ಕಾಂಗ್ರೆಸ್‌ಗೆ ಗಾಂಧಿ ನಾಯಕತ್ವದ ಕಂಟಕ, 24 ದೇಶಗಳಿಗೆ ಓಮಿಕ್ರಾನ್ ಆತಂಕ; ಡಿ.2ರ ಟಾಪ್ 10 ಸುದ್ದಿ!
10 ವರ್ಷದಲ್ಲಿ ಶೇ. 90ರಷ್ಟು ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿದೆ ಎಂದು ಪ್ರಶಾಂತ್ ಕಿಶೋರ್ ಕುಟುಕಿದ್ದಾರೆ. ದೆಹಲಿ ಮಾಲಿನ್ಯ ನಿಯಂತ್ರಿಸಲು ದೆಹಲಿ ಸರ್ಕಾರಕ್ಕೆ ಕೋರ್ಟ್ ವಾರ್ನಿಂಗ್ ನೀಡಿದೆ. ಪ್ರಧಾನಿ ಮೋದಿ ಚಂಡಮಾರುತ ಪರಿಸ್ಥಿತಿ ಕುರಿತು ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಮಥುರಾ ದೇಗುಲ ನಿರ್ಮಾಣಕ್ಕೆ ಯುಪಿ ಸರ್ಕಾರ ಸಿದ್ಧತೆ, ಸಿನಿ ರಂಗಕ್ಕೆ ದಿವ್ಯ ಉರುಡುಗ ಸೇರಿದಂತೆ ಡಿಸೆಂಬರ್ 2ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
Congress VS TMC: 10 ವರ್ಷದಲ್ಲಿ ಶೇ. 90ರಷ್ಟು ಚುನಾವಣೆಯಲ್ಲಿ ಸೋಲು: ಕಾಂಗ್ರೆಸ್‌ಗೆ ಪ್ರಶಾಂತ್ ಕಿಶೋರ್ ಕ್ಲಾಸ್!
ಬಿಜೆಪಿ ವಿರುದ್ಧ ಒಗ್ಗೂಡಲಾರಂಭಿಸಿರುವ ವಿರೋಧ ಪಕ್ಷಗಳಲ್ಲಿ ಒಡಕು ಮುಡುತ್ತಿರುವುದು ಕಂಡುಬರುತ್ತಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಳಿಕ ಈಗ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ನಾಯಕತ್ವವನ್ನು ಅಂದರೆ ಗಾಂಧಿ ಕುಟುಂಬದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ(Delhi Air Pollution) ವಪರೀತವಾಗುತ್ತಿದೆ. ಭಾಗಶಃ ಲಾಕ್‌ಡೌನ್, ಕಟ್ಟಡ ಕಾಮಗಾರಿ ಸ್ಥಗಿತ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡರೂ ದೆಹಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಬಂದಿಲ್ಲ. ಹಲವರಲ್ಲಿ ಆರೋಗ್ಯ(Health) ಸಮಸ್ಯೆ ಕಾಡುತ್ತಿದೆ. ಈಗಾಗಲೇ ಸುಪ್ರೀಂ ಕೋರ್ಟ್(Supreme Court) ಕೇಂದ್ರ ಹಾಗೂ ದೆಹಲಿ ಸರ್ಕಾರಕ್ಕೆ ವಾರ್ನಿಂಗ್ ನೀಡಿದೆ.
Cyclone Jawad: ಆಂಧ್ರ, ಒಡಿಶಾಗೆ ಆತಂಕ, ಎಚ್ಚೆತ್ತ ಸರ್ಕಾರ: ಪ್ರಧಾನಿ ಮೋದಿಯಿಂದ ಪರಿಶೀಲನಾ ಸಭೆ
ಆಂಧ್ರಪ್ರದೇಶ ಮತ್ತು ಒಡಿಶಾದಲ್ಲಿ ಚಂಡಮಾರುತದ ಭೀತಿ ಆವರಿಸಿದೆ. ಉತ್ತರ ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿ ಪ್ರದೇಶಗಳಲ್ಲಿ ವಾಯುಭಾರ ಕುಸಿತದಿಂದ ಜೋವಾದ್ ಚಂಡಮಾರುತವು (Cyclone Jowad) ರೂಪುಗೊಳ್ಳುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಡಿಸೆಂಬರ್ 3 ರಂದು ಚಂಡಮಾರುತದ ಪರಿಣಾಮ ಗೋಚರಿಸಲಿದೆ.
