Asianet Suvarna News Asianet Suvarna News

Seetharama Serial : ಸೀರೆಯಲ್ಲಿ ಬೆಲ್ಲಿ ಡಾನ್ಸ್‌ ಮಾಡಿದ ವೈಷ್ಣವಿ... ಸೀತಾರಾಮ ಜೋಡಿ ಸೂಪರ್‌ ಎಂದ ಅಭಿಮಾನಿಗಳು

ಸೀತಾರಾಮ ಸೀರಿಯಲ್ ಖ್ಯಾತಿಯ ವೈಷ್ಣವಿ ಸೀರೆಯುಟ್ಟ ಡಾನ್ಸ್ ಮಾಡಿದ್ದಾರೆ. ಸೀರೆಯಲ್ಲಿ ಬೆಲ್ಲಿ ಡಾನ್ಸ್ ಸ್ಟೆಪ್ ಹಾಕಿರುವ ಅವರಿಗೆ ರಾಮ್ ಜೊತೆಯಾಗಿದ್ದಾರೆ. ಸೂಪರ್ ಹಿಟ್ ಜೋಡಿಯ ಸೂಪರ್ ಹಿಟ್ ಡಾನ್ಸ್ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.
 

sitarama serial couple danced to dwapara song roo
Author
First Published Aug 12, 2024, 3:03 PM IST | Last Updated Aug 12, 2024, 3:03 PM IST

ಸೀತಾರಾಮ ಧಾರಾವಾಹಿ (Sitaram serial) ಯಲ್ಲಿ ಮಿಂಚುತ್ತಿರುವ ವೈಷ್ಣವಿ ಗೌಡ (Vaishnavi Gowda) ಹಾಗೂ ಗಗನ್ ಚಿನ್ನಪ್ಪ (Gagan Chinnappa), ಸೂಪರ್ ಹಿಟ್ ಹಾಡೊಂದಕ್ಕೆ ಡಾನ್ಸ್ ಮಾಡಿದ್ದು, ಇದೀಗ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ವೈಷ್ಣವಿ ಗೌಡ, ದಿನಕ್ಕೊಂದು ರೀಲ್ಸ್ ಪೋಸ್ಟ್ ಮಾಡ್ತಾರೆ. ಒಂದು ದಿನ ಸೀತಾರಾಮ ತಂಡದ ಜೊತೆ ರೀಲ್ಸ್ ಮಾಡಿದ್ರೆ ಮತ್ತೊಂದು ದಿನ ಒಬ್ಬರೇ ಡಾನ್ಸ್ ಮಾಡಿ ಇಲ್ಲವೆ ಹೆಲ್ತ್, ಯೋಗ ಬಗ್ಗೆ ಮಾಹಿತಿ ನೀಡಿ ಅಭಿಮಾನಿಗಳ ಗಮನ ಸೆಳೆಯುತ್ತಾರೆ. ಸದ್ಯ ಸೀತಾರಾಮ ಧಾರಾವಾಹಿಯಲ್ಲಿ ಮದುವೆಯಾಗಿರುವ ವೈಷ್ಣವಿ, ಸೀರೆಯಲ್ಲಿ ಮಿಂಚುತ್ತಿದ್ದಾರೆ. ಈಗ ಸೀರೆಯಲ್ಲೇ ರಾಮನ ಜೊತೆ ಡಾನ್ಸ್ ಮಾಡಿದ್ದು, ಅಭಿಮಾನಿಗಳ ಗಮನ ಸೆಳೆದಿದೆ.

