ಭಾರತದ ಪದಕ ಸಾಧನೆ ಕೊಂಡಾಡಿದ ಮೋದಿ ಟೋಕಿಯೋ ಕ್ರೀಡಾಕೂಟದಲ್ಲಿ ಭಾರತ ದಾಖಲೆ ಪದಕ ಟ್ವೀಟ್ ಮೂಲಕ ಕ್ರೀಡಾಪಟುಗಳು ಹಾಗೂ ಜಪಾನ್‌ಗೆ ಅಭಿನಂದನೆ  

ನವದೆಹಲಿ(ನ.05): ಭಾರತದ ಕ್ರೀಡಾ ಇತಿಹಾಸದಲ್ಲಿ ಟೋಕಿಯೋ ಪ್ಯಾರಾಲಿಂಪಿಕ್ಸ್ ಗೆ ಸದಾ ವಿಶೇಷ ಸ್ಥಾನ ಇರುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ. ನಮ್ಮ ತಂಡದಲ್ಲಿದ್ದ ಎಲ್ಲ ಸದಸ್ಯರೂ ಚಾಂಪಿಯನ್ನರಷ್ಟೇ ಅಲ್ಲ, ಸ್ಫೂರ್ತಿಯ ಸೆಲೆಯಾಗಿದ್ದರು ಎಂದು ಮೋದಿ ಹೇಳಿದ್ದಾರೆ.

Scroll to load tweet…

ತರಬೇತುದಾರರು, ಸಹಾಯಕ ಸಿಬ್ಬಂದಿ ಮತ್ತು ಕುಟುಂಬದವರು ಕ್ರೀಡಾಪಟುಗಳಿಗೆ ನಿರಂತರವಾಗಿ ಬೆಂಬಲ ನೀಡುತ್ತಿರುವುದಕ್ಕೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು. ಜಪಾನ್‌ ನ ಅದರಲ್ಲೂ ವಿಶೇಷವಾಗಿ ಟೋಕಿಯೊ ಜನತೆಗೆ ಮತ್ತು ಜಪಾನಿನ ಸರ್ಕಾರಕ್ಕೆ ಅವರ ಅಸಾಧಾರಣ ಆತಿಥ್ಯ, ಈ ಒಲಿಂಪಿಕ್ ಮೂಲಕ ಅತ್ಯಂತ ಅಗತ್ಯವಾಗಿದ್ದ ಸಂಯಮ ಮತ್ತು ಒಮ್ಮತದ ಸಂದೇಶವನ್ನು ಸಾರಿದ್ದಕ್ಕಾಗಿ ಮೋದಿ ಅಭಿನಂದಿಸಿದರು.

"ಭಾರತೀಯ ಕ್ರೀಡಾ ಇತಿಹಾಸದಲ್ಲಿ, ಟೋಕಿಯೋ ಪ್ಯಾರಾಲಿಂಪಿಕ್ಸ್‌ಗೆ ವಿಶೇಷ ಸ್ಥಾನವಿರುತ್ತದೆ. ಈ ಆಟಗಳು ಪ್ರತಿಯೊಬ್ಬ ಭಾರತೀಯನ ನೆನಪಿನಲ್ಲಿ ಉಳಿಯುತ್ತದೆ. ಕ್ರೀಡೆಗಳನ್ನು ಮುಂದುವರಿಸಲು ತಲೆಮಾರುಗಳ ಕ್ರೀಡಾಪಟುಗಳನ್ನು ಪ್ರೇರೇಪಿಸುತ್ತದೆ. ನಮ್ಮ ತಂಡದ ಪ್ರತಿಯೊಬ್ಬ ಸದಸ್ಯರೂ ಚಾಂಪಿಯನ್ನರು ಮತ್ತು ಸ್ಫೂರ್ತಿಯ ಸೆಲೆಯಾಗಿದ್ದರು ಎಂದು ಪ್ರಧಾನಿ ಮೋದಿ 
ಟ್ವೀಟ್ ಮಾಡಿದ್ದಾರೆ.

Scroll to load tweet…

ಭಾರತ ಗೆದ್ದ ಐತಿಹಾಸಿಕ ಸಂಖ್ಯೆಯ ಪದಕಗಳು ನಮ್ಮ ಸಂತಸವನ್ನು ಇಮ್ಮಡಿಗೊಳಿಸಿದೆ. ನಮ್ಮ ಅಥ್ಲೀಟ್ ಗಳ ತರಬೇತುದಾರರು, ಸಹಾಯಕ ಸಿಬ್ಬಂದಿ ಮತ್ತು ಕುಟುಂಬದವರು ಕ್ರೀಡಾಪಟುಗಳಿಗೆ ನಿರಂತರವಾಗಿ ಬೆಂಬಲ ನೀಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಲು ಇಚ್ಛಿಸುತ್ತೇನೆ. ಯಶಸ್ಸಿನ ಮೇಲೆ ಕ್ರೀಡೆಯಲ್ಲಿ ಹೆಚ್ಚಿನ ಪಾಲ್ಗೊಳ್ಳುವಿಕೆಯನ್ನು ಖಾತ್ರಿಪಡಿಸುವ ವಿಶ್ವಾಸ ಹೊಂದಿದ್ದೇವೆ.

Scroll to load tweet…

ಈ ಹಿಂದೆ ನಾನು ಹೇಳಿರುವಂತೆ, ಜಪಾನ್ ನ ಅದರಲ್ಲೂ ಟೋಕಿಯೋದ ಜನರು ಮತ್ತು ಜಪಾನ್ ಸರ್ಕಾರಕ್ಕೆ ಅವರ ಅಸಾಧಾರಣ ಆತಿಥ್ಯಕ್ಕಾಗಿ, ಈ ಒಲಿಂಪಿಕ್ಸ್ ಮೂಲಕ ಅತ್ಯಂತ ಅಗತ್ಯವಾಗಿದ್ದ ಸಂಯಮ ಮತ್ತು ಒಮ್ಮತದ ಸಂದೇಶವನ್ನು ಪಸರಿಸಿದ್ದಕ್ಕಾಗಿ ಪ್ರಶಂಸಿಸಲೇಬೇಕು ಎಂದು ಮೋದಿ ಟ್ವೀಟ್ ಮೂಲಕ ಹೇಳಿದ್ದಾರೆ.