24 ದೇಶಗಳಿಗೆ ವ್ಯಾಪಿಸಿದ Omicron, ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ವಿಶ್ವ ಆರೋಗ್ಯ ಸಂಸ್ಥೆ!
ಕೊರೋನಾ ವೈರಸ್‌ನ (Coronavirus) ಹೊಸ ರೂಪಾಂತರವಾದ ಓಮಿಕ್ರಾನ್ (Omicron) ವಿಶ್ವದಲ್ಲಿ ಬಹಳ ವೇಗವಾಗಿ ಹರಡುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಹೊಸ ರೂಪಾಂತರವು ಪ್ರಪಂಚದ 24 ದೇಶಗಳಿಗೆ ಹರಡಿದೆ.
Krishna Janmabhoomi: ಅಯೋಧ್ಯೆ ಆಯ್ತು, ಇದೀಗ ಮಥುರೆ ಸಿದ್ಧತೆ: UP ಡಿಸಿಎಂ ಕೇಶವ ಪ್ರಸಾದ್ ಮೌರ್ಯ!
ಅಯೋಧ್ಯೆಯ ರಾಮಜನ್ಮಭೂಮಿ (Ayodhya Ram Temple) ಸ್ಥಳದಲ್ಲಿ ಮಂದಿರ ನಿರ್ಮಾಣ ಮಾಡುತ್ತಿರುವಂತೆ ಶ್ರೀಕೃಷ್ಣ ಜನ್ಮಸ್ಥಳವಾದ ಮಥುರೆಯಲ್ಲಿ (Krishna Janmabhoomi in Mathura) ಭವ್ಯ ದೇಗುಲ ನಿರ್ಮಾಣ ಮಾಡುವ ಸುಳಿವನ್ನು ಉತ್ತರ ಪ್ರದೇಶ ಉಪಮುಖ್ಯಮಂತ್ರಿ (Uttar Pradesh) ಕೇಶವ ಪ್ರಸಾದ್ ಮೌರ್ಯ (Keshav Prasad Maurya) ನೀಡಿದ್ದಾರೆ. ‘ಅಯೋಧ್ಯೆ ಮತ್ತು ಕಾಶಿಯಲ್ಲಿ ವೈಭವಯುತ ದೇಗುಲ ನಿರ್ಮಾಣ ಕೆಲಸ ಜಾರಿಯಲ್ಲಿದೆ; ಮಥುರಾದಲ್ಲಿ ಸಿದ್ಧತೆ ನಡೆಯುತ್ತಿದೆ’ ಎಂದು ಮೌರ್ಯ ಟ್ವೀಟ್ (Tweet) ಮಾಡಿದ್ದಾರೆ.
Omicron ಭೀತಿ: 3 ದಿನಕ್ಕೇ ಕಡಲೆಕಾಯಿ ಪರಿಷೆಗೆ ತೆರೆ
ಅದ್ಧೂರಿಯಾಗಿ ನಡೆದ ಬಸನವಗುಡಿಯ ಐತಿಹಾಸಿಕ ಕಡಲೆಕಾಯಿ(Kadalekaayi Parishe) ಪರಿಷೆಗೆ ಬುಧವಾರ ತೆರೆ ಬಿದ್ದಿದ್ದು, ಒಟ್ಟು ಸುಮಾರು 5 ಲಕ್ಷ ಮಂದಿ ಪರಿಷೆ ಕಣ್ತುಂಬಿಕೊಂಡಿದ್ದಾರೆ ಎಂದು ಬಿಬಿಎಂಪಿ(BBMP) ಅಧಿಕಾರಿಗಳು ಮಾಹಿತಿ ನೀಡಿದರು.
