Asianet Suvarna News Asianet Suvarna News

ಸುಪ್ರೀಂಕೋರ್ಟ್‌ನ ಹಲವು ತೀರ್ಪುಗಳು ಇಂದಿ​ನಿಂದ ಕನ್ನಡ ಸೇರಿ ಕೆಲ ಪ್ರಾದೇ​ಶಿಕ ಭಾಷೆ​ಗ​ಳಲ್ಲಿ ಲಭ್ಯ

ಈ ಸೇವೆ ಸಂಪೂರ್ಣ ಉಚಿ​ತ​ವಾ​ಗಿದ್ದು, ದೇಶದ ವಿವಿಧ ಭಾಗ​ದ​ಲ್ಲಿ​ರುವ ವಕೀ​ಲರು, ಕಾನೂನು ವಿದ್ಯಾ​ರ್ಥಿ​ಗಳು ಹಾಗೂ ಸಾರ್ವ​ಜ​ನಿ​ಕರು ಇದರ ಪ್ರಯೋ​ಜನ ಪಡೆ​ದು​ಕೊ​ಳ್ಳ​ಬ​ಹುದು. ಸರ್ಚ್‌ ಇಂಜಿನ್‌ ಅನ್ನು ಸುಧಾ​ರಿ​ಸುವ ಕಾರ್ಯ​ವನ್ನು ನಾವು ಕೈಗೊಂಡಿ​ದ್ದೇವೆ.

supreme court judgements to be now available in 4 languages says chief justice of india ash
Author
First Published Jan 26, 2023, 8:58 AM IST

ನವ​ದೆ​ಹ​ಲಿ: ಕನ್ನಡ ಸೇರಿ​ದಂತೆ ಸಂವಿ​ಧಾನದ 8ನೇ ಪರಿ​ಚ್ಛೇದದಲ್ಲಿ ಬರುವ ವಿವಿಧ ಪ್ರಾದೇ​ಶಿಕ ಭಾಷೆ​ಗ​ಳಲ್ಲಿ ಸುಪ್ರೀಂಕೋರ್ಟ್‌ ತೀರ್ಪಿನ ಪ್ರತಿ​ಗ​ಳನ್ನು ಒದ​ಗಿ​ಸುವ ಆನ್‌ಲೈನ್‌ ಸೇವೆಗೆ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಬುಧವಾರ ಇಲ್ಲಿ ಚಾಲನೆ ನೀಡಿದರು. ಇ-ಎಸ್‌ಸಿಆರ್‌ (ಎಲೆಕ್ಟ್ರಾನಿಕ್‌- ಸುಪ್ರೀಂಕೋರ್ಟ್‌ ರಿಪೋರ್ಟ್ಸ್‌) ಯೋಜನೆಯಡಿ ಗುರುವಾರದಿಂದ ದೇಶದ ಯಾವುದೇ ಪ್ರಜೆ ಉಚಿತವಾಗಿ ತಮ್ಮ ಆಯ್ಕೆಯ ಭಾಷೆಯಲ್ಲಿ ಲಭ್ಯವಿರುವ ತೀರ್ಪುಗಳನ್ನು ಓದಬಹುದಾಗಿದೆ.

