Asianet Suvarna News Asianet Suvarna News

ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಹುದ್ದೆಗೆ ಕನ್ನಡಿಗನ ಹೆಸರು ಶಿಫಾರಸು!

ಸುಪ್ರೀಂ ಕೋರ್ಟ್ ಕೊಲಿಜಿಯಂ ಇಂದು ನ್ಯಾಯಾಧೀಶರ ಹುದ್ದೆಗೆ ಹೆಸರು ಶಿಫಾರಸು ಮಾಡಿದೆ. ವಿಶೇಷವಾಗಿ ಕರ್ನಾಟಕ ಮೂಲದ, ಗುಜರಾತ್ ಹೈಕೋರ್ಟ್ ಸಿಜೆ ರಾಜೇಶ್ ಬಿಂದಾಲ್ ಹೆಸರನ್ನು ಶಿಫಾರಸು ಮಾಡಿದೆ. 

Collegium recommends appointment of Karnataka origin High Court CJ Aravind Kumar as judges of Supreme Court ckm
Author
First Published Jan 31, 2023, 8:57 PM IST

ನವದೆಹಲಿ(ಜ.31):  ಸುಪ್ರೀಂ ಕೋರ್ಟ್ ಖಾಲಿ ಇರುವ ಹುದ್ದೆಗಳಿಗೆ ಕೋರ್ಟ್ ಕೊಲಿಜಿಯಂ ನ್ಯಾಯಮೂರ್ತಿಗಳ ಹೆಸರು ಶಿಫಾರಸು ಮಾಡಿದೆ. ವಿಶೇಷ ಅಂದರೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಹುದ್ದೆ ಕರ್ನಾಟಕ ಮೂಲದ, ಗುಜರಾತ್ ಹೈಕೋರ್ಟ್‌ನಲ್ಲಿ ಸಿಜೆ ಆಗಿರುವ ಅರವಿಂದ್ ಕುಮಾರ್ ಹೆಸರೂ ಶಿಫಾರಸು ಮಾಡಿದೆ. ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ಕನ್ನಡಿಗ ಚೀಫ್ ಜಸ್ಟೀಸ್ ಅರವಿಂದ್ ಕುಮಾರ್ ಹಾಗೂ ಅಲಹಾಬಾದ್ ಹೈಕೋರ್ಟ್ ಸಿಜೆ ರಾಜೇಶ್ ಬಿಂದಾಲ್ ಹೆಸರನ್ನು ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ. 

ಅರವಿಂದ್ ಕುಮಾರ್ ಕರ್ನಾಟಕ ಹೈಕೋರ್ಟ್ ಹೆಚ್ಚುವರಿ ಜಡ್ಜ್ ಆಗಿ 2009ರ ಡಿಸೆಂಬರ್‌ನಲ್ಲಿ ನೇಮಕಗೊಂಡರು. 2012ರ ವೇಳೆ ಖಾಯಂ ಜಡ್ಜ್ ಆಗಿ ಬಡ್ತಿ ಪಡೆದರು. 2021ರ ಅಕ್ಟೋಬರ್‌ನಲ್ಲಿ ಗುಜರಾತ್ ಹೈಕೋರ್ಟ್ ಚೀಫ್ ಜಸ್ಟೀಸ್ ಆಗಿ ನೇಮಕಗೊಂಡರು. ಈ ಮೂಲಕ ಸುಪ್ರೀಂ ಕೋರ್ಟ್ ಬೆಂಚ್‌ನಲ್ಲಿ ಕರ್ನಾಟಕ ಮೂಲದ ನ್ಯಾಯಾಧೀಶರ ಸಂಖ್ಯೆ ಎರಡಕ್ಕೇರಿದೆ. 