ವೈಷ್ಣವಿ ಗೌಡ ಹಾಗೂ ಗಗನ್ ಚನ್ನಪ್ಪ, ಕೃಷ್ಣಂ ಪ್ರಣಯ ಸಖಿ ಸಿನಿಮಾದ, ಗೋಲ್ಡನ್ ಸ್ಟಾರ್ ಗಣೇಶ್ ಹಿಟ್ ಸಾಂಗ್ ದ್ವಾಪರ (Dwapara) ಹಾಡಿಗೆ ಡಾನ್ಸ್ ಮಾಡಿದ್ದಾರೆ. ಗಣೇಶ್ ಹುಕ್ ಸ್ಟೆಪ್,  ಹಂಸ ನಡೆಯೋಳೆ ಹಾಡಿಗೆ ವೈಷ್ಣವಿ ಸೀರೆಯುಟ್ಟು ಬೆಲ್ಲಿ ಡಾನ್ಸ್ ಮಾಡಿದ್ದಾರೆ. ಅವರ ಡಾನ್ಸ್ ಅಭಿಮಾನಿಗಳ ಮೆಚ್ಚುಗೆ ಗಳಿಸಿದೆ. ಇದಕ್ಕೂ ಮುನ್ನ ಇದೇ ಹಾಡಿಗೆ ಸೀತಾರಾಮ ತಂಡದ ಜೊತೆ ಡಾನ್ಸ್ ಮಾಡಿದ್ದ ಸೀತಾ ವೈಷ್ಣವಿ ಗೌಡ ಎಲ್ಲರ ಮನಸ್ಸು ಗೆದ್ದಿದ್ದರು. ಡಾನ್ಸ್ ಗೆ ಸೂಪರ್ ಅಂತ ಅಭಿಮಾನಿಗಳು ಕಮೆಂಟ್ ಮಾಡಿದ್ರೆ, ಗಗನ್ ಡಾನ್ಸ್ ನೋಡಿ ಅಭಿಮಾನಿಯೊಬ್ಬರು ಕಾಲೆಳೆದಿದ್ದಾರೆ. ಹಿಂಗೆಲ್ಲ ಡಾನ್ಸ್ ಮಾಡಿದ್ರೆ ಹೆಂಗೆ ನೋಡೋದು ಸರ್ ಅಂದಿದ್ದಾರೆ.

ಬ್ರಹ್ಮಗಂಟು ದೀಪಾಳ ರೀಲ್ಸ್​ಗೆ ಫಿದಾ: ಅಕ್ಕ ಪ್ಲೀಸ್​ ಸುಂದರ ಮುಖ ಗಂಡಕ್ಕೆ ತೋರಿಸಿ ಅಂತಿರೋ ಫ್ಯಾನ್ಸ್​!

ಝೀ ಕನ್ನಡದಲ್ಲಿ ಬರ್ತಿರುವ ಸೀತಾರಾಮ ಧಾರಾವಾಹಿ ಅಭಿಮಾನಿಗಳನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಮೊದಲು ಸೀತಾ ಮತ್ತು ರಾಮನ ಪ್ರೀತಿ, ನಂತ್ರ ಮದುವೆ ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಿತ್ತು. ಒಂದು ವಾರಗಳ ಕಾಲ ಸೀತಾರಾಮರ ಮದುವೆಯನ್ನು ತೋರಿಸಿದ್ದ ನಿರ್ದೇಶಕರು, ಅನೇಕ ಸಂಪ್ರದಾಯಗಳ ಬಗ್ಗೆ ಮಾಹಿತಿ ನೀಡಿದ್ದರು. ಮದುವೆ ಆದ್ಮೇಲೆ ಫಸ್ಟ್ ನೈಟ್ ದೃಶ್ಯ ನೋಡ್ಬಹುದು ಅಂದ್ಕೊಂಡಿದ್ದವರಿಗೆ ಸ್ವಲ್ಪ ನಿರಾಸೆಯಾಗಿದೆ. ಸಿಹಿ ಕಾರಣಕ್ಕೆ ಇಬ್ಬರ ಫಸ್ಟ್ ನೈಟ್ ಇನ್ನೂ ಆಗಿಲ್ಲ. ಸದ್ಯ, ಸಿಹಿಯ ಓದಿನ ಬಗ್ಗೆ ಮನೆಯಲ್ಲಿ ಬಿಸಿಬಿಸಿ ಚರ್ಚೆಯಾಗ್ತಿದೆ. ಸೀತಾರಾಮರ ಮಧ್ಯೆ ಸಿಹಿ ಬೇಡ ಎನ್ನುವ ಕಾರಣಕ್ಕೆ ಆಕೆಯನ್ನು ಬೋಲ್ಡಿಂಗ್ ಸ್ಕೂಲಿಗೆ ಸೇರಿಸಲು ಮನೆಯವರು ಮುಂದಾದ್ರೆ ಸೀತಾ ಹಾಗೂ ರಾಮರಿಗೆ ಇದು ಇಷ್ಟವಿಲ್ಲ. ಇದೇ ವಿಷ್ಯಕ್ಕೆ ಮನೆಯಲ್ಲಿ ಮಾತುಕತೆ ನಡೆಯುತ್ತಿದೆ. ಮನೆಯಲ್ಲಿದ್ರೆ ಸಿಹಿಗೆ ಅಪಾಯ ಎನ್ನುವ ಕಾರಣಕ್ಕೆ ಸೀತಾರಾಮ ಯಾವುದನ್ನು ಆಯ್ಕೆ ಮಾಡ್ಕೊಳ್ತಾರೆ ಎಂಬುದನ್ನು ಕಾದುನೋಡ್ಬೇಕು. ಸೀತಾ ರಾಮ ಧಾರಾವಾಹಿಗಿಂತ ಮುನ್ನ ಬಿಗ್ ಬಾಸ್ ನಲ್ಲಿ ಮಿಂಚಿದ್ದ ವೈಷ್ಣವಿ, ಡಾನ್ಸ್ ಹಾಗೂ ಯೋಗಾದಲ್ಲಿ ಮುಂದಿದ್ದಾರೆ. ಅವರ ಬೆಲ್ಲಿ ಡಾನ್ಸ್ ಅಭಿಮಾನಿಗಳ ಗಮನವನ್ನು ಸೆಳೆಯುತ್ತಿರುತ್ತದೆ. 

