sandalwood : ಬರಿ ಓಳು ಹಾಡಿಗೆ ಡಾನ್ಸ್ ಮಾಡಿ ಐ ಲೈಕ್ ಇಟ್ ಎಂದ ಉಪ್ಪಿ
ರಿಯಲ್ ಸ್ಟಾರ್ ಉಪೇಂದ್ರ ಅಭಿಮಾನಿಗಳಿಗೆ ನಿನ್ನೆಯೇ ಹಬ್ಬವಾಗಿದೆ. ಅದಕ್ಕೆ ಕಾರಣ ಉಪ್ಪಿ ಡಾನ್ಸ್ ಹಾಗೂ ಡೈಲಾಗ್. ಗೌರಿ ಚಿತ್ರದ ಕಾರ್ಯಕ್ರಮವೊಂದಲ್ಲಿ ಪಾಲ್ಗೊಂಡಿದ್ದ ಉಪೇಂದ್ರ, ಯುವ ಜೋಡಿಯ ಸಿನಿಮಾ ನೋಡುವಂತೆ ಮನವಿ ಮಾಡಿದ್ದಾರೆ.
ಸ್ಯಾಂಡಲ್ ವುಡ್ ರಿಯಲ್ ಸ್ಟಾರ್ ಉಪೇಂದ್ರ (Sandalwood Real Star Upendra) ಡೈಲಾಗ್, ಡ್ಯಾನ್ಸ್ (Dance) ನೋಡೋಕೆ ಜನರು ಮುಗಿಬೀಳ್ತಾರೆ. ಉಪೇಂದ್ರ ಅಭಿನಯದ ಕೆಲ ಸಾಂಗ್ ಈಗ್ಲೂ ಜನರ ಮನದಲ್ಲಿ ಅಚ್ಚಳಿಯದಂತೆ ಉಳಿದಿದೆ. ನಿನ್ನೆ ಅಭಿಮಾನಿಗಳಿಗೆ (Fans) ಉಪೇಂದ್ರ ಹಬ್ಬದೂಟ ನೀಡಿದ್ದಾರೆ. ಉಪೇಂದ್ರ, ಎಂ ಟಿ ವಿ ಸುಬ್ಬಲಕ್ಷ್ಮಿಗೆ ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಉಪೇಂದ್ರ ಡಾನ್ಸ್ ನೋಡಿದ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ನಟ ಉಪೇಂದ್ರ ಜೊತೆ ನಟಿ ಸಾನ್ಯಾ ಅಯ್ಯರ್ ಹಾಗೂ ನಟ ಸಮರ್ಜಿತ್ ಕೂಡ ಡಾನ್ಸ್ ನ ಹುಕ್ ಸ್ಟೆಪ್ಸ್ ಹಾಕಿದ್ದಾರೆ.
ಆಗಸ್ಟ್ 15ರಂದು ಇಂದ್ರಜಿತ್ ಲಂಕೇಶ್ ನಿರ್ದೇಶನದ, ಅವರ ಮಗ ಸಮರ್ಜಿತ್ ಲಂಕೇಶ್ ಹಾಗೂ ನಟಿ ಸಾನ್ಯಾ ಅಯ್ಯರ್ ನಟನೆಯ ಗೌರಿ ತೆರೆಗೆ ಬರ್ತಾ ಇದೆ. ಸೋಮವಾರ ಚಿತ್ರದ ಫ್ರೀ ರಿಲೀಸ್ ಇವೆಂಟ್ ನಡೆಯಿತು. ಇದ್ರಲ್ಲಿ ಪಾಲ್ಗೊಂಡಿದ್ದ ಉಪೇಂದ್ರ, ಯುವ ಕಲಾವಿದರು ನಟಿಸ್ತಿರುವ ಸಿನಿಮಾಗೆ ಶುಭಕೋರಿದ್ದಲ್ಲದೆ, ಡೈಲಾಗ್, ಡಾನ್ಸ್ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ರು.
ಭಾರತೀಯ ಸಿನಿಮಾದ ಮೊದಲ ಮಹಿಳಾ ಸೂಪರ್ ಸ್ಟಾರ್ ಯಾರು?; ಆಸ್ತಿಗೆ ಲೆಕ್ಕವೇ ಇಲ್ಲ!
ಗೌರಿ ಚಿತ್ರದ ಇವೆಂಟ್ ನಲ್ಲಿ ಉಪೇಂದ್ರ ಅಭಿಮಾನಿಗಳ ಬೇಡಿಕೆಗೆ ತಕ್ಕಂತೆ ತಮ್ಮ ಸೂಪರ್ ಹಿಟ್ ಚಿತ್ರದ ಹಾಡಿಗೆ ಡಾನ್ಸ್ ಮಾಡಿ, ಡೈಲಾಗ್ ಹೇಳಿದ್ದಾರೆ. ಸಾನ್ಯಾ ಅಯ್ಯರ್ ಗಡ್ಡ ಮುಟ್ಟಿದ ಉಪೇಂದ್ರ, ಕಲೆಯಿಲ್ಲದ ಕಲೆಯಿಲ್ಲ ಕಾಂತ ಎನ್ನುತ್ತಲೇ ಐ ಲೈಕ್ ಇಟ್, ಐ ಲೈಕ್ ಇಟ್ ಅಂದ್ರು.