ಈಗಾಗಲೇ ಇ-ಎಸ್‌ಸಿಆರ್‌ ತಂತ್ರಾಂಶದಲ್ಲಿ ಸುಪ್ರೀಂಕೋರ್ಟ್‌ನ 34,000 ತೀರ್ಪುಗಳನ್ನು ಸೇರಿಸಲಾಗಿದ್ದು, ಅವುಗಳನ್ನು ಸುಲಭವಾಗಿ ಹುಡುಕುವ ವ್ಯವಸ್ಥೆ ಮಾಡಲಾಗಿದೆ. ಇದರ ಮುಂದುವರೆದ ಭಾಗವಾಗಿ ಕನ್ನಡ ಸೇರಿದಂತೆ ವಿವಿಧ ಭಾಷೆಗಳಿಗೆ ಭಾಷಾಂತರ ಮಾಡಲಾಗಿರುವ 1091 ತೀರ್ಪುಗಳನ್ನು ಗುರುವಾರ ಬಿಡುಗಡೆ ಮಾಡಲಾಗುವುದು. ಇದರಲ್ಲಿ ಕನ್ನಡದ 17, ಒಡಿಯಾದ 21, ಮರಾಠಿ 14 ಸೇರಿದಂತೆ ವಿವಿಧ ಭಾಷೆಗಳಿಗೆ ಸೇರಿದ ತೀರ್ಪು ಸೇರಿದೆ. 22 ಪ್ರಾದೇ​ಶಿಕ ಭಾಷೆ​ಗ​ಳಲ್ಲೂ ತೀರ್ಪನ್ನು ಒದ​ಗಿ​ಸುವ ಗುರಿ​ ಸುಪ್ರೀಂಕೋರ್ಟ್‌ಗಿದೆ. ಪ್ರಾದೇ​ಶಿಕ ಭಾಷೆ​ಗ​ಳ​ಲ್ಲಿನ ತೀರ್ಪು​ಗಳು ಸುಪ್ರೀಂಕೋರ್ಟ್‌ನ ವೆಬ್‌​ಸೈಟ್‌, ಮೊಬೈಲ್‌ ಆ್ಯಪ್‌ ಮತ್ತು ನ್ಯಾಷನಲ್‌ ಜ್ಯುಡಿ​ಷಿ​ಯಲ್‌ ಡೇಟಾ ಗ್ರಿಡ್‌ನ (ಎನ್‌​ಜೆ​ಡಿ​ಜಿ) ಜಡ್ಜ್‌​ಮೆಂಟ್‌ ಪೋರ್ಟಲ್‌​ನಲ್ಲಿ ಲಭ್ಯ​ವಿರಲಿದೆ ಎಂದು ಅವರು ಮಾಹಿತಿ ನೀಡಿ​ದರು.

ಇದನ್ನು ಓದಿ: ಜಟಿಲ ಸ್ಥಿತಿ ಸೃಷ್ಟಿ ಆದಾಗ ಸಂವಿಧಾನದ ರಚನೆಯೇ ನಮಗೆ ದಿಕ್ಸೂಚಿ: ಸಿಜೆ ಚಂದ್ರಚೂಡ್‌ ಚಾಟಿ..!

ಈ ಸೇವೆ ಸಂಪೂರ್ಣ ಉಚಿ​ತ​ವಾ​ಗಿದ್ದು, ದೇಶದ ವಿವಿಧ ಭಾಗ​ದ​ಲ್ಲಿ​ರುವ ವಕೀ​ಲರು, ಕಾನೂನು ವಿದ್ಯಾ​ರ್ಥಿ​ಗಳು ಹಾಗೂ ಸಾರ್ವ​ಜ​ನಿ​ಕರು ಇದರ ಪ್ರಯೋ​ಜನ ಪಡೆ​ದು​ಕೊ​ಳ್ಳ​ಬ​ಹುದು. ಸರ್ಚ್‌ ಇಂಜಿನ್‌ ಅನ್ನು ಸುಧಾ​ರಿ​ಸುವ ಕಾರ್ಯ​ವನ್ನು ನಾವು ಕೈಗೊಂಡಿ​ದ್ದೇವೆ. ಈ ವರ್ಷದ ಜನವರಿ 1ರವ​ರೆಗೆ ನೀಡ​ಲಾದ ತೀರ್ಪು​ಗಳ ಪ್ರತಿ​ಗಳು ಪ್ರತಿ​ಯೊ​ಬ್ಬ​ರಿಗೂ ದೊರೆ​ಯುವ ವ್ಯವಸ್ಥೆ ಮಾಡ​ಲಾ​ಗಿದೆ ಎಂದು ಅವರು ಹೇಳಿ​ದರು.

ಯಾವ್ಯಾವ ಭಾಷೆಗಳು ಲಭ್ಯ..?
ಸುಪ್ರೀಂಕೋರ್ಟ್ ನೀಡಿರುವ ತೀರ್ಪುಗಳನ್ನು ಇನ್ಮುಂದೆ ನಾಲ್ಕು ಭಾಷೆಗಳಿಗೆ ಅನುವಾದಿಸಲಾಗುತ್ತದೆ ಎಂದು ತಿಳಿದುಬಂದಿದೆ. ಹಿಂದಿ, ತಮಿಳು, ಗುಜರಾತಿ ಮತ್ತು ಒಡಿಯಾ ಭಾಷೆಗಳಲ್ಲಿ ಲಭ್ಯವಿರಲಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಧನಂಜಯ ವೈ ಚಂದ್ರಚೂಡ್ ಅವರು ಮಂಗಳವಾರ ಹೇಳಿದ್ದಾರೆ. ಅಲ್ಲದೆ, ಇಂಗ್ಲಿಷ್ ದೇಶದ 99.99% ಪ್ರಜೆಗಳಿಗೆ ಗ್ರಹಿಸಬಹುದಾದ ಭಾಷೆಯಲ್ಲ ಎಂದೂ ಅವರು ಹೇಳಿದ್ದರು. 

