'ಅತೀಕ್‌ ಅಹ್ಮದ್‌ ಹುತಾತ್ಮ, ಆತನಿಗೆ ಭಾರತ ರತ್ನ ನೀಡ್ಬೇಕು..' ಎಂದ ಕಾಂಗ್ರೆಸ್‌ ಅಭ್ಯರ್ಥಿ!

ಉತ್ತರಪ್ರದೇಶ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿರುವ ಕಾಂಗ್ರೆಸ್‌ ಅಭ್ಯರ್ಥಿ ರಾಜ್‌ಕುಮಾರ್‌ ಸಿಂಗ್‌ ಅಲಿಯಾಸ್‌ ರಾಜ್ಜು ಭಯ್ಯಾ, ಕೇಂದ್ರ ಸರ್ಕಾರ ಅತೀಕ್‌ ಅಹ್ಮದ್‌ಗೆ ಭಾರತ ರತ್ನ ನೀಡಬೇಕು ಹಾಗೂ ಯೋಗಿ ಆದಿತ್ಯನಾಥ್‌ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
 

Congress Candidate Demands Bharat Ratna for Atiq Ahmed UP Municipal Election 2023  san

ಲಕ್ನೋ (ಏ.19): ಮುಂಬರುವ ಉತ್ತರ ಪ್ರದೇಶ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ರಾಜ್‌ಕುಮಾರ್‌ ಸಿಂಗ್ ಅಲಿಯಾಸ್‌ ರಾಜ್ಜು ಭಯ್ಯಾ, ಅತೀಕ್‌ ಅಹ್ಮದ್‌ ಹುತಾತ್ಮ ಆತನಿಗೆ ಕೇಂದ್ರ ಸರ್ಕಾರ ಭಾರತ ರತ್ನ ನೀಡಬೇಕು ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಗ್ಯಾಂಗಸ್ಟರ್‌-ರಾಜಕಾರಣಿಯಾಗಿದ್ದ ಅತೀಕ್‌ ಅಹ್ಮದ್‌ ಹಾಗೂ ಆತನ ಸಹೋದರ ಅಶ್ರಫ್‌ನನ್ನು ಇತ್ತೀಚೆಗೆ ಮೂರು ಮಂದಿ ಹಂತಕರು ಪೊಲೀಸ್‌ ಭದ್ರತೆಯಲ್ಲಿರುವಾಗಲೇ ಶೂಟ್‌ ಮಾಡಿ ಕೊಂಡಿದ್ದರು. 'ಅತೀಕ್‌ ಅಹ್ಮದ್‌ ಈಗ ಹುತಾತ್ಮರಾಗಿದ್ದಾರೆ. ಅವರ ಶವದ ಮೇಲೆ ತ್ರಿವರ್ಣ ಧ್ವಜ ಹಾಕಿ ಗೌರವ ನೀಡಬೇಕಿತ್ತು' ಎಂದು ಹೇಳಿದ್ದಾರೆ. ಅತೀಕ್ ಅಹ್ಮದ್ ಹತ್ಯೆಗೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಸರಕಾರವೇ ಕಾರಣ ಎಂದು ರಜ್ಜು ಭಯ್ಯಾ ಆರೋಪಿಸಿದ್ದಾರೆ. ಸಿಎಂ ಯೋಗಿ ಆದಿತ್ಯನಾಥ್ ರಾಜೀನಾಮೆಗೆ ಕಾಂಗ್ರೆಸ್ ಅಭ್ಯರ್ಥಿ ಆಗ್ರಹಿಸಿದ್ದಾರೆ. ಇನ್ನು ರಾಜ್‌ಕುಮಾರ್‌ ಸಿಂಗ್‌ ನೀಡಿದ ಹೇಳಿಕೆ ವಿವಾದ ಸೃಷ್ಟಿಸಿದ ಬೆನ್ನಲ್ಲಿಯೇ, ಕಾಂಗ್ರೆಸ್‌ ಪಕ್ಷ ಆತನನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ ಮಾಡಿದೆ ಎಂದು ಪ್ರಯಾಗ್‌ರಾಜ್‌ ಕಾಂಗ್ರೆಸ್‌ ಅಧ್ಯಕ್ಷ ಕುಮಾರ್‌ ಮಿಶ್ರಾ ಹೇಳಿದ್ದಾರೆ.

