ಸಾವರ್ಕರ್-ಗೋಡ್ಸೆ ಮಧ್ಯೆ ದೈಹಿಕ ಸಂಬಂಧ ಇತ್ತಂತೆ| ಕಾಂಗ್ರೆಸ್ ಹೊರತಂದ ಕೈಪಿಡಿಯಲ್ಲಿ ಅಶ್ಲೀಲ ಆರೋಪ| ವಿವಾದದ ಕಿಡಿ ಹೊತ್ತಿಸಿದ ಮಧ್ಯಪ್ರದೇಶ ಕಾಂಗ್ರೆಸ್ ವಿಡಿಯೋ| ‘ಹೌ ಬ್ರೇವ್ ವಾಸ್ ವೀರ್ ಸಾವರ್ಕರ್’ ಎಂಬ ಕಾಂಗ್ರೆಸ್ ಕೈಪಿಡಿ| ‘ಫ್ರೀಡಂ ಆ್ಯಟ್ ಮಿಡ್ ನೈಟ್’ ಪುಸ್ತಕ ಆಧರಿಸಿ ಕಾಂಗ್ರೆಸ್ ಕೈಪಿಡಿ| ಅಲ್ಪಸಂಖ್ಯಾತ ಮಹಿಳೆಯರ ಮೇಲೆ ಅತ್ಯಾಚಾರ ಮಾಡುವಂತೆ ಸಾರ್ವಕರ್ ಪ್ರರೇಪಸಿತ್ತಿದ್ದರಂತೆ| ಕಾಂಗ್ರೆಸ್ ಕೈಪಿಡಿ ಕುರಿತು ಎಲ್ಲೆಡೆ ಭಾರೀ ವಿರೋಧ|

ಭೋಪಾಲ್(ಜ.03): ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಹಾಗೂ ಮಹಾತ್ಮಾ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಮಧ್ಯೆ ದೈಹಿಕ ಸಂಬಂಧ ಇತ್ತೆಂಬ ಕಾಂಗ್ರೆಸ್ ಕೈಪಿಡಿ ಇದೀಗ ತೀವ್ರ ವಿವಾದ ಸೃಷ್ಟಿಸಿದೆ.

ಈ ಕುರಿತು ಮಧ್ಯಪ್ರದೇಶ ಕಾಂಗ್ರೆಸ್ ‘ಹೌ ಬ್ರೇವ್ ವಾಸ್ ವೀರ್ ಸಾವರ್ಕರ್’ ಎಂಬ ಕೈಪಿಡಿಯೊಂದನ್ನು ಹೊರತಂದಿದ್ದು, ಸಾವರ್ಕರ್ ಹಾಗೂ ಗೋಡ್ಸೆ ಮಧ್ಯೆ ದೈಹಿಕ ಸಂಬಂಧ ಇತ್ತೆಂದು ಹೇಳಲಾಗಿದೆ.

ಸಾವರ್ಕರ್‌ ‘ಕ್ರಾಂತಿಕಾರಿ’ ಪಟ್ಟತೆಗೆದು ಹೇಡಿ ಪಟ್ಟ!

 ಈ ಕೈಪಿಡಿಯನ್ನು ಅಖಿಲ ಭಾರತ ಕಾಂಗ್ರೆಸ್ ಸೇವಾದಳ ತರಬೇತಿ ಶಿಬಿರದಲ್ಲಿ ಹಂಚಲಾಗಿದ್ದು, ಪುಸ್ತಕದಲ್ಲಿ ಸಾವರ್ಕರ್ ಹಾಗೂ ಗೋಡ್ಸೆ ಬಗ್ಗೆ ಅಶ್ಲೀಲವಾಗಿ ಉಲ್ಲೇಖ ಮಾಡಲಾಗಿದೆ. 

‘ಫ್ರೀಡಂ ಆ್ಯಟ್ ಮಿಡ್ ನೈಟ್’ ಎಂಬ ಪುಸ್ತಕದಲ್ಲಿ ಉಲ್ಲೇಖಿಸಿರುವ ಘಟನೆಯೊಂದನ್ನು ಆಧರಿಸಿ ಕೈಪಿಡಿಯನ್ನು ಹೊರತರಲಾಗಿದೆ ಎಂದು ಕಾಂಗ್ರೆಸ್ ಸಮರ್ಥನೆ ನೀಡಿದೆ.

ತಿವಾರಿ ಟು ಒವೈಸಿ: ಸಾವರ್ಕರ್ ‘ಭಾರತ’ ವಿರೋಧಿಸುವ ‘ರತ್ನ’ಗಳು! 

ಬ್ರಹ್ಮಚರ್ಯೆಯನ್ನು ಸ್ವೀಕರಿಸುವುದಕ್ಕೂ ಮುನ್ನ ಗೋಡ್ಸೆ ದೈಹಿಕ ಸಂಬಂಧದ ಬಗ್ಗೆ ಈ ಪುಸ್ತಕದಲ್ಲಿ ಉಲ್ಲೇಖವಿದೆ ಎನ್ನಲಾಗಿದೆ. ಅಲ್ಲದೇ ಅಲ್ಪಸಂಖ್ಯಾತ ಮಹಿಳೆಯನ್ನು ಅತ್ಯಾಚಾರ ಮಾಡುವಂತೆ ಸಾವರ್ಕರ್ ಪ್ರೇರೇಪಿಸುತ್ತಿದ್ದರು ಎಂದೂ ಕೈಪಿಡಿಯಲ್ಲಿ ಗಂಭೀರ ಆರೋಪ ಮಾಡಲಾಗಿದೆ.

Scroll to load tweet…

ಕಾಂಗ್ರೆಸ್ ಕೈಪಿಡಿಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಹಿಂದೂ ಮಹಾಸಭಾ, ಇದು ಸಾವರ್ಕರ್ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಹುನ್ನಾರ ಎಂದು ಹರಿಹಾಯ್ದಿದೆ.

ಜನವರಿ 3ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