Asianet Suvarna News Asianet Suvarna News

ನನ್ನ ಮೇಲೆ ದಾಳಿಗೆ ಸಿಎಂ ಪಿಣರಾಯಿ ಸಂಚು: ಕೇರಳ ರಾಜ್ಯಪಾಲ ಗಂಭೀರ ಆರೋಪ

ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ನನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಲು ಯತ್ನಿಸುತ್ತಿದ್ದಾರೆ ಎಂದು ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ಗಂಭೀರ ಆರೋಪ ಮಾಡಿದ್ದಾರೆ.

CM Pinarayi is plotting to attack me Kerala Governor serious allegation aganist Kerala CM akb
Author
First Published Dec 13, 2023, 8:42 AM IST

ಕೊಚ್ಚಿ: ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ನನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಲು ಯತ್ನಿಸುತ್ತಿದ್ದಾರೆ ಎಂದು ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ಗಂಭೀರ ಆರೋಪ ಮಾಡಿದ್ದಾರೆ.

ಭಾನುವಾರ ರಾತ್ರಿ ರಾಜ್ಯಪಾಲ ಆರೀಫ್ ಮೊಹಮ್ಮದ್‌ ಖಾನ್‌ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ವೇಳೆ ಆಡಳಿತಾರೂಢ ಸಿಪಿಎಂನ ವಿದ್ಯಾರ್ಥಿ ವಿಭಾಗವಾದ ಸ್ಟೂಡೆಂಟ್ ಫೆಡರೇಶನ್‌ ಆಫ್‌ ಇಂಡಿಯಾದ ಕಾರ್ಯಕರ್ತರು, ರಾಜ್ಯಪಾಲರ ಕಾರಿನ ಮೇಲೆ ದಾಳಿ ನಡೆಸಿದ್ದರು. ಇದರಿಂದ ಸಿಟ್ಟಿಗೆದ್ದ ಖಾನ್‌, ಕಾರಿನಿಂದ ಇಳಿದು, ಎಸ್‌ಎಫ್‌ಐ ಕಾರ್ಯಕರ್ತರಿಗೆ ಸವಾಲು ಹಾಕಿದ್ದರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಖಾನ್‌, ನನ್ನ ಮೇಲೆ ದೈಹಿಕವಾಗಿ ದಾಳಿ ಮಾಡಲು ಪಿತೂರಿ ನಡೆಸಿ ಸಿಎಂ ಅವರೇ ಜನರನ್ನು ಕಳುಹಿಸುತ್ತಿದ್ದಾರೆ ಎಂದು ನಾನು ಸ್ಪಷ್ಟವಾಗಿ ಹೇಳುತ್ತೇನೆ. ಗೂಂಡಾಗಳು ತಿರುವನಂತಪುರದ ರಸ್ತೆಗಳ ಉಸ್ತುವಾರಿ ವಹಿಸಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಮಸೂದೆಗೆ ಸಹಿ ವಿಳಂಬ: ರಾಜ್ಯಪಾಲ ಆರಿಫ್ ವಿರುದ್ಧ ಸುಪ್ರೀಂಗೆ ಕೇರಳ ಸರ್ಕಾರ

ಕಾಂಗ್ರೆಸ್, ಯುಡಿಎಫ್ ಮತ್ತು ಬಿಜೆಪಿ ಕೂಡ ದಾಳಿಯ ಹಿಂದೆ ಸಿಎಂ ವಿಜಯನ್ ಕೈವಾಡವಿದೆ ಎಂದು ಆರೋಪಿಸಿವೆ. ವಿಧಾನಸಭೆಯಲ್ಲಿ ಅಂಗೀಕಾರವಾದ ಬಾಕಿ ಇರುವ ಮಸೂದೆಗಳ ಕುರಿತು ನಿರ್ಧಾರಗಳನ್ನು ಕೈಗೊಳ್ಳುವ ವಿಚಾರದಲ್ಲಿ ರಾಜ್ಯಪಾಲ ಆರಿಫ್‌ ಮತ್ತು ರಾಜ್ಯ ಸರ್ಕಾರದ ನಡುವೆ ಭಾರೀ ಜಟಾಪಟಿ ಇದೆ.

ಕೇರಳ ಸಿಎಂ ಬೆಂಗಾವಲು ಕಾರಿನ ಮೇಲೆ ಶೂ ಎಸೆದ ಕಾಂಗ್ರೆಸ್‌ ಕಾರ್ಯಕರ್ತರು

ಕೊಚ್ಚಿ: ಕೇರಳ ಮುಖ್ಯಮಂತ್ರಿ ಪಿಣರಾಯ್‌ ವಿಜಯನ್‌ ಅವರ ಬೆಂಗಾವಲು ವಾಹನದ ಮೇಲೆ ಕಾಂಗ್ರೆಸ್ ಪಕ್ಷದ ಯುವ ಘಟಕ ಕೇರಳ ಸ್ಟೂಡೆಂಟ್‌ ಯೂನಿಯನ್‌ನ ಕಾರ್ಯಕರ್ತರು ಶೂ ಎಸೆದ ಘಟನೆ ಕೊಚ್ಚಿ ಬಳಿ ನಡೆದಿದೆ. ಸಿಎಂ ವಿಜಯನ್‌ ಕೋಥಮಂಗಲಂನಿಂದ ಪೆರುಂಬವೂರ್‌ಗೆ ಪ್ರಯಾಣಿಸುತ್ತಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ. ಘಟನೆಯ ಬಳಿಕ ಪೊಲೀಸರು ಕಾರ್ಯಕರ್ತರ ವಿರುದ್ಧ ಬೆತ್ತ ಬಳಕೆ ಮಾಡಿರುವ ವಿಡಿಯೋಗಳು ವೈರಲ್‌ ಆಗಿವೆ. ಈ ಸಂಬಂಧ ಕುರುಪ್ಪಂಪಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭಾರತದ ಅನ್ನ ತಿಂದವರು, ನೀರು ಕುಡಿದವರೆಲ್ಲರೂ ಹಿಂದುಗಳೇ, ನಾನೂ ಕೂಡ ಹಿಂದು: ಆರಿಫ್‌ ಮೊಹಮದ್‌!

Follow Us:
Download App:
  • android
  • ios