Asianet Suvarna News Asianet Suvarna News

ಭಾರತೀಯರನ್ನು ಕೊರೋನಾದಿಂದ ಕಾಪಾಡಿದ್ದು ನೆಗಡಿ ಸಮಸ್ಯೆ!

ಭಾರತೀಯರನ್ನು ಕೊರೋನಾದಿಂದ ಕಾಪಾಡಿದ್ದು ನೆಗಡಿ ಸಮಸ್ಯೆ| ಭಾರತೀಯರ ರಕ್ತದಲ್ಲಿರುವ ‘ಟಿ ಕೋಶ’ ಇದಕ್ಕೆ ಕಾರಣ| ಇವು ಸಾಮಾನ್ಯ ನೆಗಡಿಯಿಂದ ರಕ್ಷಣೆ ನೀಡುವ ಸೆಲ್‌ಗಳು

Common Cold Protected People From Covid 19 In india Says study pod
Author
Bangalore, First Published Mar 26, 2021, 8:56 AM IST

ನವದೆಹಲಿ(ಮಾ.26): ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಕೊರೋನಾ ವೈರಸ್‌ನಿಂದ ಭಾರಿ ಪ್ರಮಾಣದಲ್ಲಿ ಸಾವು ಸಂಭವಿಸುತ್ತಿದ್ದು, ಅಲ್ಲಿಗೆ ಹೋಲಿಸಿದರೆ ಭಾರತದಲ್ಲಿ ಸಂಭವಿಸುತ್ತಿರುವ ಸಾವಿನ ಪ್ರಮಾಣ ಏಕೆ ಕಡಿಮೆಯಿದೆ ಎಂಬುದಕ್ಕೆ ವಿಜ್ಞಾನಿಗಳು ಕೊನೆಗೂ ಕಾರಣ ಪತ್ತೆಹಚ್ಚಿದ್ದಾರೆ. ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಮ್ಯುನಾಲಜಿ ಹಾಗೂ ಏಮ್ಸ್‌ ಆಸ್ಪತ್ರೆಯ ತಜ್ಞರು ನಡೆಸಿದ ಅಧ್ಯಯನದ ಪ್ರಕಾರ ಹೆಚ್ಚಿನ ಭಾರತೀಯರ ರಕ್ತದಲ್ಲಿರುವ ‘ಸಿಡಿ4 ಟಿ ಸೆಲ್ಸ್‌’ ಇದಕ್ಕೆ ಕಾರಣ ಎಂಬುದು ತಿಳಿದುಬಂದಿದೆ.

ರೋಗನಿರೋಧಕ ಶಕ್ತಿ ಹೆಚ್ಚಿಸೋ ದೊಡ್ಡಪತ್ರೆ ಎಲೆಯ ಖಾದ್ಯಗಳು

ಪಾಶ್ಚಾತ್ಯರಿಗಿಂತ ಹೆಚ್ಚಾಗಿ ಭಾರತೀಯರು ಮೊದಲೇ ಬೇರೆ ಬೇರೆ ರೀತಿಯ ಕೊರೋನಾವೈರಸ್‌ಗಳಿಗೆ ತುತ್ತಾಗಿರುತ್ತಾರೆ. ಅದರಿಂದ ನೆಗಡಿಯಂತಹ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಹೀಗಾಗಿ ಅವರಲ್ಲಿ ಟಿ ಸೆಲ್ಸ್‌ ಅಭಿವೃದ್ಧಿಯಾಗಿರುತ್ತವೆ. ಈ ಕೋಶಗಳು ಬೇರೆ ಬೇರೆ ರೀತಿಯ ಕೊರೋನಾ ವೈರಸ್‌ಗಳ ವಿರುದ್ಧ ತಕ್ಕಮಟ್ಟಿಗಿನ ರೋಗನಿರೋಧಕ ಶಕ್ತಿಯನ್ನು ಒದಗಿಸುತ್ತವೆ.

ತರಕಾರಿ ಹಣ್ಣು ತಿನ್ನಿ, ವಾಕ್ ಮಾಡಿ ಅನ್ನೋದೆಲ್ಲ ಹಳೇದಾಯ್ತು, ಹೊಸದೇನಿದೆ?

ಸಾರ್ಸ್‌-ಕೋವ್‌-2 ಕೊರೋನಾ ವೈರಸ್‌ನ ಸ್ಪೈಕ್‌ ಪ್ರೋಟೀನ್‌ಗಳಿಂದ ಇವು ಸಂಪೂರ್ಣ ರಕ್ಷಣೆ ನೀಡದಿದ್ದರೂ ಈ ವೈರಸ್‌ನಿಂದ ಉಂಟಾಗುವ ಹಾನಿಯ ತೀವ್ರತೆಯನ್ನು ಕಡಿಮೆ ಮಾಡುತ್ತವೆ. ಹೀಗಾಗಿ ಕೋವಿಡ್‌-19 ಪೀಡಿತ ಭಾರತೀಯರಲ್ಲಿ ಸಾವಿನ ಪ್ರಮಾಣ ಕಡಿಮೆ ಎಂದು ಅಧ್ಯಯನಕಾರರು ‘ಫ್ರಂಟಿಯರ್‌ ಇನ್‌ ಇಮ್ಯುನಾಲಜಿ’ ನಿಯತಕಾಲಿಕೆಯಲ್ಲಿ ಲೇಖನ ಪ್ರಕಟಿಸಿದ್ದಾರೆ.

ಭಾರತದಲ್ಲಿ ಕೊರೋನಾದಿಂದ ಸಂಭವಿಸುವ ಸಾವಿನ ಪ್ರಮಾಣ ಶೇ.1.5 ಇದ್ದರೆ, ಅಮೆರಿಕದಲ್ಲಿ ಶೇ.3ಕ್ಕಿಂತ ಹೆಚ್ಚಿದೆ. ಮೆಕ್ಸಿಕೋದಲ್ಲಿ ಶೇ.10ಕ್ಕಿಂತ ಹೆಚ್ಚಿದೆ.

Follow Us:
Download App:
  • android
  • ios