ಇದನ್ನೂ ಓದಿ: ಮತ್ತೆ ಕೇಂದ್ರ v/s ಸುಪ್ರೀಂ: ಸುಪ್ರೀಂನಿಂದ ಸಂವಿಧಾನ ಹೈಜಾಕ್‌; ನಿವೃತ್ತ ಜಡ್ಜ್‌ ಹೇಳಿಕೆಗೆ ಸಚಿವ ಬೆಂಬಲ

ಆನ್‌ಲೈನ್ ಇ-ಇನ್‌ಸ್ಪೆಕ್ಷನ್ ಸಾಫ್ಟ್‌ವೇರ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಇದು ದೆಹಲಿ ಹೈಕೋರ್ಟ್‌ನ ಡಿಜಿಟಲೈಸ್ಡ್ ಜ್ಯುಡಿಷಿಯಲ್‌ ಫೈಲ್‌ಗಳನ್ನು ಪರಿಶೀಲಿಸಲು ಅನುವು ಮಾಡಿಕೊಡುತ್ತದೆ. ಪ್ರಾದೇಶಿಕ ಭಾಷೆಗಳಲ್ಲಿ ತೀರ್ಪುಗಳ ಅನುವಾದವು ನಾಗರಿಕರಿಗೆ ನ್ಯಾಯವನ್ನು ಪಡೆಯಲು ಸಹಾಯ ಮಾಡುತ್ತದೆ ಎಂದೂ ಸಿಜೆಐ ಹೇಳಿದರು. ನಾವು ಇತ್ತೀಚೆಗೆ ಅಳವಡಿಸಿಕೊಂಡಿರುವ ಒಂದು ಪ್ರಮುಖ ಉಪಕ್ರಮವೆಂದರೆ ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಅನುವಾದಿಸುವುದು. ಏಕೆಂದರೆ ನಾವು ಬಳಸುವ ಇಂಗ್ಲಿಷ್ ಭಾಷೆಯು 99.9% ನಷ್ಟು ನಾಗರಿಕರಿಗೆ ಗ್ರಹಿಸಲಾಗದ ಭಾಷೆಯಾಗಿದೆ ಎಡು ಸಿಜೆಐ ಚಂದ್ರಚೂಡ್‌ ಹೇಳಿದರು.

ದೇಶಾದ್ಯಂತ ಪ್ರತಿ ಹೈಕೋರ್ಟ್‌ನಲ್ಲಿ ಇಬ್ಬರು ನ್ಯಾಯಮೂರ್ತಿಗಳ ಸಮಿತಿ ಇರಬೇಕು, ಅವರಲ್ಲಿ ಒಬ್ಬರು ನ್ಯಾಯಮೂರ್ತಿಗಳಾಗಿರಬೇಕು ಎಂಬ ಉದ್ದೇಶದಿಂದ ತೀರ್ಪುಗಳನ್ನು 4 ಭಾಷೆಗಳಿಗೆ ಭಾಷಾಂತರಿಸಲು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಅಭಯ್ ಓಕಾ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದೆ ಎಂದು ಅವರು ಹೇಳಿದರು. 

ಇದನ್ನೂ ಓದಿ: ಜಡ್ಜ್‌ಗಳ ಹಿನ್ನೆಲೆ ಕುರಿತ ‘ರಾ’ ವರದಿ ಬಹಿರಂಗ: ಕೊಲಿಜಿಯಂ ನಡೆಗೆ ಕೇಂದ್ರ ಸಚಿವ ಕಿರಣ್‌ ರಿಜಿಜು ಕಿಡಿ

Follow Us:
Download App:
  • android
  • ios