Asianet Suvarna News Asianet Suvarna News

ಶಿಕ್ಷಕರಿಗೆ ವಿಶೇಷ ರೀತಿಯಲ್ಲಿ ಅಭಿನಂದನೆ ತಿಳಿಸಿದ ಪ್ರಧಾನಿ ಮೋದಿ

* ಶಿಕ್ಷಕರ ದಿನಾಚರಣೆ ನಿಮಿತ್ತ ಪ್ರಧಾನಿ ಅಭಿನಂದನೆ
* ಕೊರೋನಾ ಸಂದರ್ಭ ಶಿಕ್ಷಣ ನೀಡಿದ ಶಿಕ್ಷಕರ ಸಾಧನೆ ಕೊಂಡಾಡಿದ ಮೋದಿ
*  ಡಾ.ಸರ್ವಪಲ್ಲಿ ರಾಧಾಕೃಷ್ಣನ್  ಅವರ ಕೊಡುಗೆ ಸ್ಮರಣೆ
* ಯುವ ಸಮುದಾಯಕ್ಕೆ ನಿಮ್ಮೆಲ್ಲರ ಮಾರ್ಗದರ್ಶನ ಅಗತ್ಯ

Commendable How Teachers Ensured Education Of Students During Covid PM Modi mah
Author
Bengaluru, First Published Sep 5, 2021, 9:43 PM IST

ನವದೆಹಲಿ (ಸೆ. 05)  ಮಾಜಿ ರಾಷ್ಟ್ರಪತಿ ಭಾರತರತ್ನ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮಜಯಂತಿ, ಶಿಕ್ಷಕರ ದಿನಾಚರಣೆ ದಿನ ಪ್ರಧಾಣಿ ನರೇಂದ್ರ ಮೋದಿ ಶಿಕ್ಷಕರ ಕೊಡುಗೆಯನ್ನು ಶ್ಲಾಘಿಸಿ ಅಭಿನಂದಿಸಿದ್ದಾರೆ.

ಶಿಕ್ಷಕ ವೃಂದಕ್ಕೆ ಶುಭಾಶಯ ಹೇಳಿರುವ ಪ್ರಧಾನಿ, ಕೋವಿಡ್-19 ಕಷ್ಟದ ಸಮಯದಲ್ಲಿ ಮಕ್ಕಳು ಶಿಕ್ಷಣ ವಂಚಿತರಾಗದಂತೆ ನೋಡಿಕೊಂಡು ಅವರಿಗೆಲ್ಲ ತಮ್ಮ ಕೈಲಾದ ರೀತಿಯಲ್ಲಿ ಶಿಕ್ಷಣ ನೀಡಿದ ಎಲ್ಲರಿಗೂ ಧನ್ಯವಾದ ಎಂದಿದ್ದಾರೆ.

ಪದಕ ಗೆದ್ದವರನ್ನು ಬಣ್ಣಿಸಿದ ಮೋದಿ

ಶಿಕ್ಷಕರ ದಿನದ ಪ್ರಯುಕ್ತ ಇಡೀ ಶಿಕ್ಷಕ ಸಮುದಾಯಕ್ಕೆ ನನ್ನ ಪ್ರಣಾಮಗಳು, ಯುವ ಮನಸ್ಸುಗಳನ್ನು ಬೆಳೆಸಿ ಪೋಷಿಸುವಲ್ಲಿ ಶಿಕ್ಷಕರದ್ದೇ ಪ್ರಮುಖ ಪಾತ್ರ. ಕೋವಿಡ್-19 ಸಂಕಷ್ಟ ಕಾಲದಲ್ಲಿ ಆನ್ ಲೈನ್ ನಲ್ಲಿ ಮತ್ತು ಇತರ ಮಾರ್ಗಗಳ ಮೂಲಕ ಮಕ್ಕಳಿಗೆ ಶಿಕ್ಷಣವನ್ನು ನೀಡಿದ ನಿಮಗೆಲ್ಲ ನನ್ನಿಂದ  ಅಭಿನಂದನೆ ಎಂದಿ ಟ್ವಿಟರ್ ಮೂಲಕ ತಿಳಿಸಿದ್ದಾರೆ.

 ಡಾ.ಸರ್ವಪಲ್ಲಿ ರಾಧಾಕೃಷ್ಣನ್  ಅವರ ಕೊಡುಗೆಯನ್ನು ಈ ಸಂದರ್ಭದಲ್ಲಿ ಸ್ಮರಿಸಬೇಕು. ಅವರ ಮಾರ್ಗದರ್ಶನ ಸೂತ್ರಗಳು ಎಂದಿಗೂ ಮಾದರಿ ಎಂದು ತಿಳಿಸಿದ್ದಾರೆ. 

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕೂಡ ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಕ ಸಮುದಾಯಕ್ಕೆ ಶುಭ ಕೋರಿದ್ದಾರೆ.  ದೇಶದ ಯುವಕರಿಗೆ ನಿಮ್ಮ ಮಾರ್ಗದರ್ಶನ ಅಗತ್ಯ ಎಂದು ಸಂದೇಶ ನೀಡಿದ್ದಾರೆ.

Follow Us:
Download App:
  • android
  • ios