಖರ್ಗೆ ಸವಾಲ್‌ ಹಾಕಿದ್ದಾರೆ.

Latest Videos
Follow Us:
Download App:
  • android
  • ios