ಪುಷ್ಪ 2 ವಿಶೇಷ ಸಾಂಗ್‌ನಲ್ಲಿ ಕನ್ನಡದ ನಟಿ; ಈಕೆಯಿಂದ ರಶ್ಮಕಾ ಮಂದಣ್ಣನನ್ನು ಹೊರ ಹಾಕಿದ್ರ ಅಲ್ಲು ಅರ್ಜುನ್?

ಈಗ ಟ್ರೆಂಡ್ ಸಾಂಗ್ ಗೆ ಸೀತಾರಾಮ ಡಾನ್ಸ್ ಮಾಡಿದ್ದಾರೆ. ಗಣೇಶ್ ಅಭಿನಯದ ಕೃಷ್ಣಂ ಪ್ರಣಯ ಸಖಿ ಸಿನಿಮಾದ ದ್ವಾಪರ ಹಾಡನ್ನು ವಿ. ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಗಣೇಶ್ ಗೆ ನಾಯಕಿಯಾಗಿ ಮಾಳವಿಕಾ ನಾಯರ್ ನಟಿಸಿದ್ದಾರೆ. ಆಗಸ್ಟ್ 15ರಂದು ಚಿತ್ರ ತೆರೆಗೆ ಬರ್ತಿದೆ. ಇದು ಗಣೇಶ್ ವೃತ್ತಿ ಜೀವನದ ಬಿಗ್ ಬಜೆಟ್ ಸಿನಿಮಾ ಎಂದು ಸಂದರ್ಶನವೊಂದರಲ್ಲಿ ಗಣೇಶ್ ಒಪ್ಪಿಕೊಂಡಿದ್ದಾರೆ. ಈ ಹಾಡು ಸಖತ್ ವೈರಲ್ ಆಗಿದ್ದು, ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ. ಇನ್ಸ್ಟಾ ರೀಲ್ಸ್ ಹಾಗೂ ಶಾರ್ಟ್ಸ್ ನಲ್ಲಿ ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಜನರವರೆಗೆ ಎಲ್ಲರೂ ದ್ವಾಪರ ಹಾಡಿಗೆ ಸ್ಟೆಪ್ಸ್ ಹಾಕ್ತಿದ್ದಾರೆ. 

Latest Videos
Follow Us:
Download App:
  • android
  • ios