Asianet Suvarna News Asianet Suvarna News

ಕಾಲಾ ಚಸ್ಮಾ ಹಾಡಿಗೆ ಉಪನ್ಯಾಸಕಿಯರ ಜಬರ್ದಸ್ತ್ ಡ್ಯಾನ್ಸ್, ವಿದ್ಯಾರ್ಥಿಗಳು ಸೈಲೆಂಟ್!

ವೇದಿಕೆಯಲ್ಲಿ ಮಹಿಳಾ ಪ್ರೊಫೆಸರ್ ಕಾಲಾ ಚಸ್ಮಾ ಬಾಲಿವುಡ್ ಹಾಡಿಗೆ ಜಬರ್ದಸ್ತ್ ಹೆಜ್ಜೆ ಹಾಕಿದ್ದಾರೆ. ಉಪನ್ಯಾಸಕಿಯರ ಮಸ್ತ್ ಡ್ಯಾನ್ಸ್‌ಗೆ ರ್‍ಯಾಪರ್ ಬಾದ್‌ಶಾ ಕೂಡ ಮನಸೋತು ಕಮೆಂಟ್ ಮಾಡಿದ್ದಾರೆ. ಇತ್ತ ಸ್ಟೇಜ್ ಮೇಲಿದ್ದ ವಿದ್ಯಾರ್ಥಿಗಳು ಸೈಲೆಂಟ್ ಆಗಿದ್ದಾರೆ

College woman professors dance performance for kala chashma songs goes viral in Kerala ckm
Author
First Published Aug 30, 2024, 8:44 AM IST | Last Updated Aug 30, 2024, 8:44 AM IST

ಎರ್ನಾಕುಲಂ(ಆ.30) ಕಾಲೇಜು ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳ ಡ್ಯಾನ್ಸ್, ಸಾಂಸ್ಕೃತಿಕ ಚಟುವಟಿಕೆ ಕಾರ್ಯಕ್ರಮದ ಮೆರುಗು ಹೆಚ್ಚಿಸಲಿದೆ. ಇದರ ನಡುವೆ ಕೆಲ ಸಂದರ್ಭಗಲ್ಲಿ ಉಪನ್ಯಾಸಕರು, ಉಪನ್ಯಾಸಕಿಯರು ಹೆಜ್ಜೆ ಹಾಕಿ ಮೋಡಿದ್ದಾರೆ. ಆದರೆ ಪವರ್ ಹೌಸ್ ಪರ್ಫಾಮೆನ್ಸ್ ನೀಡಿದ ಊದಾಹರಣೆ ಕಡಿಮೆ. ಇದೀಗ ಕಾಲೇಜಿನ ಮಹಿಳಾ ಫ್ರೊಪೆಸರ್ಸ್ ವೇದಿಕೆ ಹತ್ತಿ ಬಾಲಿವುಡ್‌ನ ಖ್ಯಾತ ಕಾಲಾ ಚಸ್ಮಾ ಹಾಡಿಗೆ ಭರ್ಜರಿ ಸ್ಟೆಪ್ಸ್ಟ್ ಹಾಕಿದ್ದಾರೆ. ಉಪನ್ಯಾಸಕಿಯರ ಡ್ಯಾನ್ಸ್‌ಗೆ ವಿದ್ಯಾರ್ಥಿಗಳು ನಾಚಿ ನೀರಾಗಿದ್ದಾರೆ. ಇಷ್ಟೇ ಅಲ್ಲ ಈ ಹಾಡು ಹಾಡಿದ ಖ್ಯಾತ ಗಾಯಕ ಬಾದ್‌ಶಾ ಉಪನ್ಯಾಸಕಿಯರ ಡ್ಯಾನ್ಸ್ ಮೆಚ್ಚಿ ಪ್ರತಿಕ್ರಿಯಿಸಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ವಿದ್ಯಾರ್ಥಿಯೊಬ್ಬ ಈ ವಿಡಿಯೋ ಹಂಚಿಕೊಂಡಿದ್ದಾರೆ. ನಮಗೆ ಕೆಲ ಕೂಲ್ ಟೀಚರ್ಸ್ ಸಿಕ್ಕಿದ್ದಾರೆ ಎಂದು ಕಮೆಂಟ್ ಮಾಡಿದ್ದಾನೆ. ಉಪನ್ಯಾಸಕಿಯರು ಭರ್ಜರಿ ಡ್ಯಾನ್ಸ್ ಸ್ಟೆಪ್ಸ್ ಹಾಕಿದ್ದು ಕೇರಳದ ಎರ್ನಾಕುಲಂ ಸೈಂಟ್ ತೆರೆಸಾ ಕಾಲೇಜಿನ ಕಾರ್ಯಕ್ರಮದಲ್ಲಿ. ವಿದ್ಯಾರ್ಥಿಗಳ ಡ್ಯಾನ್ಸ್ ಸೇರಿದಂತೆ ಇತರ ಕಾರ್ಯಕ್ರಮದ ಕೊನೆಯಲ್ಲಿ ಉಪನ್ಯಾಸಕಿಯರನ್ನು ಒತ್ತಾಯಪೂರ್ವಕವಾಗಿ ವೇದಿಕೆ ಮೇಲೆ ಕರೆತಂದು ಕಾಲಾ ಚಸ್ಮಾ ಹಾಡು ಹಾಕಲಾಗಿತ್ತು.