Divya Uruduga:ಯೋಗರಾಜ್ ಭಟ್ 'ಪದವಿ ಪೂರ್ವ' ಚಿತ್ರಕ್ಕೆ ಎಂಟ್ರಿ ಕೊಟ್ಟ ಬಿಗ್ ಬಾಸ್ ಸ್ಪರ್ಧಿ!
ರಿಯಾಲಿಟಿ ಶೋ ನಂತರ ಮೊದಲ ಸಿನಿಮಾ ಸಹಿ ಮಾಡಿದ ನಟಿ ದಿವ್ಯಾ ಉರುಡುಗ. ಮದುವೆ ಯಾವಾಗ ಎಂದು ಪ್ರಶ್ನೆ ಮಾಡಿದ ನೆಟ್ಟಿಗರು....
Book Uber Ride on WhatsApp: ಊಬರ್ ರೈಡ್ ಹೊಸ ಫೀಚರ್ : ಈಗ ವಾಟ್ಸಪ್‌ನಲ್ಲೂ ಕ್ಯಾಬ್ ಬುಕ್ಕಿಂಗ್!
ವಾಟ್ಸಪ್ ಬಳಸಿ ಊಬರ್ ಕ್ಯಾಬ್ ಬುಕ್ ಮಾಡಲು (Book an Uber Ride on WhatsAp) ಊಬರ್ ಮತ್ತು ಮೆಟಾ (Meta) ಒಡೆತನದ ವಾಟ್ಸಪ್ ಸೇರಿ ಹೊಸದೊಂದು ಫೀಚರ್ ಲಾಂಚ್ ಮಾಡುತ್ತಿವೆ. ವಾಟ್ಸಾಪ್ ಮೂಲಕ ಕ್ಯಾಬ್ ಬುಕ್ (Cab Book) ಮಾಡಲು ಬಳಕೆದಾರರಿಗೆ ಅವಕಾಶ ನೀಡುವುದಾಗಿ ಕಂಪನಿ ಘೋಷಿಸಿದೆ.
EPF Interest Credit: 21.38 ಕೋಟಿ ಇಪಿಎಫ್ ಖಾತೆಗೆ ಬಡ್ಡಿ ಜಮೆ, ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ?
ಕೇಂದ್ರ ಸರ್ಕಾರ ಇತ್ತೀಚೆಗೆ ನೌಕರರ ಭವಿಷ್ಯ ನಿಧಿ (EPF) ಖಾತೆಗೆ 2020-21ನೇ ಸಾಲಿನ ಬಡ್ಡಿ ಹಣ ಜಮೆ ಮಾಡಿದೆ. ನಿಮ್ಮ ಖಾತೆಗೆ ಬಡ್ಡಿ ಹಣ ಬಂದಿದೆಯೋ ಇಲ್ಲವೋ ಚೆಕ್ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ
Bounce Infinity E1 ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ : ಐದು ಅತ್ಯಾಕರ್ಷಕ ಬಣ್ಣಗಳಲ್ಲಿ ಲಭ್ಯ!
ಬೆಂಗಳೂರು ಮೂಲದ ಬೌನ್ಸ್ ಇನ್ಫಿನಿಟಿ (Bounce Infinity) E1 ಎಲೆಕ್ಟ್ರಿಕ್ ಸ್ಕೂಟರ್ (E1 Electric Scooter) ಅನ್ನು ಬಿಡುಗಡೆ ಮಾಡುವ ಮೂಲಕ ಎಲೆಕ್ಟ್ರಿಕ್ ಮೊಬಿಲಿಟಿ ಮಾರುಕಟ್ಟೆಗೆ ಕಾಲಿಟ್ಟಿದೆ. ಬೌನ್ಸ್ ಇನ್ಫಿನಿಟಿ E1 ಸ್ಟ್ಯಾಂಡರ್ಡ್ ಲಿಥಿಯಂ ಐಯಾನ್ ಬದಲಾಯಿಸಬಹುದಾದ ಬ್ಯಾಟರಿಯೊಂದಿಗೆ ₹ 68,999 ಬೆಲೆಯಲ್ಲಿ ಸಿಗಲಿದೆ