ಇಂತಹ ಹೇಳಿಕೆ ನೀಡುವವರ ವಿರುದ್ಧ ನಾವು ಸಂಪೂರ್ಣ ವಿರುದ್ಧವಾಗಿದ್ದೇನೆ.  ಅವರ ಮಾನಸಿಕ ಸ್ಥಿತಿ ಸರಿಯಿಲ್ಲ ಎಂದು ತಿಳಿದು ಬಂದಿದೆ. ಅಲ್ಲದೆ, ಅವರನ್ನು ಬಿಜೆಪಿಯ ಆದೇಶದ ಮೇರೆಗೆ ಕಳುಹಿಸಲಾಗಿದೆ ಎಂದು ನಾವು ಭಾವಿಸುತ್ತೇವೆ ಮತ್ತು ಅವರ (ಬಿಜೆಪಿ) ನಿರ್ದೇಶನದ ಮೇರೆಗೆ ಅವರು (ರಾಜ್‌ಕುಮಾರ್ ಸಿಂಗ್) ಈ ಹೇಳಿಕೆ ನೀಡಿದ್ದಾರೆ ಎಂದು ತಮ್ಮ ಅಭ್ಯರ್ಥಿ ನೀಡಿದ್ದ ಹೇಳಿಕೆಯನ್ನು ಬಿಜೆಪಿ ತಲೆಗೆ ಕಟ್ಟುವ ಪ್ರಯತ್ನ ಮಾಡಿದ್ದಾರೆ.

ಇದನ್ನೂ ಓದಿ: 'ಸಿಟಿಆರ್‌ ಮಸಾಲೆ ದೋಸೆ, ಬೆಂಗಳೂರು ಆಟೋ, ಅಣ್ಣಾವ್ರ ಹಾಡು..' ಮಿ.360 ಎಬಿಡಿ ಕನ್ನಡ ಪ್ರೇಮ!

ನಗರಸಭೆಯ ವಾರ್ಡ್ ನಂ.43 ದಕ್ಷಿಣ ಮಲಕಾದಿಂದ ಈ ಬಾರಿ ರಾಜ್‌ಕುಮಾರ್‌ ಸಿಂಗ್‌ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದರು. ರಾಜ್‌ಕುಮಾರ್ ಸಿಂಗ್ ಕಾಂಗ್ರೆಸ್‌ನ ಹಳೆಯ ನಾಯಕ. ಅವರು ಹಿಂದೆಯೂ ಕೌನ್ಸಿಲರ್ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಇನ್ನು ಕಾಂಗ್ರೆಸ್ ಅಭ್ಯರ್ಥಿ ರಾಜ್‌ಕುಮಾರ್‌ ಸಿಂಗ್‌ ಅವರ ವಿವಾದಾತ್ಮಕ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಪೊಲೀಸರು ಕಾಂಗ್ರೆಸ್ ಅಭ್ಯರ್ಥಿಯನ್ನು ಬಂಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯನ್ನು ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಬಂಧನದಲ್ಲಿ ಇರಿಸಲಾಗಿದೆ.

ಇದನ್ನೂ ಓದಿ: 'ಬೇರೆ ಫ್ರಾಂಚೈಸಿಗೆ ಸೇರುವ ಮನಸ್ಸು ಮಾಡಿದ್ದೆ...' ಆರ್‌ಸಿಬಿ ಕುರಿತು ಕೊಹ್ಲಿ ಬಾಂಬ್‌!

ಉತ್ತರ ಪ್ರದೇಶದಲ್ಲಿ ನೂರಾರು ಕ್ರಿಮಿನಲ್‌ ಕೇಸ್‌ಗಲ್ಲಿ ಭಾಗಿಯಾಗಿದ್ದ ಅತೀಕ್‌ ಅಹ್ಮದ್‌ನನ್ನು ಇತ್ತೀಚೆಗೆ ಉಮೇಶ್‌ ಪಾಲ್‌ ಕೊಲೆ ಕೇಸ್‌ನಲ್ಲಿ ದೋಷಿ ಎಂದು ಘೋಷಿಸಿ ಕೋರ್ಟ್‌ ತೀರ್ಪು ನೀಡಿತ್ತು. ಇತ್ತೀಚೆಗೆ ಪ್ರಯಾಗ್‌ರಾಜ್‌ನ ಆಸ್ಪತ್ರೆಗೆ ಆತನನ್ನು ಹೆಲ್ತ್‌ ಚೆಕ್‌ಅಪ್‌ಗೆ ಕರೆತರುವ ವೇಳೆ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಇದು ರಾಷ್ಟ್ರೀಯ ಮಾಧ್ಯಮಗಳಲ್ಲೂ ದೊಡ್ಡ ಸುದ್ದಿಯಾಗಿತ್ತು. ಅತೀಕ್‌ ಜೊತೆ ಆತನ ಸಹೋದರ ಅಶ್ರಫ್‌ ಅವರಿಗೂ ಗುಂಡಿಕ್ಕಲಾಗಿತ್ತು. ಅತೀಕ್ ಅಹ್ಮದ್ ಹತ್ಯೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಈವರೆಗೂ ಮೂವರನ್ನು ಬಂಧಿಸಿದ್ದಾರೆ.

 

Latest Videos
Follow Us:
Download App:
  • android
  • ios