Seetharama Serial : ಸೀರೆಯಲ್ಲಿ ಬೆಲ್ಲಿ ಡಾನ್ಸ್‌ ಮಾಡಿದ ವೈಷ್ಣವಿ... ಸೀತಾರಾಮ ಜೋಡಿ ಸೂಪರ್‌ ಎಂದ ಅಭಿಮಾನಿಗಳು

ಆದರೆ ಹಾಡು ಪ್ಲೇ ಆಗುತ್ತಿದ್ದಂತೆ ಉಪನ್ಯಾಸಕಿಯರು ಎಲ್ಲರನ್ನೂ ಚಕಿತಗೊಳಿಸಿದ್ದಾರೆ. ಅದ್ಭುತ ಡ್ಯಾನ್ಸ್ ಸ್ಟೆಪ್ಸ್ಟ್ ಹಾಕಿ ಮಿಂಚಿದ್ದಾರೆ. ಅರುಣಿಮಾ ದೇವಶಿಶ್ ಅನ್ನೋ ಮಹಿಳಾ ಉಪನ್ಯಾಸಕಿ ಇದೀಗ ಭಾರಿ ವೈರಲ್ ಆಗಿದ್ದಾರೆ. ಇವರ ಜೊತೆಗೆ ಇತರ ಉಪನ್ಯಾಸಕಿಯರು ಹೆಜ್ಜೆ ಹಾಕಿದ್ದಾರೆ. ಅದ್ಭುತ ಡ್ಯಾನ್ಸ್ ವಿಡಿಯೋ 10 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಕಂಡಿದೆ.

ಬಾದ್‌ಶಾ ಕೂಡ ಉಪನ್ಯಾಸಕಿಯರ ಡ್ಯಾನ್ಸ್‌ಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ನಟಿ ಸೋನಮ್ ಬಾಜ್ವಾ ಕೂಡ ಇಮೋಜಿ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳು ಪ್ರೊಫೆಸರ್ ಡ್ಯಾನ್ಸ್‌ಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು ಪದೇ ಪದೇ ನೋಡುತ್ತಿರುವುದಾಗಿ ಹಲವರು ಕಮೆಂಟ್ ಮಾಡಿದ್ದಾರೆ. ನಮ್ಮ ಶಾಲಾ ಕಾಲೇಜಿನಲ್ಲೂ ಇದೇ ರೀತಿಯ ಟೀಚರ್ ಇರಬೇಕಿತ್ತು ಎಂದು ನಾನು ಬಯಸುತ್ತೇನೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. 

 

 
 
 
 
 
 
 
 
 
 
 
 
 
 
 

A post shared by theja 🐷 (@thejjjjj_)

 

ಕೇರಳದ ಎರ್ನಾಕುಲಂ ಕಾಲೇಜಿನ ಕಾರ್ಯಕ್ರಮದ ಈ ಡ್ಯಾನ್ಸ್ ಇದೀಗ ಕೇರಳದ ಬಹುತೇಕ ಕಾಲೇಜಿನಲ್ಲಿ ಸಂಚಲನ ಸೃಷ್ಟಿಸಿದೆ. ವೇದಿಕೆ ಮೇಲೆ ಟೀಚರ್ಸ್ ಡ್ಯಾನ್ಸ್‌ಗೆ ಹಿಂಭಾಗದಲ್ಲಿದ್ದ ವಿದ್ಯಾರ್ಥಿಗಳು ನಾಚಿ ನೀರಾಗಿದ್ದಾರೆ. ಇಡೀ ಕಾರ್ಯಕ್ರಮದಲ್ಲಿ ಇದೀಗ ಉಪನ್ಯಾಸಕಿಯರ ಡ್ಯಾನ್ಸ್ ಭಾರಿ ಹೈಲೈಟ್ ಆಗಿದೆ.

sandalwood : ಬರಿ ಓಳು ಹಾಡಿಗೆ ಡಾನ್ಸ್ ಮಾಡಿ ಐ ಲೈಕ್ ಇಟ್ ಎಂದ ಉಪ್ಪಿ

Latest Videos
Follow Us:
Download App:
  • android
  • ios