ಕೊಲಿಜಿಯಂ: ಸರ್ಕಾರಕ್ಕೆ ಗಡುವು ನೀಡುವಂತೆ ಸುಪ್ರೀಂಗೆ ನಿವೃತ್ತ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ಒತ್ತಾಯ

ಜಸ್ಟೀಸ್ ರಾಜೇಶ್ ಬಿಂದಾಲ್ ಪಂಜಾಬ್ ಹಾಗೂ ಹರ್ಯಾಣ ಕೋರ್ಟ್ ಜಡ್ಜ್ ಆಗಿ 2006ರಲ್ಲಿ ನೇಮಕಗೊಂಡಿದ್ದಾರೆ. 2021ರಲ್ಲಿ ಜಸ್ಟೀಸ್ ರಾಜೇಶ್ ಬಿಂದಾಲ್ ಅಲಹಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ದೇಶದ ಅತೀ ದೊಡ್ಡ ಹೈಕೋರ್ಟ್ ಎಂದೇ ಗುರುತಿಸಿಕೊಂಡಿರುವ ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟ್ ಜಡ್ಜ್ ಆಗಿ ರಾಜೇಶ್ ಬಿಂದಾಲ್ ಸೇವೆ ಸಲ್ಲಿಸಿದ್ದಾರೆ. 85 ಜಡ್ಜ್ ಹೊಂದಿರುವ ಈ ಹೈಕೋರ್ಟ್‌ನಲ್ಲಿ ಸೇವೆ ಸಲ್ಲಿಸಿದ ರಾಜೇಶ್ ಬಿಂದಾಲ್ ಹೆಸರನ್ನು ಇದೀಗ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸ್ಥಾನಕ್ಕೆ ಶಿಫಾರಸು ಮಾಡಲಾಗಿದೆ.

 ಸುಪ್ರೀಂ ಕೋರ್ಟ್ ಕೊಲಿಜಿಯಂ ಹೆಸರು ಶಿಫಾರಸು ಮಾಡಿದೆ.  ನ್ಯಾಯಾಧೀಶರಾಗಿ ಜಸ್ಟೀಸ್ ರಾಜೇಶ್ ಬಿಂದಾಲ್ ಹಾಗೂ ಜಸ್ಟೀಸ್ ಅರವಿಂದ್ ಕುಮಾರ್ ಹೆಸರು ಶಿಫಾರಸು ಮಾಡಿದೆ. ಡಿಸೆಂಬರ್ 13, 2022ರಂದು ಕೊಲಿಜಿಯಂ ಐವರು ನ್ಯಾಯಮೂರ್ತಿಗಳ ಹೆಸರನ್ನು ಶಿಫಾರಸು ಮಾಡಿತ್ತು.  ನ್ಯಾಯಮೂರ್ತಿ ಪಂಕಜ್ ಮಿಥಾಲ್, ನ್ಯಾಯಮೂರ್ತಿ ಸಂಜಯ್ ಕರೋಲ್, ನ್ಯಾಯಮೂರ್ತಿ ಪಿ.ವಿ. ಸಂಜಯ್ ಕುಮಾರ್, ನ್ಯಾಯಮೂರ್ತಿ ಅಹ್ಸಾನುದ್ದೀನ್ ಅಮಾನುಲ್ಲಾ,  ನ್ಯಾಯಮೂರ್ತಿ ಮನೋಜ್ ಮಿಶ್ರಾ ಹೆಸರು ಶಿಫಾರಸು ಮಾಡಲಾಗಿದೆ. ಇವರ ನೇಮಕಾತಿ ಇನ್ನಷ್ಟೇ ಆಗಬೇಕಿದೆ.

ಸುಪ್ರೀಂಕೋರ್ಟ್‌ನ ಹಲವು ತೀರ್ಪುಗಳು ಇಂದಿ​ನಿಂದ ಕನ್ನಡ ಸೇರಿ ಕೆಲ ಪ್ರಾದೇ​ಶಿಕ ಭಾಷೆ​ಗ​ಳಲ್ಲಿ ಲಭ್ಯ

Follow Us:
Download App:
  • android
  • ios