ಇದೇ ವೇಳೆ ಉಪೇಂದ್ರ ತಮ್ಮ ಯು ಐ (UI) ಸಿನಿಮಾ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಉಪೇಂದ್ರ ಅಭಿನಯದ ಹೊಸ ಚಿತ್ರ ಯಾವಾಗ ಬರುತ್ತೆ ಎಂದ ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡಿದ ಉಪ್ಪಿ, ಯುಐ ಸಿನಿಮಾ ಶೀಘ್ರದಲ್ಲಿಯೇ ತೆರೆಗೆ ಬರಲಿದೆ ಎಂದಿದ್ದಾರೆ.
ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ಉಪೇಂದ್ರ, ಈ ಸಮಯದಲ್ಲಿ ಇಂದ್ರಜಿತ್ ಲಂಕೇಶ್ ಹಾಗೂ ದೀಪಿಕಾ ಪಡುಕೋಣೆಯ ಬಗ್ಗೆ ಮಾತನಾಡಿದ್ರು. ನಟಿ ದೀಪಿಕಾಗೆ ಬ್ರೇಕ್ ನೀಡಿದ್ದು ಇಂದ್ರಜಿತ್ ಲಂಕೇಶ್. ಈಗ ಅವರು ಬಾಲಿವುಡ್ ಆಳ್ತಿದ್ದಾರೆ. ಇಂಥ ಸಮಾರಂಭ ಮಾಡಲು ಇಂದ್ರಜಿತ್ ಗೆ ಮಾತ್ರ ಸಾಧ್ಯ ಎಂದ ಉಪೇಂದ್ರ, ಇನ್ನು ಸಮರ್ಜಿತ್ ಇಲ್ಲಿ ಇರ್ತಾರಾ? ಅವರು ಬಾಲಿವುಡ್, ಹಾಲಿವುಡ್ ಅಂತ ಹಾರಿ ಹೋಗ್ತಾರೆ. ಅವರನ್ನು ಹಿಡಿದಿಡುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದಿದ್ದಾರೆ. ಎಲ್ಲ ಅಭಿಮಾನಿಗಳು ಹೊಸ ಚಿತ್ರಗಳನ್ನು ಥಿಯೇಟರ್ ಗೆ ಬಂದು ನೋಡ್ಬೇಕು. ಹಾಗಾದಲ್ಲಿ ಮಾತ್ರ ಚಿತ್ರ ಕಲಾವಿದರು ಬೆಳೆಯಲು ಸಾಧ್ಯ ಎಂದು ಉಪ್ಪಿ ಹೇಳಿದ್ದಾರೆ.
ಸಮರ್ಜಿತ್, ಆಕ್ಟಿಂಗ್, ಡಾನ್ಸ್, ಫೈಟ್ ಎಲ್ಲವನ್ನೂ ಮಾಡಬಲ್ಲ ಕಲಾವಿದ. ಮುಗ್ದ ಯುವ ನಾಯಕ ಎಂದ ಉಪೇಂದ್ರ, ನಿಮ್ಮ ಮುಗ್ದತೆಯನ್ನು ಹೀಗೆ ಉಳಿಸಿಕೊ ಎಂದು ಸಲಹೆ ನೀಡಿದ್ದಾರೆ. ಉಪೇಂದ್ರ ಮಗ ಓದುತ್ತಿರುವ ಸ್ಕೂಲ್ ನಲ್ಲಿಯೇ ಸಮರ್ಜಿತ್ ಓದಿದ್ದು ಎಂದ ಉಪೇಂದ್ರ, ಕೆಲವರು ಸಿನಿಮಾ ರಂಗಕ್ಕೆ ಬಂದ್ಮೇಲೆ ಬದಲಾಗ್ತಾರೆ. ಇನ್ನು ಕೆಲವರು ತಮಗೆ ಎಲ್ಲ ಗೊತ್ತಿದೆ ಅಂತ ಎಲ್ಲವನ್ನು ಕಳೆದುಕೊಳ್ತಾರೆ ಎನ್ನುತ್ತಲೇ ಉಪೇಂದ್ರ, ಸಮರ್ಜಿತ್ ರನ್ನು ಹೃತಿಕ್ ರೋಷನ್ ಗೆ ಹೋಲಿಸಿದ್ದಾರೆ.
ಉಂಗುರದ ನಂಟಿಗೆ 8 ವರ್ಷ: ನೂರು ಜನ್ಮದಲ್ಲೂ ನೀನೇ ನನ್ನ ಇನಿಯ ಎಂದ ಸ್ಯಾಂಡಲ್‌ವುಡ್ ಸಿಂಡ್ರೆಲ್ಲಾ!
ಹೊಸ ಚಿತ್ರಕ್ಕೆ ಶುಭ ಹಾರೈಸಿದ ಉಪೇಂದ್ರ, ಫಸ್ಟ್ ಡೇ, ಫಸ್ಟ್ ಶೋ ವೀಕ್ಷಣೆ ಮಾಡುವಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಗೌರಿ ಚಿತ್ರದ ಫ್ರೀ ರಿಲೀಸ್ ಇವೆಂಟ್ ಅದ್ಧೂರಿಯಾಗಿ ನಡೆಯಿತು. ಫ್ಯಾಷನ್ ಶೋ ಕೂಡ ಏರ್ಪಡಿಸಲಾಗಿತ್ತು. ಈ ವೇಳೆ ಮಾತನಾಡಿದ ಇಂದ್ರಜಿತ್ ಲಂಕೇಶ್, ಉಪೇಂದ್ರ ಸಿನಿಮಾವನ್ನು ಹೊಗಳಿದ್ದಲ್ಲದೆ, ಗೌರಿ ಚಿತ್ರ ವೀಕ್ಷಿಸುವಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ರು.