- Home
- Entertainment
- Sandalwood
- Divya Uruduga:ಯೋಗರಾಜ್ ಭಟ್ 'ಪದವಿ ಪೂರ್ವ' ಚಿತ್ರಕ್ಕೆ ಎಂಟ್ರಿ ಕೊಟ್ಟ ಬಿಗ್ ಬಾಸ್ ಸ್ಪರ್ಧಿ!
Divya Uruduga:ಯೋಗರಾಜ್ ಭಟ್ 'ಪದವಿ ಪೂರ್ವ' ಚಿತ್ರಕ್ಕೆ ಎಂಟ್ರಿ ಕೊಟ್ಟ ಬಿಗ್ ಬಾಸ್ ಸ್ಪರ್ಧಿ!
ರಿಯಾಲಿಟಿ ಶೋ ನಂತರ ಮೊದಲ ಸಿನಿಮಾ ಸಹಿ ಮಾಡಿದ ನಟಿ ದಿವ್ಯಾ ಉರುಡುಗ. ಮದುವೆ ಯಾವಾಗ ಎಂದು ಪ್ರಶ್ನೆ ಮಾಡಿದ ನೆಟ್ಟಿಗರು....

ಬಿಗ್ ಬಾಸ್ (Bigg boss) ಕನ್ನಡ ಸೀಸನ್ 8ರ ಮೂಲಕ ಸ್ಟ್ರಾಂಗ್ ಕಾಂಪಿಟೇಟರ್ ಆಗಿ ಕಾಣಿಸಿಕೊಂಡ ನಟಿ ದಿವ್ಯಾ ಉರುಡುಗ (Divya Uruduga) ಶೋ ನಂತರವೂ ವಿನ್ನರ್ ಅರವಿಂದ್ (KP Aravind) ಜೊತೆ ಕಾಣಿಸಿಕೊಳ್ಳುವ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ.
ಸೋಷಿಯಲ್ ಮೀಡಿಯಾದಲ್ಲಿ (Social media) ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರುವ ದಿವ್ಯಾ ಮುಂದಿನ ಪ್ರಾಜೆಕ್ಟ್ ಯಾವುದು ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಂತೆ, ಅನೌನ್ಸ್ ಮಾಡಿದ್ದಾರೆ.
ಯೋಗರಾಜ್ ಭಟ್ (Yogaraj Bhat) ನಿರ್ದೇಶನ ಮಾಡುತ್ತಿರುವ ಪದವಿ ಪೂರ್ವ (Padavi Poorva) ಚಿತ್ರದಲ್ಲಿ ದಿವ್ಯಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ.
ದಿವ್ಯಾ ಪಾತ್ರದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಆದರೆ ಬೆಂಗಳೂರು (Bengaluru) ಮತ್ತು ಮಂಗಳೂರಿನಲ್ಲಿ (Mangalore) ಚಿತ್ರೀಕರಣ ನಡೆಯಲಿದ್ದು, ಐದನೇ ಹಂತದ ಚಿತ್ರೀಕರಣವಾಗಿದೆ.
'ಹುಲಿರಾಯ' ಮತ್ತು 'ಧ್ವಜ' ಚಿತ್ರದಲ್ಲಿ ನಟಿಸಿರುವ ದವ್ಯಾ ಮೂಲತಃ ತೀರ್ಥಹಳ್ಳಿ ಹುಡುಗಿ. ಕೆಲಸಕ್ಕೆಂದು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಯೋಗರಾಜ್ ಭಟ್ ಅವರ ಯೋಗರಾಜ್ ಸಿನಿಮಾಸ್ ಮತ್ತು ರವಿ ಶಾಮನೂರ್ ಫಿಲಂಸ್ ಅವರ ಜಂಟಿ ನಿರ್ಮಾಣದಲ್ಲಿ ಪದವಿ ಪೂರ್ವ ಸಿನಿಮಾ ತಯಾರಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.